ಫೋಟೊಗ್ರಫಿ

	ಸಂವೇದನಶೀಲ ಮೇಲ್ಮೈಗಳ ಮೇಲೆ, ಬೆಳಕು ಇಲ್ಲವೆ ಎಕ್ಸ್‍ಕಿರಣ, ಗ್ಯಾಮಕಿರಣ, ವಿಶ್ವಕಿರಣ ಮುಂತಾದ ವಿಕಿರಣ ಶಕ್ತಿಪ್ರಕಾರಗಳ ರಾಸಾಯನಿಕ ಕ್ರಿಯೆಯಿಂದ ವಸ್ತುವಿನ ಗೋಚರಬಿಂಬವನ್ನು ಪ್ರತ್ಯಕ್ಷವಾಗಿಯಾಗಲಿ ಅಪ್ರತ್ಯಕ್ಷವಾಗಿಯಾಗಲಿ ಮೂಡಿಸುವ ಪ್ರಕ್ರಮಯಾ ಕಲೆ. ಛಾಯಾಚಿತ್ರ ಕಲೆ, ಬಿಂಬಗ್ರಹಣಕಲೆ ಪರ್ಯಾಯ ನಾಮಗಳು. ಫೋಟೊಗ್ರಫಿ 1839ರಿಂದ (ದಗೆರಟೈಪ್ ಸಾಧನದ ಬಳಕೆ) ರೂಢಿಗೆ ಬಂದಿತೆಂದು ಹೇಳಬಹುದಾದರೂ ಅದಕ್ಕೂ ಮುಂಚೆ ಹಲವು ಬಗೆಗಳಲ್ಲಿ ಇದನ್ನು ಕುರಿತ ಅಧ್ಯಯನ, ಪ್ರಯೋಗ, ಪರಿಷ್ಕರಣೆ ನಡೆದಿವೆ. 19ನೆಯ ಶತಮಾನದಲ್ಲಿ ಆದ ಪ್ರವರ್ಧನೆಗಳಲ್ಲಿ ಆವಿಷ್ಕಾರ, ಉಪಜ್ಞೆ, ಪ್ರಯೋಗ, ಪರೀಕ್ಷೆ ಮತ್ತು ಅಭಿವೃದ್ಧಿಕಾರ್ಯಗಳ ಸರಣಿಯೇ ಇತ್ತು. ಚಿತ್ರಗಳನ್ನು ತೆಗೆದು ಪ್ರಸ್ಫುಟನಗೊಳಿಸಿ ಬಿಂಬಗಳನ್ನು ಮುದ್ರಿಸಲು ವಿವಿಧ ಬಗೆಯ ಸಲಕರಣೆಗಳೂ ಸಾಧನಗಳೂ ಬಳಕೆಗೆ ಬಂದವು. 1900ಕ್ಕೂ ಹಿಂದೆ ಛಾಯಾಚಿತ್ರ ಕಲಾವಿದರು ತಮ್ಮ ವೃತ್ತಿಯಲ್ಲಿ ನೈಪುಣ್ಯ ಪಡೆದು ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನಗಳನ್ನು ಗಳಿಸಿದ್ದರು; ಸಂವೇದನಶೀಲ ವಸ್ತುಗಳ ತಯಾರಿಕೆ, ಕೆಮರಗಳ ನಿರ್ಮಾಣ ಮುಂತಾದವೆಲ್ಲ ವ್ಯಾವಹಾರಿಕ ಮಟ್ಟ ತಲಪಿದ್ದುವು. ಭಾವಚಿತ್ರಗಳನ್ನು ರಚಿಸುವುದಕ್ಕೆ ಮಾತ್ರವಲ್ಲದೆ ಚಿತ್ರರಚನೆಯ ಇನ್ನಿತರ ಕೆಲಸಗಳಿಗೂ ಫೋಟೊಗ್ರಫಿಯನ್ನು ಬಳಸಿಕೊಳ್ಳಲಾಗುತ್ತಿತ್ತು. ಸಿ. ಇ. ಕೆ. ಮೀಸ್ ಎಂಬಾತ 1900ರಕ್ಕೂ ಹಿಂದಿನ ಫೋಟೊಗ್ರಫಿಯ ಇತಿಹಾಸವನ್ನು ಮೂರು ಹಂತಗಳಲ್ಲಿ ಸ್ಥೂಲವಾಗಿ ವಿವರಿಸಿದ್ದಾನೆ : 1839-51, ದಗೆರಟೈಪ್ (ಲೋಹ ಫಲಕ) ಮತ್ತು ಕಾಲೊಟೈಪ್ ಪ್ರಕ್ರಮಗಳು (ಕಾಗದ ಋಣಾತ್ಮಕಗಳು, ಕಾಗದ ಮುದ್ರಣಗಳು); 1851-79, ಆಲ್ಬ್ಯುಮೆನ್‍ಲೇಪಿತ ಕಾಗದದ ಮೇಲೆ ಮುದ್ರಿಸಿದ ಚಿತ್ರಗಳನ್ನೂ ಒಳಗೊಂಡ ಆದ್ರ್ರ-ಕಲೋಡಿಯನ್ ಫಲಕ ಪ್ರಕ್ರಮಗಳು; 1879-1900, ಜಿಲಾಟಿನೊ-ಸಿಲ್ವರ್-ಕ್ಲೊರೈಡ್ ಇಲ್ಲವೆ ಜೆಲಾಟಿನ್-ಸಿಲ್ವರ್ ಬ್ರೋಮೈಡ್ ಕಾಗದದ ಮೇಲೆ ಮುದ್ರಿಸಿದ ಚಿತ್ರಗಳನ್ನು ಒಳಗೊಂಡ ಜಿಲಾಟಿನೊ-ಸಿಲ್ವರ್ ಬ್ರೋಮೈಡ್ ಲೇಪನವುಳ್ಳ ಶುಷ್ಕ ಫಲಕಗಳು. 1890ಕ್ಕೂ ಹಿಂದೆ ನಮ್ಯ ಮತ್ತು ಸುರುಳಿ ಸುತ್ತಬಹುದಾದ ಫಿಲ್ಮುಗಳು ಬಳಕೆಗೆ ಬಂದಿದ್ದವು.

	ಪ್ರಸಕ್ತ ಲೇಖನವನ್ನು ಈ ಮುಂದಿನ ವಿಭಾಗಗಳಲ್ಲಿ ಪ್ರಸ್ತುತಪಡಿಸಿದೆ :
ಫೋಟೊಗ್ರಫಿಯ ಇತಿಹಾಸ
ಮೊದಲ ಉಪಕರಣಗಳು ಮತ್ತು ಪ್ರಕ್ರಮಗಳು
ನೈಪ್ಸ ದ ಗೇರ್, ಟಾಲ್‍ಬಟ್ ಮೊದಲಾದವರ ಪ್ರಯತ್ನಗಳು
ಪಿಗ್‍ಮೆಂಟ್ (ಕಾರ್ಬನ್) ಮುದ್ರಣ, ಆದ್ರ್ರ ಮತ್ತು ಶುಷ್ಕ ಕಲೋಡಿಯನ್ ವಿಧಾನಗಳು
ಫಿಲ್ಮುಗಳ ತಯಾರಿಕೆ
ರಸಾಯನ ವೃತ್ತಾಂತ
ಫೋಟೊಗ್ರಫಿಯ ಸಿದ್ಧಾಂತ
ಸುಪ್ತಬಿಂಬದ ಸಿದ್ಧಾಂತ
ಫೋಟೊಗ್ರಾಫಿಕ್ ಪ್ರಸ್ಫುಟನಕಾರಿಗಳು
ಫೋಟೊಗ್ರಾಫಿಕ್ ಎಮಲ್ಶನ್ನುಗಳು
ಪ್ರಸ್ಫುಟನೆಯ ಸಿದ್ಧಾಂತ
ಸ್ಥಾಯೀಕರಣ
ತೊಳೆಯುವಿಕೆ
ಫೋಟೊಗ್ರಫಿಯ ವಿಭಾಗಗಳು
ಅತಿರಕ್ತ ಫೋಟೊಗ್ರಫಿ
ಅತಿನೇರಿಳೆ ಫೋಟೊಗ್ರಫಿ
ಅಧಿಕ ವೇಗ ಫೋಟೊಗ್ರಫಿ
ಸ್ಟಿಯರಿಯೊಸ್ಕೋಪಿಕ್ ಫೋಟೊಗ್ರಫಿ
ದಾಖಲುಪತ್ರಗಳ ನಿಜಪ್ರತೀಕರಣ ; ಜಿರಾಗ್ರಫಿ
ಫೋಟೊಗ್ರಾಫಿಕ್ ಫೋಟೊಮೆಟ್ರಿ
ಮೈಕ್ರೊಫೋಟೊಗ್ರಫಿ
ರೇಡಿಯೊಗ್ರಫಿ
ಚಲಚ್ಚಿತ್ರ ನಿರ್ಮಾಣ ತಂತ್ರ
ಏರಿಯಲ್ ಫೋಟೊಗ್ರಫಿ
ಜಿರಾಗ್ರಫಿ
ವರ್ಣ ಫೋಟೊಗ್ರಫಿ
ಸಾಧನ-ಸಲಕರಣೆಗಳು
ಕೆಮರ
ಪ್ರವರ್ಧಕ
ಎಕ್ಸಪೋಷರ್ ಮಾಪಕ
ಮಸೂರಗಳು
ಇತರ ಸಲಕರಣೆಗಳು

ಫೋಟೊಗ್ರಫಿಯ ಇತಿಹಾಸ

	(i) ಮೊದಲ ಉಪಕರಣಗಳು ಮತ್ತು ಪ್ರಕ್ರಮಗಳು : ಫೋಟೊಗ್ರಫಿ ಕಲೆಯನ್ನು ನಿರೂಪಿಸುವ ನಿಸರ್ಗನಿಯಮಗಳು ಬಿಂಬಮೂಡಿಸುವ ಸಾಮಥ್ರ್ಯವುಳ್ಳ ಬೆಳಕಿನ ಸ್ವರೂಪ, ಮುಂತಾದವನ್ನು ಪ್ರಾಚೀನ ಮಾನವ ಬಹುಶಃ ಮೊದಲೇ ಅರಿತುಕೊಂಡಿದ್ದ. ಬಿಂಬ ತಲೆಕೆಳಗಾಗಿ ಮೂಡುವುದರ ಕಾರಣ ಏನು ಎಂಬುದು ಅವನಿಗಿದ್ದ ಆಗಿನ ಸೀಮಿತಜ್ಞಾನದ ಕಾರಣವಾಗಿ ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಬಿಂಬರೂಪಣೆಯ ಸ್ವರೂಪವನ್ನು ತಾನೇ ರೂಪಿಸಿಕೊಂಡ ಉಪಕರಣಗಳ ಸಹಾಯದಿಂದ ಅರಿಯುವುದು ಸಾಧ್ಯವಾಯಿತು. ಸೂಜಿರಂಧ್ರದ (ಪಿನ್‍ಹೋಲ್) ತತ್ತ್ವ ಬಳಸಿ, ವಸ್ತುವಿನ ಬಿಂಬ ಮೂಡಿಸುವ ಉಪಕರಣದ ವಿಚಾರ ಗ್ರೀಕ್ ತತ್ತ್ವಜ್ಞಾನಿ ಅರಿಸ್ಟಾಟಲನಿಗೆ (ಕ್ರಿ. ಪೂ. 384-322) ತಿಳಿದಿತ್ತು. ಇದೇ ಮುಂದೆ 16ನೆಯ ಶತಮಾನದಲ್ಲಿ ಕೆಮರ ಅಬ್‍ಸ್ಕ್ಯೂರ ಎಂಬ ಹೆಸರು ಪಡೆಯಿತು. ಇಟ್ಯಾಲಿಯನ್ ಭಾಷೆಯಲ್ಲಿ ಕತ್ತಲಕೋಣೆ ಎಂದು ಇದರ ಅರ್ಥ ಈ ಉಪಕರಣವನ್ನು ಬಳಸಿಕೊಂಡುವರಲ್ಲಿ ಇಟ್ಯಾಲಿಯನ್ ಪುನರುತ್ಥಾನ ಅವಧಿಯ ಖ್ಯಾತ ಕಲಾವಿದರೂ ಸೇರಿದ್ದರು. ವೆನಿಸ್ ನಗರದ ವರ್ಣಚಿತ್ರಗಳನ್ನು ರಚಿಸಲು ಫ್ರಾನ್ಸ್‍ಸ್ಕಾಗ್ವಾರ್ಡೀ (1712-93) ಆಂಟೋನಿಯೊ ಕ್ಯಾನಲೆಟಾ (1697-1768) ಮೊದಲಾದ ಕಲಾವಿದರು ಈ ಉಪಕರಣ ಬಳಸಿದ್ದರೆಂದು ತಿಳಿದುಬಂದಿದೆ. ಇತರ ಉಪಯೋಗವನ್ನು ಮೊತ್ತ ಮೊದಲ್ಲಿಗೆ (1490) ಮನಗಂಡವನೆಂದರೆ ಇಟಲಿಯ ಖ್ಯಾತ ಚಿತ್ರಕಲಾವಿದ ಲೀಯೊನಾರ್ಡೊದ ವಿಂಚಿ (1452-1519). ಬಿಂಬವನ್ನು ಸ್ಫುಟಗೊಳಿಸಲು ಎರಡು ಮೂಲಭೂತ ಪರಿಷ್ಕಾರಗಳನ್ನು ಮುಂದಿನ 50 ವರ್ಷಗಳಲ್ಲಿ ಸಾಧಿಸಲಾಯಿತು. ಮೊದಲನೆಯ ಮಸೂರದ ಅಳವಡಿಕೆ. ಗಿರೊಲಾಮೋ ಕಾರ್ಡಾನೋ ಎಂಬವ ದೃಷ್ಟಿದೋಷ ಹೊಗಲಾಡಿಸಲು ಮಸೂರಗಳ ಬಳಕೆಯ ವಿಚಾರ 1550ರಷ್ಟು ಹಿಂದೆಯೇ ತಿಳಿದಿದ್ದ. ಎರಡನೆಯದು ಪೊರೆ (ಡಯಾಫ್ರಮ್) ಅಳವಡಿಕೆ ಇದನ್ನು 1530ರ ದಶಕಗಳಲ್ಲಿ ಡೇನಿಲೇ ಬಾರ್ಬರೊ ಎಂಬ ಉಪಜ್ಞಿಸಿದವ.
	
ಕಾಡುತ್ತಿದ್ದ ಘನ ರೂಪಗ್ರಹಿಕೆಯ ಸಮಸ್ಯೆ, ದೃಶ್ಯಾವಳಿಗಳ ತದ್ವತ್ ಚಿತ್ರಣ ಇತ್ಯಾದಿಗಳ ವಿಚಾರದಲ್ಲಿ ಕೆಮರ ಅಬ್‍ಸ್ಕ್ಯೂರ ಉಪಕರಣ ಬಹಳಷ್ಟು ಸಹಾಯಕ್ಕೆ ಬರುವುದನ್ನು ಮನಗಂಡ ಕಲಾವಿದರು ತಮ್ಮ ಜೊತೆ ಒಯ್ಯಬಹುದಾದ ಕತ್ತಲ ಕೋಣೆಯ ಅಗತ್ಯವನ್ನು ಕಂಡುಕೊಂಡರು. ಹೀಗಾಗಿ ಮೂಲಭೂತ ಅಂಗ ಭಾಗಗಳಾದ ಮಸೂರ, ಪೊರೆ ಮತ್ತು ಬಿಂಬ ಮೂಡಿಸಲು ಬೇಕಾದ ಹಾಳೆ ಇರುವ, ಒಯ್ಯಬಹುದಾದ ಆಧುನಿಕ ಕೆಮರದ ಅಭಿವರ್ಧನೆ ಮುಂದಿನ ಹಂತದ್ದಾಯಿತು.

	ಈ ಅಭಿವರ್ಧನೆಯ ವಿಚಾರ ಯೂರೋಪಿನಲ್ಲೆಲ್ಲ ಹರಡಿತು. ಅತಾನಾಸಿಯಸ್ ಕಿರ್ಚರ್ ಎಂಬ ಜರ್ಮನ್ ಪಂಡಿತ ಒಯ್ಯಬಹುದಾದ ಕೆಮರವನ್ನು ತಾನು ನೋಡಿರುವುದಾಗಿ ತಿಳಿಸಿದುದಲ್ಲದೆ ಅಂಥದೊಂದು ಏರ್ಪಾಡಿನ ಚಿತ್ರವನ್ನೂ ಬಿಡಿಸಿದ್ದ. ಗುಡಾರದಂತೆ ಕಾಣುತ್ತಿತ್ತು ಆ ವ್ಯವಸ್ಥೆ. ಮುಂದೆ ಕೆಮರದ ಆಕಾರ ಮತ್ತು ಗಾತ್ರಗಳಲ್ಲಿ ಬದಲಾವಣೆಗಳು ಕಂಡುಬಂದವು. ತಲೆಕೆಳಗಾಗಿ ಕಾಣುವ ಬಿಂಬವನ್ನು ನೆಟ್ಟಗೆ ಮೂಡಿಸುವ ಸಲುವಾಗಿ ಜರ್ಮನಿಯ ಗಣಿತ ಪ್ರಾಧ್ಯಾಪಕ ಯೋಹಾನ್ ಸ್ಪುರ್ಮ್ ಎಂಬುವ 1676ರಲ್ಲಿ ಸಮತಳ ಕನ್ನಡಿಯೊಂದನ್ನು 45ಲಿ ಕೋನದಲ್ಲಿ ಮಾಲಿರುವಂತೆ ಕೆಮರದೊಳಗೆ ಅಳವಡಿಸಿದ. ಇದರಿಂದ ಪ್ರತಿಫಲಿತ ನೆಟ್ಟನೆಯ ಬಿಂಬ ಮೂಡುವುದು ಸಾಧ್ಯವಾಯಿತು. ಅನಪೇಕ್ಷಿತ ಬೆಳಕು ಬರದಹಾಗೆ ಬಿಂಬದ ದೃಷ್ಟಿಸ್ಫುಟತೆಯನ್ನು ಉತ್ತಮ ಪಡಿಸಲು ಕೆಮರಕ್ಕೆ ಛಜ್ಜಾವನ್ನು (ಹುಡ್) ಹೊಂದಿಸಿದ. ಛಜ್ಜಾ ಮಾಡುವ ಕೆಲಸ ಫೋಟೊತೆಗೆಯುವಾಗ ಸಾಮಾನ್ಯವಾಗಿ ಬಳಸುವ ಕಪ್ಪನೆಯ ಬಟ್ಟೆ ಮಾಡುವ ಕೆಲಸಕ್ಕೆ ಸಂವಾದಿಯಾಗಿತ್ತು. ಇದೇ ಮೊತ್ತಮೊದಲ ಒಯ್ಯಬಹುದಾದ, ಪ್ರತಿಫಲನ ಮಾದರಿಯ (ರಿಫ್ಲೆಕ್ಸ) ಕೆಮರ. ಮುಂದೆ ಒಂದು ಶತಮಾನದ ಅನಂತರ ಕೆಮರವನ್ನು ಯೋಹಾನ್ ಜಾನ್ ಎಂಬ ಸಂನ್ಯಾಸಿ ಪರಿಷ್ಕರಿಸಿದ. ಕೆಮರದಲ್ಲಿಯ ಸಾಮಾನ್ಯ ಎಣ್ಣೆಕಾಗದದ ಬದಲಿಗೆ ಸಿಲಿಕಶಿಲೆಯ ಗಾಜನ್ನೂ (ಓಪಲ್‍ಗ್ಲಾಸ್) ಒಂದೇ ಒಂದು ಮಸೂರದ ಬದಲಿಗೆ ಬೇರೆ ಬೇರೆ ಸಂಗಮದೂರದ ಉಬ್ಬು ಮಸೂರ ಹಾಗೂ ನಿಮ್ನ ಮಸೂರಗಳಿರುವ ಜೊತೆಯನ್ನೂ ಅಳವಡಿಸಿದ. ಇದರಿಂದ ಪ್ರವರ್ಧಿತ ಬಿಂಬಗಳನ್ನು ಪಡೆಯುವುದು ಸಾಧ್ಯವಾಯಿತು.

	ಕೆಮರ ಅಬ್‍ಸ್ಕ್ಯೂರ ಸಲಕರಣೆಯನ್ನು ಪರಿಷ್ಕರಿಸಿದ 17ನೆಯ ಶತಮಾನದ ವಿಜ್ಞಾನಿಗಳಾಗಲಿ ಇದನ್ನು ಬಳಸುತ್ತಿದ್ದ ಕಲಾವಿದರಾಗಲಿ ಸ್ಥಾಯೀಬಿಂಬವನ್ನು ಪಡೆದುಕೊಳ್ಳುವ ಪ್ರಯತ್ನಗಳನ್ನು ಮಾಡಿದಂತೆ ಕಂಡುಬರುವುದಿಲ್ಲ. ಅವರಿಗೆ ಅಂಥ ಅಗತ್ಯವೂ ಉಂಟಾಗಿರಲಿಲ್ಲ, ಕಾಲಕ್ರಮೇಣ ವಿಜ್ಞಾನಿಗಳು ನವೀನ ದೃಗುಪಕರಣವನ್ನು ನಿರ್ಮಿಸಿದ್ದರಿಂದ ಎರಡು ಆಯಾಮಗಳ ಮತ್ತು ಹಿಂದೆ ಮೂಡಿದುದಕ್ಕಿಂತಲೂ ಬಹುಪಟ್ಟು ಹಿಚ್ಚಿನ ನೈಜಸ್ವರೂಪದ ಬಿಂಬಗಳನ್ನು ಪಡೆಯುವುದು ಸಾಧ್ಯವಾಯಿತು.
	ಜರ್ಮನಿಯ ಅಂಗರಚನಾವಿಜ್ಞಾನದ ಪ್ರಾಧ್ಯಾಪಕ ಯೋಹಾನ್ ಷೂಲ್ಜ್ ಎಂಬುವ 1727ರಲ್ಲಿ ರಂಜಕದ ತಯಾರಿಕೆಗೆ ಸಂಬಂಧಿಸಿದ ಪ್ರಯೋಗವೊಂದನ್ನು ಮಾಡುತ್ತಿದ್ದ. ನೈಟ್ರಿಕ್ ಆಮ್ಲದಲ್ಲಿ ಚಾಕ್‍ವಸ್ತುವಿನ ಒತ್ತರವನ್ನು (ಪ್ರೆಸಿಪಿಟೇಟ್) ಉಂಟುಮಾಡುತ್ತಿದ್ದ ಆ ವೇಳೆ ಅವನ ಪ್ರಯೋಗಾಲಯದ ಕಿಟಕಿಯ ಬಳಿ ಇಟ್ಟಿದ್ದ ರಾಸಾಯನಿಕವೊಂದು ಊದಾ ಬಣ್ಣಕ್ಕೆ ತಿರುಗಿತು. ವರ್ಜನೆಯ ವಿಧಾನದಿಂದ ಆಮ್ಲದಲ್ಲಿ ಬೆಳ್ಳಿಯ (ಸಿಲ್ವರ್) ಕುರುಹು ಇರುವುದನ್ನು ಆವಿಷ್ಕರಿಸಿದ. ಪ್ರಬಲ ಬೆಳಕಿಗೆ ಒಡ್ಡಿದಾಗ ಸಿಲ್ವರ್ ಲವಣಗಳು ಕಪ್ಪಗಾಗುತ್ತವೆ ಎಂದು ತಿಳಿಯಿತು. ಇದು ಮಹತ್ವದ ಶೋಧವಾಗಿದ್ದರೂ ಇದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಈತನಿಗೆ ತಿಳಿಯದಾಯಿತು.

	ಜೀನ್ ಹೆಲಾಟ್ ಎಂಬುವ 1737ರಲ್ಲಿ ಕಾಗದದ ಮೇಲೆ ಸಿಲ್ವರ್ ನೈಟ್ರೇಟ್ ದ್ರಾವಣದ ಲೇಪನ ಮಾಡಿ ಪ್ರಯೋಗಗಳನ್ನು ಮುಂದುವರಿಸಿದ. ನಲವತ್ತು ವರ್ಷ ಸಂದಾಗ ಸ್ವೀಡನ್ನಿನ ರಸಾಯನವಿಜ್ಞಾನಿ ಕಾರ್ಲ್ ವಿಲ್‍ಹೆಲ್ಮ್ ಷೇಲ (1742-86) ಎಂಬವ ಸಿಲ್ವರ್ ಕ್ಲೋರೆಡನ್ನು ಬಳಸಿ ಬೆಳಕಿನ ರೋಹಿತದ ನೇರಳೆ ಕಿರಣಗಳಿಗೆ ಈ ರಸಾಯನ ವಸ್ತು ಸಂವೇನಶೀಲವಾಗಿರುವುದನ್ನು (ಸೆನ್ಸಿಟಿವ್) ಪತ್ತೆ ಮಾಡಿದ. ಸ್ಥಾಯೀಕಾರಕವಾಗಿ ವರ್ತಿಸುವ ಅಮೊನಿತ ದ್ರಾವಣದಲ್ಲಿ ಕಪ್ಪಗಾಗುವ ಸಿಲ್ವರ್ ಕ್ಲೋರೈಡ್ ಲೀನವಾಗದಿರುವುದನ್ನೂ ಷೇಲ ಕಂಡುಕೊಂಡ.

	ಸಿಲ್ವರ್ ಲವಣಗಳು ಬೆಳಕಿಗೆ ಸಂವೇದನಶೇಲ ಎಂಬ ಸಂಗತಿ ಬೆಳಕಿನಿಂದ ಬರಹ ಎಂಬ ಪರಿಕಲ್ಪನೆಯನ್ನು ಮೂಡಿಸಿತು. ಈ ನಿಟ್ಟಿನಲ್ಲಿ ಹೆಲಾಟನ ಪ್ರಯೋಗಗಳೇ ಫೋಟೊಗ್ರಫಿ (ದ್ಯುತಿಲೇಖನ) ಎಂಬ ಶಬ್ದದ ಉಗಮಕ್ಕೆ ಎಡೆಮಾಡಿಕೊಟ್ಟಿದ್ದುವು : ಸಿಲ್ವರ್‍ನೈಟ್ರೇಟ್ ದ್ರಾವಣ ಲೇಪಿಸಿರುವ ಕಾಗದವನ್ನು ಸೂರ್ಯನ ಬೆಳಕಿಗೆ ಒಡ್ಡದಿರುವ ತನಕವೂ ಅದು ತನ್ನ ಮೇಲ್ಮೈಯ ಗುಟ್ಟನ್ನು ಬಿಟ್ಟು ಕೊಡದು ಎಂಬುದೇ ಇವುಗಳ ತತ್ತ್ವ.
	ಕೆಮರ ಅಬ್‍ಸ್ಕ್ಯೂರ ಉಪಕರಣದಲ್ಲಿಯ ಫಲಕಗಳಿಗೆ ದ್ಯುತಿಸಂವೇದನಶೀಲ ರಾಸಾಯನಿಕಗಳನ್ನು ಬಳಸಬಹುದೆಂದು ಮೊತ್ತಮೊದಲಿಗೆ (1802) ಸೂಚಿಸಿದವ ತಾಮಸ್ ವೆಜ್‍ವುಡ್. ಇವನ ತಂದೆ ಜೋಸಯ ಚೀನ ಪಿಂಗಾಣಿ ವಸ್ತುಗಳ ಮೇಲೆ ನಿಖರ ಚಿತ್ರಗಳನ್ನು ಮೂಡಿಸಲು ಕೆಮರ ಅಬ್‍ಸ್ಕ್ಯೂರ ಉಪಕರಣವನ್ನು ಬಳಸಿದ. ಎಂದೇ ಅಣುಗ ವೆಜ್‍ವುಡ್ಡನಿಗೆ ಇದರತ್ತ ಸಹಜ ಒಲವು ಮೂಡಿತ್ತು. ಷೇಲ ನಡೆಸಿದ ಪ್ರಯೋಗಗಳನ್ನು ಆಧರಿಸಿದಂತೆ, ಈತನೂ ತನ್ನ ಸಂಶೋಧನೆಗಳನ್ನು ಮುಂದುವರಿಸಿ ಎಲೆಗಳ ಮತ್ತು ಕೀಟಗಳ ರೆಕ್ಕೆಗಳ ಬಿಂಬವನ್ನು, ಸಿಲ್ವರ್ ನೈಟ್ರೇಟ್ ಲೇಪಿತ ಬಿಳಿಯ ತೊಗಲಿನ ಮೇಲೆ ಮೂಡಿಸಿದ. ಕೆಮರ ಅಬ್‍ಸ್ಕ್ಯೂರವನ್ನು ಬಳಸಿ ವಸ್ತುಗಳ ಶಾಶ್ವತಬಿಂಬ ಪಡೆಯುವುದು ಇವನಿಗಾಗಲಿ ಇವನ ಸಹೋದ್ಯೋಗಿ ಮಿತ್ರ ರಸಾಯನವಿಜ್ಞಾನಿ ಹಂಫ್ರಿ ಡೇವಿಗಾಗಲಿ ಸಾಧ್ಯವಾಗಲಿಲ್ಲ. ಬಿಂಬವನ್ನು ದೃಢಗೊಳಿಸಲೂ (ಹಾರ್ಡ್‍ನ್) ಸ್ಥಾಯೀಕರಿಸಲೂ ಅಗತ್ಯವಾದ ಕಾರೆಕಗಳ ಕೊರತೆಯೇ ಇದರ ಕಾರಣ.
	(ii) ನ್ಯೆಪ್ಸ್‍ದ ಗೇರ್ ಟಾಲಬಟ್ ಮೊದಲಾದವರ ಪ್ರಯತ್ನಗಳು: ದೃಢಗೊಳಿಸುವ ಹಾಗೂ ಸ್ಥಾಯೀಕರಿಸುವ ಸಮಸ್ಯೆಗೆ ಪರಿಹಾರ ಕಂಡುಕೊಂಡವ, ಫ್ರಂಚ್ ಉಪಜ್ಞೆಕಾರ ಜೋಸೆಫ್ ನೀಸೇಫಾರ್ ನ್ಯೆಪ್ಸ್ (1765-1833). ಮೊದಲಿಗೆ ಬಿಂಬವನ್ನು ದೃಢಗೊಳಿಸಲು ಸಫಲನಾಗದಿದ್ದರೂ ಬಳಿಕ ತನ್ನ ಸಹೋದರ ಕ್ಲಾಡ್ ಎಂಬವನೊಡಗೂಡಿ ಪ್ರಯೋಗಗಳನ್ನು ಮುಂದುವರಿಸಿದ ಗಾಜಿನ ಫಲಕಗಳ ಮೇಲೆ ಜೂಡಿಯನ್ ಬಿಟ್ಯುಮೆನ್ ಎಂಬ ಪದಾರ್ಥ ಲೇಪಿಸಿ, ಅವನ್ನು ಬೆಳಕಿಗೆ ಒಡ್ಡಿದಾಗ ಅವು ದೃಢsವಾಗುವುವಲ್ಲದೆ ಬಣ್ಣ ಕಳೆದುಕೊಂಡು ಬೆಳ್ಳಗಾಗುತ್ತವೆ ಕೂಡ ಎಂಬ ಅಂಶ ಕಂಡುಕೊಂಡ. ಅನಂತರ 1820ರ ದಶಕಗಳಲ್ಲಿ ನ್ಯೆಪ್ಸ್ ಹೀಲಿಯೊಗ್ರಫಿ ವಿಧಾನ ಅನುಸರಿಸಿ ಶಾಶ್ವತ ಫೋಟೊಗ್ರಾಫಿಕ್ ಬಿಂಬಗಳನ್ನು ಮೂಡಿಸುವುದರಲ್ಲಿ ಯಶಸ್ವಿಯಾದ. ಸ್ಫುಟತೆ ಮತ್ತು ವೈದೃಶ್ಯಗಳಲ್ಲಿಯ ಕೊರತೆಗಳಿಂದಾಗಿ ಇಷ್ಟಾದರೂ ಈತ ಮೂಡಿಸಿದ ಬಿಂಬಗಳು ಅಷ್ಟೇನೂ ತೃಪ್ತಿಕರವಾಗಿರಲಿಲ್ಲ. ಮುಂದೆ ನ್ಯೆಪ್ಸ್‍ನ ಸಹೋದ್ಯೋಗಿ ಲ್ವೀಜಾಕ್ ಮಾಂಡೇ ದ ಗೇರ್ (1789-1851) ಎಂಬ ಫ್ರೆಂಚ್ ಕಲಾವಿದ ಹಾಗೂ ಉಪಜ್ಞೆಕಾರ ತನ್ನ ದಗೆರಟೈಪ್ ವಿಧಾನವನ್ನು ಬಳಸಿ ಈ ಕೊರತೆಗಳನ್ನು ಬಹುವಾಗಿ ನಿವಾರಿಸಿದ. ಅಯೋಡೀನ್ ಧೂಪಕ್ಕೆ ಒಡ್ಡಿದಬೆಳ್ಳಿಯ ಫಲಕವನ್ನು ಕೆಮರ ಅಬ್‍ಸ್ಕ್ಯೂರದಲ್ಲಿ ಇಟ್ಟು ಚಿತ್ರೀಕರಿಸಿ ಅನಂತರ ಅದನ್ನು ಪಾದರಸದ ಧೂಪದಲ್ಲಿ ಪ್ರಸ್ಫುಟನಗೊಳಿಸಿದಾಗ ಶಾಶ್ವತಬಿಂಬ ಮೂಡಿದ್ದನ್ನು ದ ಗೇರ್ ಕಂಡುಕೊಂಡ (1839). ಈತನ ವಿಧಾನ ಜನಪ್ರಿಯವಾಗಿ ಯೂರೊಪ್ ಮತ್ತು ಅಮೆರಿಕದ ನಗರಗಳಲ್ಲಿ ಇದನ್ನು ಎಸಗುವ ಕೇಂದ್ರಗಳು ಹುಟ್ಟಿಕೊಂಡವು. ಈ ವಿಧಾನ ದಗೆರಟೈಪ್ ವಿಧಾನವೆಂದೇ ಹೆಸರುವಾಸಿಯಾಯಿತು. ಜಪಾನು, ಚೀನಗಳಲ್ಲಿ ದಗೆರಟೈಪ್ ಕಲಾವಿದರು ಈ ಉಪಕರಣ ಬಳಸಿ ಶ್ರೀಮಂತರ ಭಾವಚಿತ್ರಗಳನ್ನು ರಚಿಸಿಕೊಟ್ಟರು. ಇವನ್ನು ನೋಡಿದ ಪಾಲ್ ಡಿಲರೊಷೆ ಎಂಬ ಕಲಾವಿದ ಇಂದಿನಿಂದ ಚಿತ್ರಕಲೆ ಸಾವನ್ನಪ್ಪಿತು ಎಂಬ ಉದ್ಗಾರಗೈದನಂತೆ.
	1839 ಆಗಸ್ಟ್ 19ರಂದು ಗೇರ್ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಫ್ರೆಂಚ್ ವಿಜ್ಞಾನ ಅಕಾಡಮಿಯಲ್ಲಿ ತಾನು ರೂಪಿಸಿರುವ ತಂತ್ರ ವಿಧಾನವನ್ನು ಮಂಡಿಸಿದ. ಇದಾದ ಒಂದು ತಾಸಿನ ಅನಂತರ ನಗರದ ಪ್ರತಿಯೊಂದು ಕನ್ನಡಕದ ಅಂಗಡಿಯವರೂ ಹೊಸ ಸಾಧನ ಪಡೆಯುವ ಸಲುವಾಗಿ ಬೇಡಿಕೆ ಸಲ್ಲಿಸಿದರಂತೆ. ದಿ ಹಿಸ್ಟೊರಿ ಅಂಡ್ ಡಿಸ್ಕ್ರಿಪ್‍ಷನ್ ಆಫ್ ಪ್ರೊಸೆಸ್ ನೇಮ್ಡ್ ದಿ ದಗೆರಟೈಪ್ ಎಂಬ ಕಿರುಪುಸ್ತಿಕೆಯನ್ನು ದ ಗೇರ್ ಪ್ರಕಟಿಸಿದ. ಇದರಲ್ಲಿ ಉಪಕರಣದ ಆಲೇಖ್ಯಗಳೂ, ನಕ್ಷಾನಿರೂಪಣೆಗಳೂ ಇದ್ದುವು. ಈ ಪುಸ್ತಕದ ಅನುವಾದ ಮತ್ತು ಭಾಷ್ಯ ಪ್ರಕಟವಾದುವು. ಇದು ದೃಷ್ಟಿ ಸಂವಹನ ಮತ್ತು ಪ್ರಲೇಖನಕ್ಕೆ ಹೊಸ ಮಾಧ್ಯಮ ಒದಗಿಸಿತು.
	ದ ಗೇರ್ ಸೂಚಿಸಿದ ವಿಧಾನದಿಂದ ತೆಗೆದ ಮೊತ್ತಮೊದಲ ಚಿತ್ರಗಳ ಪೈಕಿ ನಿಸರ್ಗದೃಶ್ಯಗಳು ಕಟ್ಟಡಗಳು, ಸ್ಮಾರಕಗಳು ಮೊದಲಾದವು ಇದ್ದುವು. 1840ರಲ್ಲಿ ಲಂಡನ್ನಿನ ಗೊಡಾರ್ಡ್ ಎಂಬವ ಸಿಲ್ವರ್ ಬ್ರೋಮೈಡ್ ಮತ್ತು ಸಿಲ್ವರ್ ಅಯೊಡೈಡ್ ದ್ರಾವಣಗಳನ್ನು ಬಳಸುವುದರಿಂದ ಚಿತ್ರಗಳನ್ನು ತ್ವರಿತವಾಗಿ ಸೆರೆಹಿಡಿಯಬಹುದಾದ ವಿಧಾನ ಸೂಚಿಸಿದ. ಇದನ್ನು ಬಳಸಿ ಚಿತ್ರ ತೆಗೆಯುವ ಸ್ಟುಡಿಯೋಗಳು (ಕಲಾಮಂದಿರಗಳು) ಲಂಡನ್, ನ್ಯೂಯಾರ್ಕ್ ಮತ್ತು ಫಿಲಡಿಲ್ಫಿಯಗಳಲ್ಲಿ ಪಾರಂಭವಾದುವು. 10-15 ಸೆಕೆಂಡುಗಳ ಅವಧಿಯಲ್ಲಿ ಚಿತ್ರಗಳನ್ನು ಸೂರ್ಯಬೆಳಕಿನ ನೆರವಿನಿಂದ ಸ್ಟುಡಿಯೋದ ಆವರಣದಲ್ಲೇಸೆರೆಹಿಡಿಯುವಕ್ರಮ ಜಾರಿಗೆ ಬಂತು (1841). ಕ್ಷಿಪ್ರ ಅವಧಿಯಲ್ಲಿ ಚಿತ್ರಗಳು ತಯಾರಾಗುತ್ತಿದ್ದುದರಿಂದ ಇದಕ್ಕೆ ಜನಪ್ರಿಯತೆಯೂ ಒದಗಿತು. 1853ರ ಸುಮಾರಿಗೆ ಅಮೆರಿಕ ದೇಶ ಒಂದರಲ್ಲೇ ಮೂವತ್ತು ಲಕ್ಷದಷ್ಟು ದ ಗೇರ್ ಚಿತ್ರಗಳು ಮಾರಾಟವಾದುವಂತೆ.
	ಇಂಗ್ಲೆಂಡಿನ ಗಣಿತವಿದ ವಿಲಿಯಮ್ ಹೆನ್ರಿ ಫ್ರಾಕ್ಸ್ ಟಾಲ್‍ಬಟ್ ಎಂಬವ 1833ರಷ್ಟು ಹಿಂದಿನಿಂದಲೇ ವೆಜ್‍ವುಡ್, ನ್ಯೆಪ್ಸ್ ಮತ್ತು ದ ಗೇರ್ ಅವರು ನಿರೂಪಿಸಿದ ವಿಧಾನ ಮತ್ತು ತಂತ್ರ ಕುರಿತು ಆಲೋಚಿಸುತ್ತಿದ್ದನಾದರೂ ಅವುಗಳ ಸಾಧನೆಬಗ್ಗೆ ಇವನಿಗೆ ಏನೂತಿಳಿದಿರಲಿಲ್ಲ. ಅಡುಗೆ ಉಪ್ಪು ಮತ್ತು ಸಿಲ್ವರ್ ನೈಟ್ರೇಟುಗಳ ದ್ರಾವಣ ಮಿಶ್ರಣವನ್ನು ಕಾಗದದ ಮೇಲೆ ಲೇಪಿಸಿ ವೆಜ್‍ವುಡ್ ನಿರೂಪಿಸಿದ ಕ್ರಮದಂತೆಯೇ ಋಣಾತ್ಮಕ ಬಿಂಬಗಳನ್ನು ಪಡೆಯುವಲ್ಲಿ ಈತ ಯಶಸ್ವಿಯಾದ. ಋಣಾತ್ಮಕದ ಸಂಸ್ಪರ್ಶದಲ್ಲಿ ಸಂವೇದನಶೀಲ ಕಾಗದ ಇಟ್ಟು, ಅದರ ಮೂಲಕ ಬೆಳಕು ಹರಿಯುವಂತೆ ಮಾಡಿ ಧನಾತ್ಮಕಗಳನ್ನು ತಯಾರಿಸಿದ. ಮೊದಮೊದಲಿಗೆ ಕಾಗದದ ಗ್ರಹಣ ಸಾಮಥ್ರ್ಯ ಅಷ್ಟೇನೂ ಉತ್ತಮತರವಾಗಿಲ್ಲದಿದ್ದು ಚಿತ್ರಗಳು ಅಷ್ಟು ಸ್ಪಷ್ಟವಾಗಿ ಮೂಡುತ್ತಿರಲಿಲ್ಲ. ಬೇರೆ ಬೇರೆ ಪ್ರಮಾಣಗಳಲ್ಲಿ ಉಪ್ಪು ಮತ್ತು ಸಿಲ್ವರ್ ನೈಟ್ರೇಟುಗಳನ್ನು ಬೆರೆಸಿದಾಗ ಉಪ್ಪು ಪ್ರತಿಬಂಧಕವಾಗಿ ವರ್ತಿಸುವುದು ಅವನ ಗಮನಕ್ಕೆ ಬಂತು. ಉಪ್ಪಿನ ದುರ್ಬಲ ದ್ರಾವಣ ಮತ್ತು ಪ್ರಬಲ ಸಿಲ್ವರ್ ನೈಟ್ರೇಟುಗಳ ದ್ರಾವಣಗಳನ್ನು ಬೆರೆಸಿ ಆ ಮಿಶ್ರಣವನ್ನು ಕಾಗದದ ಮೇಲೆ ಲೇಪಿಸಿದ. 1835ರಲ್ಲಿ ಕೆಮರ ಅಬ್‍ಸ್ಕ್ಯೂರವನ್ನು ಬಳಸಿ ಮೊತ್ತಮೊದಲ ಋಣಾತ್ಮಕ ಚಿತ್ರ ತಯಾರಿಸಿದ. ಈ ಮಧೈ ಪ್ಯಾರಿಸಿನಲ್ಲಿ ಹಿಪ್ಪೊಲೈಟ್ ಬಹಾರ್ಡ್ ಎಂಬವ ಸಿಲ್ವರ್‍ಕ್ಲ್ಲೋರೈಡ್ ಕಾಗದ ಬಳಸಿ ಕೆಮರದಿಂದ ನೇರ ಧನಾತ್ಮಕ ಚಿತ್ರ ಪಡೆಯುವ ಪ್ರಯೋಗಮಾಡುತ್ತಿದ್ದ. 1839ರಲ್ಲಿ ಯಶಸ್ಸುಗಳಿಸಿದ. ಇವನಿಗೂ ಟಾಲ್‍ಬಟ್ ಮತ್ತು ದ ಗೇರ್ ಅವರಿಗೂ ಪರಿಚಯ ಇರಲಿಲ್ಲ. ದ ಗೇರನಿಗೆ ಲಭಿಸಿದ ಪ್ರಚಂಡ ಜನಪ್ರಿಯತೆಯ ಸಲುವಾಗಿ ಟಾಲ್‍ಬಟ್ಟನಾಗಲಿ ಬಯಾರ್ಡನಾಗಲಿ ತಮ್ಮ ತಮ್ಮ ವೈಯಕ್ತಿಕ ಉಪಜ್ಞೆಗಳ ಆದ್ಯತೆ ಸ್ಥಾಪಿಸುವುದರಲ್ಲಿ ವಿಫಲರಾದರು. ಫಾಕ್ಸ್ ಟಾಲ್‍ಬಟ್ಟನ ಋಣಾತ್ಮಕಗಳು ಸಾಮಥ್ರ್ಯಯುತವಾಗಿದ್ದುವು. ಆದರೆ ಧನಾತ್ಮಕಗಳು ಅಷ್ಟೇ ಕಳಪೆಯಾಗಿದ್ದುವು. ಕೆಲವೊಂದು ಸಂದರ್ಭಗಳಲ್ಲಿ ದಗೆರಟೈಪ್ ಚಿತ್ರಗಳಿಗಿಂತಲೂ ಬಯಾರ್ಡನ ನೇರ ಧನಾತ್ಮಕ ಚಿತ್ರಗಳೇ ಅಪೇಕ್ಷಣೀಯವಾಗಿದ್ದುವು. ಆ್ಯಂಡ್ರೂರೋಸ್ ಎಂಬವ ತಯಾರಿಸಿದ್ದ ಕೆಮರದಲ್ಲಿ ಸಿಲ್ವರ್‍ನೈಟ್ರೇಟ್ ಮತ್ತು ಗ್ಯಾಲಿಕ್ ಆಮ್ಲಗಳ ಮಿಶ್ರಣದಿಂದ ಸಂವೇದನಶೀಲಗೊಳಿಸಿದಕಾಗದ ಬಳಸಿ ಟಾಲ್‍ಬಟ್ ಅನೇಕ ಚಿತ್ರ ತೆಗೆದ. ಬಿಂಬ ಮೂಡಿಸಲು ಕಾಗದ ಸಫಲವಾಗದಿದ್ದಾಗ, ಅದಕ್ಕೆ ಗ್ಯಾಲೊ-ಸಿಲ್ವರ್ ನೈಟ್ರೇಟಿನ ಮಿಶ್ರಣದ ಮತ್ತಷ್ಟು ಲೇಪಕೊಟ್ಟು ಪುನಃ ಚಿತ್ರೀಕರಣಕ್ಕಾಗಿ ಬಳಸಿದ. ಬಿಂಬ ಮೂಡಿತು. ಕಾಗದವನ್ನು ಪೊಟ್ಯಾಸಿಯಮ್ ಬ್ರೋಮೈಡ್ ದ್ರಾವಣದಿಂದ ಸ್ಥಾಯೀಗೊಳಿಸಿದ (1841). ಈ ಕ್ರಮವನ್ನು ಇಂದಿಗೂ ಕೆಲವು ಫೋಟೋಕಲಾವಿದರು ಅನುಸರಿಸುತ್ತಾರೆ. ಕಾಗದವನ್ನು ಸಿಲ್ವರ್ ನೈಟ್ರೇಟ್ ಮತ್ತು ಪೊಟ್ಯಾಸಿಯಮ್ ಅಯೊಡೈಡ್ ದ್ರಾವಣಗಳಿಂದ ಸಂಸ್ಕರಿಸಿ, ಅದನ್ನು ಕೆಮರ ಅಬ್‍ಸ್ಕ್ಯೂರ ಉಪಕರಣದಲ್ಲಿ ಉಪಯೋಗಿಸುವುದು, ಚಿತ್ರೀಕರಿಸುವುದು, ಕಾಗದವನ್ನು ಆಮ್ಲವಿರುವ ಸಿಲ್ವರ್ ನೈಟ್ರೇಟ್ ದ್ರಾವಣದಿಂದ ಪ್ರಸ್ಫುಟಿಸುವುದು, ಉಪ್ಪಿನ ದ್ರಾವಣದಿಂದ ಸ್ಥಾಯೀಗೊಳಿಸುವುದು, ಋಣಾತ್ಮಕದ ತಯಾರಿಕೆ, ಮತ್ತೆ ಸಿಲ್ವರ್ ನೈಟ್ರೇಟ್ ಮತ್ತು ಪೊಟ್ಯಾಸಿಯಮ್ ಅಯೊಡೈಡ್ ದ್ರಾವಣUಳಿಂದ ಸಂವೇದನಶೀಲಗೊಂಡಿರುವ ಕಾಗದದ ಮೇಲೆ ಧನಾತ್ಮಕ ಚಿತ್ರ ಮೂಡಿಸುವುದು ಈ ಪ್ರಕ್ರಿಯೆಗಳಿಗೆ ಕ್ಯಾಲೊಟೈಪ್ ವಿಧಾನ ಎಂದು ಹೆಸರು. ಈ ವಿಧಾನದಿಂದ ಒಂದಕ್ಕಿಂತ ಹೆಚ್ಚಿನ ಚಿತ್ರಪ್ರತಿಯನ್ನು ಪಡೆಯಬಹುದಿತ್ತು; ಮತ್ತು ಬಿಂಬದ ಎಡ-ಬಲ ವಿಪರ್ಯಯ ದೋಷವನ್ನು ಸರಿಪಡಿಸಬಹುದಿತ್ತು. ಗ್ರೀಕ್ ಭಾಷೆಯಲ್ಲಿ ಕ್ಯಾಲೊ ಎಂದರೆ ಸುಂದರ ಎಂದರ್ಥ. ಸರ್‍ಜಾನ್ ಹರ್ಷೆಲ್ ಎಂಬವನಿಂದ ನಿರೂಪಿತವಾದ (1819) ಸೋಡಹೈಪೊಸಲ್ಪೇಟಿನ ಸ್ಥಾಯೀಕರಣ ಗುಣಧರ್ಮಗಳ ಮಹತ್ತ್ವವನ್ನು ಟಾಲ್‍ಬಟ್ ಬಳಸಿಕೊಂಡ. 1844ರಲ್ಲಿ ಟಾಲ್‍ಬಟ್ ಮಾರಾಟಕ್ಕೆ ಕ್ಯಾಲೊಟೈಪ್ ಚಿತ್ರ ತಯಾರಿಸುವ ಸಲುವಾಗಿ ಮುದ್ರಣಾಗಾರ ಸ್ಥಾಪಿಸಿದ. ಈ ವಿಧಾನದ ಮತ್ತು ತಂತ್ರದ ಸವಿವರಗಳನ್ನು ಸಚಿತ್ರವಾಗಿ ದಿ ಪೆನ್ಸಿಲ್ ಆಫ್ ನೇಚರ್ ಎಂಬ ಪುಸ್ತಕದಲ್ಲಿ ಪ್ರಕಟಿಸಿದ. ಇಷ್ಟಾದರೂ ಅಮೆರಿಕದಲ್ಲಿ ದಗೆರಟೈಪ್ ತಂತ್ರದ ಚಿತ್ರ ಜನಪ್ರಿಯವಾಯಿತೇ ವಿನಾ ಟಾಲ್‍ಬಟ್ಟನ ಕ್ಯಾಲೊಟೈಪ್ ಚಿತ್ರ ಅಲ್ಲ. 
	ದ ಗೇರ್ 1851ರಲ್ಲಿ ತೀರಿಕೊಂಡ. ಆ ವರ್ಷ ಹಳೆಯ ತಂತ್ರದ ಉಪಜ್ಞೆಯ ಅಂತ್ಯವನ್ನೂ ಹೊಸ ತಂತ್ರದ ಉಗಮವನ್ನೂ ಕಂಡಿತು: ಲಂಡನ್ನಿನ ಶಿಲ್ಪಕಲಾವಿದ ಫ್ರೆಡರಿಕ್ ಸ್ಕಾಟ್ ಆರ್ಚರ್ ಎಂಬವ ಉಪಜ್ಞಿಸಿದ ಆದ್ರ್ರಕಲೋಡಿಯನ್ ತಂತ್ರ (ವೆಟ್-ಕಲೋಡಿಯನ್ ಟೆಕ್ನಿಕ್).
	ಕಲೋಡಿಯನ್ ಎಂಬುದು ಈಥರ್ ಮತ್ತು ಆಲ್ಕೊಹಾಲಿನಲ್ಲಿ ಲೀನವಾಗುರುವ ಪೈರೋಕ್ಸಿಲಿನ್ ದ್ರಾವಣ. ಮೊದಲಿಗೆ ಸಿಲ್ವರ್-ಅಯೊಡೈಡಿನ ವಾಹಕವಾಗಿ ಆಲ್ಬುಮೆನ್ನನ್ನು ಬಳಸಿ ಗಾಜಿನ ಫೋಟೊಗ್ರಾಫಿಕ್ ಪ್ಲೇಟುಗಳನ್ನು ತಯಾರುಮಾಡಲಾಗುತ್ತಿತ್ತು. ಕ್ರಮೇಣ ಈಥರ್-ಆಲ್ಕೊಹಾಲ್ ದ್ರಾವಣದಲ್ಲಿ ನೈಟ್ರೇಟ್ ಸಂಸ್ಕರಿತ ಹತ್ತಿಯನ್ನು ಲೀನಗೊಳಿಸುವುದರಿಂದ ಉತ್ಪತ್ತಿಯಾಗುವ ಕಲೋಡಿಯನ್ನಿನ ಬಳಕೆ ಹೆಚ್ಚಾಯಿತು. ಈ ವಿಧಾನವನ್ನು 1851ರ ಸುಮಾರಿಗೆ ಆರ್ಚರ್ ಸೂಚಿಸಿದ. ಮುಂದಿನ ಸುಮಾರು 30 ವರ್ಷ ಪರ್ಯಂತ ಇದು ಬಳಕೆಯಲ್ಲಿತ್ತು. ಪೊಟ್ಯಾಸಿಯಮ್ ಅಥವಾ ಅಮೊನಿಯಮ್ ಬ್ರೋಮೈಡ್ ಮತ್ತು ಆಯೊಡೈಡನ್ನು ಸ್ವಚ್ಛಗೊಳಿಸಿದ ಗಾಜಿನ ಫಲಕದ ಮೇಲೆ ಕಲೋಡಿಯನ್ನಿಯೊಂದಿಗೆ ಬೆರೆಸಿ ಲೇಪಿಸಿದಾಗ ಬ್ರೋಮೈಡ್ ಮತ್ತು ಅಯೊಡೈಡುಗಳ ದ್ರಾವಣ ಬಲು ಬೇಗ ಆವಿಯಾಗಿ ಹೋಗಿ ಕಲೋಡಿಯನ್ನಿನ ತೆಳುಪದರ ಮಾತ್ರ ಗಾಜಿನ ಮೇಲೆ ನಿಲ್ಲುತ್ತಿತ್ತು, ಅನಂತರ ಈ ಫಲಕವನ್ನು ಸಿಲ್ವರ್ ನೈಟ್ರೇಟ್ ದ್ರಾವಣವಿರುವ ತೊಟ್ಟಿಯಲ್ಲಿ ಮುಳುಗಿಸಿ, ಅದು ಒದ್ದೆ ಇರುವಾಗಲೇ ಬೆಳಕಿಗೆ ಒಡ್ಡಿದ. ಫಲಕ ಒಣಗಿದಂತೆಲ್ಲ ಅದರ ಸಂವೇದನಶೀಲತೆಯ ಸಾಮಥ್ರ್ಯೇ ಕಡಿಮೆ ಆಗುವುದನ್ನು ಗಮನಿಸಿದ. ಮೂರು ಸೆಕೆಂಡುಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಆದ್ರ್ರ ಫಲಕ ಕ್ರಿಯಾಶೀಲವಾಗುವುದು ಕಂಡುಬಂತು. ಪೈರೊಗ್ಯಾಲಿಕ್ ಆಮ್ಲ ಇಲ್ಲವೆ ಫೆರಸ್ ಸಲ್ಫೇಟ್ ಉಪಯೋಗಿಸಿ ಈ ಫಲಕವನ್ನು ಪ್ರಸ್ಫುಟನಗೊಳಿಸಿ ಪೊಟ್ಯಾಸಿಯಮ್ ಸಯನೈಡ್ ಇಲ್ಲವೆ ಸೋಡಿಯಮ್ ತಯೊಸಲ್ಫೇಟನ್ನು ಬಳಸಿ ಸ್ಥಾಯೀಕರಿಸಲಾಯಿತು. ಆದ್ರ್ರ ಕಲೋಡಿಯನ್ ವಿಧಾನಕ್ಕೆ ಫೋಟೊಗ್ರಫಿಯ ಅನುಭವವೂ ರಸಾಯನವಿಜ್ಞಾನ ಜ್ಞಾನವೂ ಅವಶ್ಯವಾಗಿ ಬೇಕಿತ್ತು. ಇದರಲ್ಲಿಯ ಕ್ಲಿಷ್ಟತೆಯಿಂದ ಹೊರಾಂಗಣ ಚಿತ್ರ ತೆಗೆಯುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಇದರ ಅನ್ವಯ ಸರೆಹಿಡಿದ ಚಿತ್ರಗಳು ಸೊಗಸಾಗಿರುತ್ತಿದ್ದುವು. ಚಿತ್ರಗಳ ಎಷ್ಟೇ ಪ್ರತಿಗಳನ್ನು ಬೇಕಾದರೂ ತೆಗೆಯಬಹುದಿತ್ತು. ಹೀಗಾಗಿ ಈ ವಿಧಾನ ಗೇರನ ವಿಧಾನಕ್ಕಿಂತ ಹೆಚ್ಚು ಜನಪ್ರಿಯತೆಗಳಿಸಿತು. ಆದ್ರ್ರಕಲೋಡಿಯನ್ ವಿಧಾನದಲ್ಲಿ ಚಿತ್ರಕಾರ ತೆರೆಯನ್ನೇ ತನ್ನೊಂದಿಗೆ ಒಯ್ಯ ಬೇಕಾಗಿತ್ತು. ಟಾಲ್‍ಬಟ್ ಕ್ಯಾಲೊಟೈಪ್ ವಿಧಾನದಿಂದ ಋಣಾತ್ಮಕವನ್ನು ತಯಾರಿಸಿದ್ದ ಇದನ್ನು ಸ್ಪರ್ಶಮುದ್ರಣ (ಕಾಂಟ್ಯಾಕ್ಟ್ ಪ್ರಿಂಟ್) ವಿಧಾನದಂತೆ ಋಣಾತ್ಮಕದ ಅಡಿಯಲ್ಲಿ ಸಿಲ್ವರ್ ಕ್ಲೋರೈಡ್ ಲೇಪಿತ ಕಾಗದವಿರಿಸಿ, ಅದನ್ನು ಸೂರ್ಯಪ್ರಕಾಶಕ್ಕೆ ಒಡ್ಡಿ ಅನಂತರ ಮುದ್ರಿಸುವುದನ್ನು ತೋರಿಸಿಕೊಟ್ಟಿದ್ದ. ಹೀಗೆ ಪಡೆದ ಚಿತ್ರಗಳು ಅಷ್ಟು ಸ್ಫುಟವಾಗಿ ಕಾಣಿಸುತ್ತಿರಲಿಲ್ಲ. 1850ರ ಸುಮಾರಿಗೆ ಬ್ಲಾಂಕ್ವಾರ್ಟ್-ಎವಾರ್ಟ್ ಎಂಬವ ಮೊಟ್ಟೆಯ ಆಲ್ಬುಮೆನ್ನಿನ್ನಸಿಲ್ವರ್‍ಸಾಲ್ಟ್ (ಉಪ್ಪು) ಲೇಪನಗೊಂಡ ಕಾಗದದ ಮೇಲೆ ಬಳಿಯುವುದರಿಂದ ಸಿಲ್ವರ್ ಸಾಲ್ವುಗಳು ಸಂವೇದನಶೀಲ ಕಾಗದದ ಮೇಲೆ ಬಿಂಬ ಊರಿಕೊಳ್ಳುವಂತೆ ಸಹಾಯ ಮಾಡುತ್ತವೆ ಎಂಬುದನ್ನು ತೋರಿಸಿಕೊಟ್ಟ. ಹೀಗಾಗಿ ಆಲ್ಬುಮೆನ್ ಲೇಪನದ ಆದ್ರ್ರಕಲೋಡಿಯನ್ ವಿಧಾನ ಜನಪ್ರಿಯವಾಯಿತು. ಫೋಟೊಗ್ರಫಿಯ ಪ್ರಾರಂಭದ ದಿವಸಗಳಲ್ಲಿ ಛಾಯಾಚಿತ್ರಕಲಾವಿದ ಫೋಟೊ ಕಾಗದವನ್ನು ತಾನೇ ತಯಾರಿಸಿಕೊಳ್ಳಬೇಕಾಗಿತ್ತು. 1869ರಲ್ಲಿ ಸಿಲ್ವರ್ ನೈಟ್ರೇಟ್ ದ್ರಾವಣಕ್ಕೆ ಒಡ್ಡಿದ ಹಾಗೂ ಆಲ್ಬುಮೆನ್ ಲೇಪೆಸಿದ ಸಂವೇದನಶೀಲ ಕಾಗದ ಮಾರುಕಟ್ಟೆಗೆ ಬಂತು. ಇಷ್ಟಾದರೂ ಈ ವಿಧಾನ ಕಲೋಡಿಯೊ-ಕ್ಲೋರೈಡ್ ಕಾಗದದಂತೆಯೇ ಜಿಲಾಟಿನ್ ಮುದ್ರಣದ ಕಾಗದದೊಂದಿಗೆ ಪೈಪೋಟಿ ಎದುರಿಸಬೇಕಾಯಿತು.
	(iii) ಪಿಗಮೆಂಟ್ (ಕಾರ್ಬನ್) ಮುದ್ರಣ ಆದ್ರ್ರ ಮತ್ತು ಶುಷ್ಕ ಕಲೋಡೀಯನ್ ವಿಧಾನಗಳು: ಪಿಗ್‍ಮೆಂಟ್ (ಕಾರ್ಬನ್) ಮುದ್ರಣವಿಧಾನವನ್ನು 1864ರಲ್ಲಿ ಸ್ವಾನ್ ಪ್ರಾಯೋಗಿಕವಾಗಿ ಬಳಕೆಗೆ ತಂದ. ಪ್ಲಾಟಿನಮ್‍ನಲ್ಲಿ ಮುದ್ರಿಸುವ ವಿಧಾನಕ್ಕೆ ವಿಲ್ಲೀಸ್ ಎಂಬಾತ 1873ರಲ್ಲಿ ಏಕಸ್ವ ಪಡೆದುಕೊಂಡ. ಪ್ಲಾಟಿನೊಟೈಪ್ ಎಂಬ ಹೆಸರಿನ ಫೋಟೊಗ್ರಫಿಕ್ ಪೇಪರ್(ಕಾಗದ) 1880ರ ತನಕವೂ ಮಾರುಕಟ್ಟೆಗೆ ಬಿಡುಗಡೆಯಾಗಲಿಲ್ಲ. ಕಾರ್ಬನ್ ಮುದ್ರಣ ಕಾಗದ ಯಾವುದೇ ವರ್ಣದ ಚಿತ್ರವನ್ನೂ ಶಾಶ್ವತಗೊಳಿಸುವಲ್ಲಿ ಪರಿಣಾಮಕಾರಿ ಎನಿಸಿದ್ದರೂ ಪ್ಲಾಟಿನೊಟೈಪ್ ಕಾಗದ ಮಾತ್ರ ಮುದ್ರಣದಲ್ಲಿ ಅಚ್ಚ ಕಪ್ಪು ಬಣ್ಣ ಮುದ್ರಿಸುವಲ್ಲಿ ಮೇಲುಗೈ ಪಡಿದಿತ್ತು. ಇವೆರಡೂ ವಿಧಾನಗಳಲ್ಲಿ ಅಧಿಕ ವೆಚ್ಚ ಏರ್ಪಟ್ಟಿದ್ದರಿಂದ ಇವು ದೊಡ್ಡ ಗಾತ್ರದಲ್ಲಿ ಬಳಕೆಗೆ ಬರಲಿಲ್ಲ.
	ಆದ್ರ್ರಕಲೋಡಿಯನ್ ವಿಧಾನ ಫೋಟೊಗ್ರಫಿಕ್ ಕಲೆಯಲ್ಲಿ ಹೊಸ ಮನ್ವಂತರದ ನಿರ್ಮಾಣಕ್ಕೆ ಎಡೆಮಾಡಿಕೊಟ್ಟಿತು. 1853ರಲ್ಲಿ ಲಂಡನ್ನಿನಲ್ಲಿ ಫೋಟೊಗ್ರಫಿಕ್ ಸಂಘವೊಂದು ಅಸ್ತಿತ್ವಕ್ಕೆ ಬಂತು: ರಾಯಲ್ ಫೋಟೊಗ್ರಫಿಕ್ ಸೊಸೈಟಿ. ಈ ಸಂಸ್ಥೆಯಿಂದಾಗಿ ಇತರ ಕಡೆಗಳಲ್ಲೂ ಇದೇ ತೆರನ ಸಂಘ ಸಂಸ್ಥೆಗಳು ಸ್ಥಾಪನೆಯಾದುವು. 1854ರಲ್ಲಿ ಪ್ರಾರಂಭವಾದ ಬ್ರಿಟಿಷ್ ಜರ್ನಲ್ ಆಫ್ ಫೋಟೊಗ್ರಫಿ ಇಂದಿಗೂ ಮುಂದುವರಿದುಕೊಂಡು ಬಂದಿದೆ.
	ದೊಡ್ಡ ದೊಡ್ಡ ಪಟ್ಟಣಗಳಲ್ಲೂ ಚಿತ್ರ ತೆಗೆಯುವ ಉದ್ಯಮ ಬೆಳೆಯತೊಡಗಿತು. ಅಮೆರಿಕದ ಆಂತರಿಕ ಯುದ್ಧಕ್ಕೆ ಸ್ವಲ್ಪ ಮುಂಚಿತವಾಗಿ ಮ್ಯಾಥ್ಯೂಬ್ರಾಡಿ ಎಂಬವ ನ್ಯೂಯಾರ್ಕ್ ಮತ್ತು ವಾಷಿಂಗ್‍ಟನ್ನುಗಳಲ್ಲಿ ತನ್ನ ಸ್ಟುಡಿಯೋ ಆರಂಭಿಸಿದ. 1835ರಲ್ಲಿ ಬ್ರಿಟಿಷ್ ಸರ್ಕಾರ ರೋಜರ್ ಪೆನ್‍ಟನ್ ಎಂಬವನನ್ನು ಕ್ರಿಮಿಯನ್ ಯುದ್ಧದ ಚಿತ್ರ ತೆಗೆಯಲು ನೇಮಿಸಿತು. ಅಲೆಕ್ಸಾಂಡರ್ ಗಾರ್ಡ್‍ನರ್ ಎಂ¨ ಅಮೆರಿಕದ ಆಂತರಿಕ ಯುದ್ಧದ ಚಿತ್ರಗಳನ್ನು ಬಲು ಪರಿಣಾಮಕಾರಿಯಾಗಿ ತೆಗೆದು ಪ್ರಸಿದ್ಧನಾದ. ಹೀಗೆಯೇ ಮ್ಯಾಥ್ಯೂಬ್ರಾಡಿ ಕೂಡ ವಿಶಿಷ್ಟ ಸ್ಥಾನ ಗಳಿಸಿಕೊಂಡ. 1851ರ ಅನಂತರ ಫೋಟೊಗ್ರಫಿಯ ಕಲೆ ಸಮಕಾಲೀನ ವರ್ಣಚಿತ್ರಕಲೆಯನ್ನು ವಾಸ್ತವತೆಯಲ್ಲೂ ಚಿತ್ರ ಬಿಂಬನೆಯಲ್ಲೂ ಹಿಮ್ಮೆಟ್ಟಿಸಿತು. ಆ ಕಾಲದಲ್ಲಿ ಚಿತ್ರಶೈಲಿಗಳ ಕೆಲವು ಸಂಪ್ರದಾಯಗಳು ಆರಂಭವಾದವಲ್ಲದೇ ಅವು ಒಂದು ಶತಮಾನಾನಂತರವೂ ಬಳಕೆಯಲ್ಲಿರುವಂತಾದವು. ಹೀಗಾದ್ದರಿಂದ ಸೃಜನಶೀಲ ಫೋಟೊ ಕಲಾವಿದ ತನ್ನ ವ್ಯಕ್ತಿನಿಷ್ಠ ಶೈಲಿಯನ್ನು ವಿಕಾಸಪಡಿಸಿಕೊಳ್ಳಲು ಅವಕಾಶವಾಯಿತು.
	ಜಿಲಾಟಿನ್ ಎಮಲ್ಯನ್ ಆದ್ರ್ರ ಕಲೋಡಿಯನ್ ವಿಧಾನದಿಂದ ಉತ್ತಮ ಹಾಗೂ ಸಮರ್ಪಕ ಫಲಿತಾಂಶಗಳು ಬಂದುವು ನಿಜ. ಆದರೆ ಹೊರಾಂಗಣ ಚಿತ್ರ ತೆಗೆಯುವಲ್ಲಿ ವೃತ್ತಿನಿರತ ಚಿತ್ರಕಾರರಿಗೆ ಮಾತ್ರ ಇದು ಅನುಕೂಲತೆಯದಾಗಿರಲಿಲ್ಲ. ಈ ವಿಧಾನವನ್ನು ಸುಧಾರಿಸುವ ಪ್ರಯತ್ನಗಳು ನಡೆದುವು. 1871ರಲ್ಲಿ ಆರ್.ಎಲ್ ಮಾಡೊಕ್ಸ್ ಎಂಬವ ಜಿಲಾಟಿನ್ ಎಮಲ್ಯನ್ ತಯಾರಿಕೆ ವಿಧಾನವನ್ನು ಪ್ರಕಟಿಸಿದ. ಇದು ಅಷ್ಟು ಸಮರ್ಪಕವಾಗಿರಲಿಲ್ಲ. ಎರಡು ವರ್ಷಗಳ ತರುವಾಯ ಇಂಗ್ಲೆಂಡಿನ ಬರ್ಗೆಸ್ ಎಂಬವ ಇನ್ನೂ ಹೆಚ್ಚು ಸಮರ್ಪಕ ರೀತಿಯ ಜಿಲಾಟಿನ್ ಎಮಲ್ಯನ್ನನ್ನು ತಯಾರಿಸುವ ವಿಧಾನ ತಿಳಿಸಿದ. ಇದರಿಂದ ತಯಾರಿಸಿದ ಶುಷ್ಕಫಲಕಗಳು (ಡ್ರೈ ಪ್ಲೇಟ್ಸ್) ಮಾರುಕಟ್ಟೆಯಲ್ಲಿ ಯಶಸ್ಸು ಕಾಣಲಿಲ್ಲ. ಆದರೂ ಜಿಲಾಟಿನ್ ಎಮಲ್ಯನ್ ಬಳಕೆಯಿಂದ ಚಿತ್ರಗಳನ್ನು ಪರಿಣಾಮಕಾರಿಯಾಗಿ ತೆಗೆಯಬಹುದೆಂದು ತೋರಿಸಿಕೊಟ್ಟ ಕೀರ್ತಿ ಬರ್ಗೆಸನಿಗೇ ಸಲ್ಲುತ್ತದೆ. ಮುಂದೆ ಈ ವಿಚಾರಧಾರೆ ಮುಂದುವರಿದು ಅನೇಕ ಪ್ರಯೋಗಗಳಾಗಿ 1878ರಲ್ಲಿ ಚಾಲ್ರ್ಸ್ ಬೆನೆಟ್ ಎಂಬವ ಜಿಲಾಟಿನ್ ಎಮಲ್ಯನ್ನನ್ನು ಕಾಸುವುದರಿಂದ ಅದರ ಸಂವೇದನಶೀಲತೆ ಹೆಚ್ಚುತ್ತದೆ ಎಂಬುದನ್ನು ಅರಿತುಕೊಂಡ. ಈ ವಿಧಾನದ ಅನ್ವಯ ಶುಷ್ಕಫಲಕಗಳು ತಯಾರಾಗತೊಡಗಿದುವು. ಇದೇ ವಿಧಾನದಲ್ಲಿ ತಯಾರಾದ ಶುಷ್ಕಫಲಕಗಳು 1879ರಲ್ಲಿ ಇಂಗ್ಲೆಂಡ್, ಜರ್ಮನಿ ಮತ್ತು ಅಮೆರಿಕಗಳಲ್ಲಿ ಮಾರಾಟಕ್ಕೆ ಬಂದುವು. ಕೆಲವೇ ವರ್ಷಗಳಲ್ಲಿ ಜಿಲಾಟಿನ್ ಎಮಲ್ಶನ್ ಶುಷ್ಕಫಲಕಗಳು ಆದ್ರ್ರಕಲೋಡಿಯನ್ ರೀತ್ಯದ ಫಲಕಗಳನ್ನು ಮೂಲೆಗುಂಪಾಗಿಸಿದುವು. ವಿಯೆನ್ನದ ಇಡೆರ್ ಮತ್ರು ಪಿಜಿóಗಿಲ್ಲಿ ಎಂಬವರು ಬ್ರೋಮೈಡ್ ಕ್ಲೋರೈಡ್ ಮತ್ತು ಕ್ಲೋರೊಬ್ರೋಮೈಡ್ ಪ್ರಸ್ಫುಟನೆಯ ಕಾಗದಗಳನ್ನು ಕುರಿತಂತೆ ಪ್ರಕಟಿಸಿದರು (1881). ರೊಚೆಸ್ಟರಿನಲ್ಲಿ ಈಸ್ಟ್‍ಮನ್ ಕಂಪನಿ 1884ರ ಅನಂತರ ಉತ್ತಮ ಗುಣಮಟ್ಟದ ಬ್ರೋಮೈಡ್ ಕಾಗದವನ್ನು ತಯಾರಿಸಿತು. ಇಂಥ ಕಾಗದ ದೊಡ್ಡ ಗಾತ್ರದ ಚಿತ್ರಗಳನ್ನು ಮುದ್ರಿಸುವುದಕ್ಕೆ ಬಲು ಸಹಾಯಕಾರಿಯಾಗಿತ್ತು. ಸ್ಪರ್ಶ ಮುದ್ರಣಕ್ಕಾಗಿ ಬಳಸುವ ಕಾಗದವನ್ನು ಉಪಜ್ಞಿಸಿದ (1891) ಕೀರ್ತಿ ಲಿಯೋ ಬೇಕ್‍ಲ್ಯಾಂಡ್ ಎಂಬವನಿಗೆ ಸಲ್ಲುತ್ತದೆ. ಇದಾದ ಬಳಿಕ ಪ್ರಸ್ಫುಟನೆಯ ಕಾಗದಗಳ ಗುಣಮಟ್ಟದಲ್ಲೂ ವೃದ್ಧಿ ಕಂಡುಬಂತು.
	(iv) ಫಿಲ್ಮುಗಳ ತಯಾರಿಕೆ: ಸುರುಳಿ ಸುತ್ತಬಹುದಾದಂಥ (ರೋಲ್) ಫಿಲ್ಮಿನ ತಯಾರಿಕೆ ಹಾಗೂ ಫೋಟೊಗ್ರಫಿಯ ಜನಪ್ರಿಯತೆ: ಜಿಲಾಟಿನ್ ಶುಷ್ಕ ಫಲಕಗಳು ಬಳಕೆಗೆ ಬಂದದ್ದರಿಂದ ಫೋಟೊಗ್ರಫಿಯ ಪ್ರಕ್ರಮಗಳು ತುಂಬ ಸರಳಗೊಂಡುವು. ಇದರಿಂದಾಗಿ ಹವ್ಯಾಸಿ ಛಾಯಾಚಿತ್ರ ಕಲಾವಿದರೂ ತಮಗೆ ಅಗತ್ಯವಾದ ಸಂವೇದನಶೀಲ ಫಿಲ್ಮ್‍ಫಲಕಗಳನ್ನು ಕೊಳ್ಳಬಹುದಾಯಿತು. ಇವನ್ನು ಕತ್ತಲ ಕೋಣೆಯೊಳಗೆ ಫಲಕಧಾರಕಗಳಲ್ಲಿ (ಪ್ಲೇಟ್‍ಹೋಲ್ಡರ್ಸ್) ತುಂಬಿ ಚಿತ್ರತೆಗೆದು ಅನಂತರ ಯಾವುದೇ ಛಾಯಾಚಿತ್ರ ಉದ್ಯಮಿಯಲ್ಲಿಗೆ ತೆಗೆದುಕೊಂಡು ಹೋಗಿ ಪ್ರಸ್ಫುಟನಗೊಳಿಸಿಕೊಳ್ಳಬಹುದಾಗಿದೆ. ಬೆಳಕಿನ ಪ್ರಖರತೆ ಹೆಚ್ಚಾಗಿರದ ಸ್ಥಳಗಳಲ್ಲಿ ಮಾತ್ರ ಕೆಮರ ನಿಲವುಗಳನ್ನು (ಸ್ಟ್ಯಾಂಡ್ಸ್) ಬಳಸಬೇಕಾತ್ತದೆಯೇ ವಿನಾ ಉಳಿದೆಡೆ ಅವುಗಳ ಬಳಕೆಯ ಅವಶ್ಯಕತೆಯೇ ಇರದಂಥ ಸುಧಾರಣೆಗಳು ಆದವು. ಅಂತೆಯೇ ಕೈಯಲ್ಲೇ ಹಿಡಿದು ಒಯ್ಯಬಹುದಾದಂಥ ಕೆಮರಗಳು ಬಂದದ್ದರಿಂದ ಚಿತ್ರ ತೆಗೆಯುವ ವಿಧಾನದಲ್ಲಿ ಸರಳತೆಯೂ ಅನುಕೂಲತೆಯೂ ಏರ್ಪಟ್ಟು ಫೋಟೊಗ್ರಫಿ ಬಲು ಜನಪ್ರ್ರಿಯವಾಗತೊಡಗಿತು.
	ಫಿಲಡೆಲ್ಫಿಯದ ಕಾರ್ಬಟ್ ಎಂಬವ 1885ರಲ್ಲಿ ಹಾಳೆರೂಪದ (ಷೀಟ್) ಫಿಲ್ಮುಗಳನ್ನು ತಯಾರಿಸುವ ಸಲುವಾಗಿ ಸೆಲ್ಯೂಲೈಡುಗಳಿಗೆ ಎಮಲ್ಶನ್ ಲೇಪಿಸುವ ವಿಧಾನ ನಿರೂಪಿಸಿದ. ಅಮೆರಿಕದ ಕೈಗಾರಿಕೋದ್ಯಮಿ ಜಾರ್ಜ್ ಈಸ್ಟ್‍ಮನ್ 1854-1932) ಎಂಬವ ಶುಷ್ಕ ಫಲಕ ಸಿದ್ಧಪಡಿಸಿ ಗ್ರಾಹಕರಿಗೆ ಪೂರೈಸುವುದು ಸಾಧ್ಯವಾದರೆ ಆಗ ಛಾಯಾಚಿತ್ರ ಮೂಡಿಸುವುದು ಜನಸಾಮಾನ್ಯರ ವ್ಯಾಪ್ತಿಗೆ ಒಳಪಡುವುದು ಖಚಿತ ಎಂದು ಮುನ್ನುಡಿದ. 1878ರಲ್ಲಿ ಎಂಥ ಶುಷ್ಕಫಲಕ ನಿರ್ಮಾಣದಲ್ಲಿ ಅವನಿಗೆ ಯಶಸ್ಸು ಲಭಿಸಿತು. 1884ರಲ್ಲಿ ತಾನು ನಿರ್ಮಿಸಿದ ಚಿತ್ರಗ್ರಾಹಿ ಫಿಲ್ಮಿಗೆ ಏಕಸ್ವವನ್ನು ಪಡೆದು ಅದೇ ವರ್ಷ ಈಸ್ಟ್‍ಮನ್ ಡ್ರೈಪ್ಲೇಟ್ ಅಂಡ್ ಫಿಲ್ಮ್ ಕಂಪನಿ ಎಂಬ ಹೆಸರಿನ ಉದ್ದಿಮೆ ಸ್ಥಾಪಿಸಿದ. 1888ರಲ್ಲಿ ಈಸ್ಟ್‍ಮನ್ ಕೊಡಕ್ ಕಂಪನಿಯವರು ರೋಲ್ ಫಿಲ್ಮ್ ತಯಾರಿಸಲು ಈ ವಿಧಾನ ಬಳಸಿಕೊಂಡರು. ಇಂಥ ಫಿಲ್ಮುಗಳಿಗಾಗಿ ಹೊಸದೊಂದು ಕೆಮರ ಕೂಡ ನಿರ್ಮಾಣವಾಯಿತು. ಈ ಕಂಪೆನಿ ತಯಾರಿಸಿದ ಕೆಮರ ಕೊಡಕ್ ಕೆಮರ (ಚಿತ್ರದಲ್ಲಿ) ಎಂದೇ ಪ್ರಸಿದ್ಧವಾಯಿತು. ಪೆಟ್ಟಿಗೆ ಕೆಮರ (ಬಾಕ್ಸ್‍ಕೆಮರ) ಎಂದೂ ಕರೆಯುವುದಿದೆ. ಮೊದಲಿಗೆ ಇದರಲ್ಲಿ ರೋಲ್ ಫಿಲ್ಮ್ ಬಳಸಿಯೇ ಇರಲಿಲ್ಲ. ಕಾರ್ಖಾನೆಯವರು ಇದರಲ್ಲಿ  ಚದರ ಅಂಗುಲ ವಿಸ್ತೀರ್ಣದ ನೂರು ಫಿಲ್ಮುಗಳನ್ನು ತುಂಬಿದರು. ಚಿತ್ರಗಳನ್ನು ಸೆರೆಹಿಡಿದ ಅನಂತರ ಕೊಡಕ್ ಕಂಪನಿಯೇ ಅದನ್ನು ಪ್ರಸ್ಫುಟನ ಮಾಡಿಕೊಡುವ ಸೌಲಭ್ಯವೂ ಇತ್ತು. ಒದಗಿದ ಋಣಾತ್ಮಕದಿಂದ ಮುದ್ರಿತ ಚಿತ್ರಗಳನ್ನು ಮಾಡಿಕೊಡುತ್ತಿದ್ದರು. 'ಗುಂಡಿಯನ್ನು ನೀವು ಒತ್ತಿ. ಮಿಕ್ಕುದನ್ನು ನಮಗೆ ಬಿಡಿ' ಎಂಬುದು ಅವರ ಘೋಷಣೆ ಆಗಿತ್ತು.
	ಕಾಗದದ ಸುರುಳಿಯೊಡನೆ ಸುತ್ತಿದ ಮತ್ತು ಹಗಲಲ್ಲೇ ಕೆಮರದೊಳಕ್ಕೆ ತುಂಬಬಹುದಾದ ಸುರುಳಿ ಫಿಲ್ಮುಗಳು 1891ರಲ್ಲಿ ಬಳಕೆಗೆ ಬಂದವು. ಫಿಲ್ಮುಗಳು ಸುಕ್ಕುಗಟ್ಟದಂತಿರಲು ಅವುಗಳ ಮೇಲೆ ಜಿಲಾಟಿನ್ನು ಲೇಪಿಸಲಾಯಿತು (1903). ಬೆಳಕಿರುವಾಗಲೇ ಫಿಲ್ಮನ್ನು ತೊಳೆಯುವುದು ಅನುಕೂಲವಾಗುವಂಥ ಪ್ರಸ್ಫುಟನ ತೊಟ್ಟಿಗಳು (ಡೆವೆಲೊಪಿಂಗ್ ಟ್ಯಾಂಕ್ಸ್) ಬಳಕೆಗೆ ಬಂದುವು (1905).
	ಜಿಲಾಟಿನ್ ಎಮಲ್ಯನ್ ಮತ್ತು ಅದರಲ್ಲಿಯ ಹೊಸ ಸುಧಾರಣೆಗಳು: ಸಿಲ್ವರ್ ಹ್ಯಾಲೈಡುಗಳು ಎಲ್ಲ ಬಗೆಯ ಪ್ರಯೋಗಗಳಿಗೂ ಸಂವೇದನಶೀಲ ಎನಿಸಿದರೂ ಬೆಳಕಿನ ರೋಹಿತದಲ್ಲಿಯ ಅತಿನೇರಿಳೆ ಮತ್ತು ನೇರಿಳೆ ಹಾಗೂ ನೀಲ ವರ್ಣಗಳಿಗೆ ಮಾತ್ರ ಅಧಿಕ ಸಂವೇದನಶೀಲವಾಗಿದ್ದುವು. ಮತ್ತಷ್ಟು ಉಜ್ಜ್ವಲವೆನಿಸುವ ಹಳದಿ, ಕಿತ್ತಳೆ, ಹಾಗೂ ಕಂದು ಬಣ್ಣಗಳು ಛಾಯಾಚಿತ್ರದಲ್ಲಿ ಹೆಚ್ಚು ಕಪ್ಪಗೆ ಮೂಡುತ್ತಿದ್ದವು. ಈ ಪರಿಣಾಮವನ್ನು ದ ಗೇರ್ ವಿಧಾನದ ಚಿತ್ರಗಳಲ್ಲಿ ಮಾತ್ರವಲ್ಲದೆ ಆದ್ರ್ರ ಕಲೋಡಿಯನ್ ವಿಧಾನದ ರೀತ್ಯ ಪಡೆದ ಚಿತ್ರಗಳಲ್ಲೂ ಗುರುತಿಸಬಹುದಾಗಿತ್ತು. 1873ರಲ್ಲಿ ಬರ್ಲಿನ್ನಿನ ವೋಗಲ್ ಎಂಬವ ಕಲೋಡಿಯನ್ ಎಮಲ್ಯನ್ನಿಗೆ ಚಿತ್ರದ ಮಬ್ಬನ್ನು ಕಡಿಮೆಗೊಳಿಸಲು ಲೇಪಿಸುವ ವರ್ಣದ್ರವ (ಡೈ) ಹಳದಿ ಮತ್ತು ಹಸಿರು ವರ್ಣಗಳಿಗೆ ಕಮ್ಮಿ ಸಂವೇದನಶೀಲವಾಗಿರುತ್ತದೆ ಎಂದು ತೋರಿಸಿಕೊಟ್ಟ. ಇದಕ್ಕೆ ವರ್ಣದ್ರವಲೇಪನದಿಂದ ಪ್ರಸ್ಫುಟನ ಕ್ರಮ ಎಂದು ಹೆಸರು. ಮೊದಮೊದಲು ಜಿಲಾಟಿನ್ ಎಮಲ್ಯನ್ನಿಗೆ ವರ್ಣದ್ರವವನ್ನು 
ಲೇಪಿಸುವ ಕೆಲಸ ಬಲು ಕಷ್ಟದ್ದಾಗಿತ್ತು. ಆದರೆ 1882ರಲ್ಲಿ ಜೇಮ್ ವಾಟರ್‍ಹೌಸ್ ಎಂಬವ ಹಸಿರು-ಹಳದಿಗೆ ಸಂವೇದನೆಯನ್ನು ತೋರುವ ಗುಣವನ್ನು ಇಯೊಸಿನ್ನನ್ನು ಬಳಸಿಕೊಳ್ಳುವುದರಿಂದ ಪಡೆಯಬಹುದೆಂಬುದನ್ನು ತಿಳಿದುಕೊಂಡ. ಅನಂತರ ಆರ್ಥೊಕ್ರೊಮ್ಯಾಟಿಕ್ ಮತ್ತು ಐಸೊಕ್ರೊಮ್ಯಾಟಿಕ್ ಎಂಬ ವಿಶಿಷ್ಟ ಬಗೆಯ ಫಿಲ್ಮ್ ಪ್ಲೇಟುಗಳು ಮಾರುಕಟ್ಟೆಗೆ ಬಂದುವು. ರೋಹಿತದ ನೀಲಿ ಮತ್ತು ಹಸಿರು ಪ್ರದೇಶಗಳಿಗೆ ಸಂವೇದನಶೀಲವಾಗಿರುವ ಎಮಲ್ಶನ್‍ಲೇಪಿತ ಫಿಲ್ಮಿಗೆ ಆರ್ಥೊಕ್ರೊಮ್ಯಾಟಿಕ್ ಎಂದೂ ಒಂದೇ ಒಂದು ಬಣ್ಣದ ಪ್ರದೇಶಕ್ಕೆ ಸಂವೇದನಶೀಲವಾಗಿರುವಂಥ ಎಮಲ್ಶನ್ ಲೇಪಿತ ಫಿಲ್ಮಿಗೆ ಐಸೊಕ್ರೊಮ್ಯಾಟಿಕ್ ಎಂದೂ ಹೆಸರು.
	ಅನಂತರ 1884ರಲ್ಲಿ ವಾಟರ್‍ಹೌಸ್ ಈಡೆಲ್ ಎರಿಥ್ರೊಸಿನ್ ಎಂಬ ರಾಸಾಯನಿಕ ಮತ್ತಷ್ಟು ಪ್ರಬಲ ಸಂವೇದನಶೀಲತೆಯನ್ನು ಪ್ರದರ್ಶಿಸುತ್ತದೆ ಎಂಬುದನ್ನು ತೋರಿಸಿಕೊಟ್ಟ. ಹಸಿರು ಮತ್ತು ಹಳದಿ ಬಣ್ಣಗಳಿಗೆ ಸಂವೇದನ ಶೀಲವೆನಿಸುವ ಪದಾರ್ಥಗಳನ್ನು 1909ರಲ್ಲಿ ಪತ್ತೆಮಾಡಲಾಯಿತು. ಆದರೂ ಪರಿಣಾಮಕಾರಿಯಾದ ಸಂವೇದನಶೀಲಕಾರ (ಸೆನ್ಸಿಟೈಜರ್) ಪತ್ತೆ ಆಗಲಿಲ್ಲ. 1905ರಲ್ಲಿ ಪ್ಯಾನ್‍ಕ್ರೊಮ್ಯಾಟಿಕ್ ಸಂವೇದನಶೀಲಕಾರಿ ಹೋಮೋಲ್ಕಾದಿಂದ ಪತ್ತೆಯಾಯಿತು. (ಪ್ಯಾನ್‍ಕ್ರೊಮ್ಯಾಟಿಕ್ ಎಂದರೆ ರೋಹಿತದ ಎಲ್ಲ ವರ್ಣಗಳಿಗೂ ಒಂದೇ ತೆರನಾದ ಸಂವೇದನಶೀಲತೆ ಹೊಂದಿರುವ ಎಮಲ್ಯನ್‍ಲೇಪಿತ ಪಟಲ ಎಂದರ್ಥ.) ಕಾರ್ಬೊಸೈಯನೈನ್ ವರ್ಣದ್ರವವೇ ಈ ಸಂವೇದನಶೀಲಕಾರಿ. ಇದನ್ನು ಪಿನಾಸಿಯಾನೋಲ್ ಎಂದು ಕರೆದರು. ಹೀಗಾಗಿ ಸಂವೇದನಶೀಲ ಪ್ಯಾನ್ ಕ್ರೊಮ್ಯಾಟಿಕ್ ಫಲಕಗಳು ಮೊದಮೊದಲು ವೈಜ್ಞಾನಿಕ ಛಾಯಾಚಿತ್ರೀಕರಣಕ್ಕಾಗಿ ಬಳಕೆಯಾದುವು. ವೃತ್ತಿನಿರತ ಚಿತ್ರಕಲಾವಿದರೂ ಇದನ್ನು ಉಪಯೋಗಿಸುತ್ತಿದ್ದರು. ಕ್ರಮೇಣ ಅರ್ಥೊಕ್ರೊಮ್ಯಾಟಿಕ್ ಮತ್ತು ಐಸೊಕ್ರೊಮ್ಯಾಟಿಕ್ ಫಲಕಗಳ ಬಳಕೆಯೂ ನಿಂತುಹೋಗಿ ಕೇವಲ ಪ್ಯಾನ್‍ಕ್ರೊಮ್ಯಾಟಿಕ್ ಫಲಕಗಳೇ ಹೆಚ್ಚು ಹೆಚ್ಚಾಗಿ ಮಾರುಕಟ್ಟೆಗೆ ಬರಹತ್ತಿದುವು.
ಹರ್ಟರ್ ಮತ್ತು ಡ್ರಫೀಲ್ಡ್ ಎಂಬವರು ಸೆನ್ಸಿಟೊಮೀಟರ್ ಎಂಬ ಉಪಕರಣವನ್ನು ಉಪಜ್ಞಿಸಿದರು (1890). ಇದು ಫಿಲ್ಮಿನ ಸಂವೇದನ ಶೀಲತೆಯನ್ನು ಅಳೆಯುವಲ್ಲಿಯೂ ಅದರ ವೇಗವನ್ನು (ಸ್ಪೀಡ್) ಗುರುತಿಸುವಲ್ಲಿಯೂ ಉಪಯುಕ್ತವೆನಿಸಿದೆ. ಈ ಉಪಕರಣ ಫೋಟೊಗ್ರಫಿ ಕ್ಷೇತ್ರದಲ್ಲಿ ಒಂದು ಅವಿಭಾಜ್ಯ ಅಂಗವೆನಿಸಿತು. 30 ಮಿಮೀ ಅಗಲದ ಫಿಲ್ಮ್ 1924ರಲ್ಲಿ ಬಳಕೆಗೆ ಬಂದು ಬಲು ಜನಪ್ರಿಯವಾಯಿತು. ಮನೆಯ ಒಳಾಂಗಣದಲ್ಲೇ ಫೋಟೊ ತೆಗೆಯಲು ಸಾಧ್ಯವಾಗುವಂತೆ ಮಾಡಿದ ಮತ್ತೊಂದು ಉಪಜ್ಞೆ ಎಂದರೆ ಫ್ಲ್ಯಾಷ್ (ಮಿಂಚು) ಫೋಟೊಗ್ರಫಿಯ ವಿಧಾನ. 1931ರ ವೇಳೆಗೆ ಹೆರಾಲ್ಡ್ ಎಡ್ಗರ್ಟನ್ ಎಂಬವ ಸ್ಟ್ರೋಬೊಸ್ಕೋಪಿಕ್ ಫ್ಲ್ಯಾಷನ್ನು ಕುರಿತಂತೆ ಪ್ರಯೋಗ ನಡೆಸುತ್ತಿದ್ದ. ಚಲನೆಯಲ್ಲಿರುವ ವಸ್ತುವೊಂದರ ಹಲವಾರು ವಿನ್ಯಾಸಗಳನ್ನು ಇದರ ಪ್ರಕಾರ ಫೋಟೊ ತೆಗೆಯಬಹುದು. ವಸ್ತುವಿನ ನಿರ್ದಿಷ್ಟ ಚಲನೆಯನ್ನು ಕೆಮರ ಸೆರೆಹಿಡಿಯುವಾಗಲೇ ಫ್ಲ್ಯಾಷ್ ಬಲ್ಬ್ ಉರಿದು ಉಜ್ಜ್ವಲ ಪ್ರಕಾಶ ಬೀರಿ ಸುಟ್ಟುಹೋಗುವ ಏಕಕಾಲಿಕತೆಯ ಏರ್ಪಾಡು ಇಲ್ಲಿಯ ವೈಶಿಷ್ಟ್ಯ.
(ಜಿ.ಟಿ.ಎಚ್‍ಇ)
II. ರಸಾಯನ ವೃತ್ತಾಂತ
	ರಾಸಾಯನಿಕ ವಸ್ತುಲೇಪಿತ ಫಿಲ್ಮ್ ಅಥವಾ ಪ್ಲೇಟಿನ ಮೇಲೆ ಬೆಳಕಿನ ಕಾರಣವಾಗಿ ಗೋಚರ ಚಿತ್ರಬಿಂಬ ಮೂಡಿಸುವ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಸಿಲ್ವರ್ (ಬೆಳ್ಳಿ) ಹ್ಯಾಲೈಡುಗಳನ್ನು ಬಳಸುತ್ತಾರೆ. ಜೆಲಾಟಿನಿನ ಮೇಲೆ ಲೇಪಿಸಿರುವ ಸಿಲ್ವರ್ ಬ್ರೋಮೈಡನ್ನು ಬೆಳಕಿಗೆ ಒಡ್ಡಿದಾಗ, ಬೆಳಕು ಬಿದ್ದ ಸ್ಥಳಗಳಲ್ಲಿ ರಾಸಾಯನಿಕ ಬದಲಾವಣೆಗಳು ಉಂಟಾಗಿ ಸುಪ್ತಬಿಂಬ ಮೂಡುತ್ತದೆ. ಈ ಸ್ಥಿತಿಯಲ್ಲಿಫಿಲ್ಮ್ ಅಥವಾ ಪ್ಲೇಟನ್ನು ಪೊರೆ ಅಥವಾ ಫಲಕ ಅಪಕರ್ಷಣ ಗುಣವುಳ್ಳ ಪ್ರಸ್ಫುಟನಕಾರಿ (ಡೆವೆಲಪರ್ ದ್ರಾವಣವೊಂದರಲ್ಲಿಟ್ಟರೆ, ಬೆಳಕಿಗೆ ತೆರೆದಿಟ್ಟ ಬ್ರೋಮೈಡ್ ಭಾಗ ಮಾತ್ರ ಸಿಲ್ವರ್ ಲೋಹವಾಗಿ ಪರಿವರ್ತನೆ ಹೊಂದಿ ಬಿಂಬ ಗೋಚರಿಸುತ್ತದೆ. ಪ್ರಸ್ಫುಟನೆಯಾದ ಮೇಲೆ ಸ್ಥಾಯೀಕಾರಿ ದ್ರಾವಣದಲ್ಲಿ (ಫಿಕ್ಸರ್) ಫಿಲ್ಮ್ ಅಥವಾ ಪ್ಲೇಟನ್ನು ಇಟ್ಟರೆ ಬೆಳಕು ಸೋಕದಿರುವ ಸಿಲ್ವರ್ ಬ್ರೋಮೈಡ್ ಈ ದ್ರಾವಣದಲ್ಲಿ ವಿಲೀನಿಸಿ ಚಿತ್ರಬಿಂಬ ಸ್ಥಿರವಾಗಿ ಉಳಿಯುತ್ತದೆ. ಇದಕ್ಕೆ ಋಣಾತ್ಮಕ (ನೆಗೆಟಿವ್) ಎಂದು ಹೆಸರು. ಈ ಚಿತ್ರದಲ್ಲಿ ಬಿಳಿ ಭಾಗಗಳು ಕಪ್ಪಗೂ ಕಪ್ಪು ಭಾಗಗಳು ಬೆಳ್ಳಗೂ ಕಾಣುತ್ತವೆ. ಮೂಲವಸ್ತುವಿನ ಚಿತ್ರದ ಪ್ರತಿಕೃತಿಯನ್ನು ಹೊಂದಲು ನೆಗೆಟಿವನ್ನು ಬಳಸುತ್ತಾರೆ. ನಿಜಚಿತ್ರ ಮೂಡಿಬಂದಿರುವ ಫಿಲ್ಮ್ ಅಥವಾ ಪ್ಲೇಟಿಗೆ ಧನಾತ್ಮಕ (ಪಾಸಿಟಿವ್) ಎಂದು ಹೆಸರು. ಋಣಚಿತ್ರದ ಮೇಲೆ ದ್ಯುತಿಸಂವೇದಿ ಕಾಗದ ಇಟ್ಟು, ಋಣಾತ್ಮಕದ ಮೂಲಕ ಬೆಳಕು ಹಾಯಿಸಿದರೆ ಕಾಗದದ ಮೇಲೆ ಮೂಲವಸ್ತುವಿನ ಸುಪ್ತಚಿತ್ರ ಮೂಡುತ್ತದೆ. ಅನಂತರ ದ್ಯುತಿಸಂವೇದಿ ಕಾಗದವನ್ನು (ಫೋಟೋಸೆನ್ಸಿಟಿವ್ ಪೇಪರ್) ಪ್ರಸ್ಫುಟಗೊಳಿಸಿದರೆ, ಮೂಲ ವಸ್ತುವಿನ ನಿಜಚಿತ್ರ ಗೋಚರವಾಗುತ್ತದೆ.
	ಫೋಟೊಗ್ರಫಿಯ ಕಾರ್ಯವಿಧಾನದಲ್ಲಿ ಅನುಸರಿಸುವ ಹಂತಗಳು:
	(1) ಋಣಾತ್ಮಕ ಫಿಲ್ಮ್ ಅಥವಾ ಪ್ಲೇಟಿನ ತಯಾರಿಕೆ
	(2) ಫಿಲ್ಮ ಅಥವಾ ಪ್ಲೇಟನ್ನು ಬೆಳಕಿಗೆ ಒಡ್ಡುವಿಕೆ
	(3) ಪ್ರಸ್ಫುಟನೆ, ಸ್ಥಾಯೀಕರಣ, ಫಿಲ್ಮ್ ಅಥವಾ ಪ್ಲೇಟನ್ನು ತೊಳೆದು ಒಣಗಿಸುವುದು.
	(4) ದ್ಯುತಿಸಂವೇದಿ ಕಾಗದದ ತಯಾರಿಕೆ 
	(5) ಮೂಲವಸ್ತುವಿನ ನಿಜಚಿತ್ರದ ಮುದ್ರಣ
	(6) ಪ್ರಸ್ಫುಟನೆ, ಸ್ಥಾಯೀಕರಣ (ಶಾಶ್ವತಗೊಳಿಸುವುದು), ಧನಾತ್ಮಕವನ್ನು ತೊಳೆದು ಒಣಗಿಸುವುದು.
	(i) ಫೋಟೊಗ್ರಫಿಯ ಸಿದ್ಧಾಂತ: ಋಣಾತ್ಮಕದಲ್ಲಿ ಮೂಡಿರುವ ಬಿಂಬವನ್ನು ಅತಿಸಾಮಥ್ರ್ಯವುಳ್ಳ ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿದರೆ ಆ ಬಿಂಬ ಅವಿಚ್ಛಿನ್ನವಾಗಿರದೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳ್ಳಿಯ ಚಿಕ್ಕ ಚಿಕ್ಕ ಕಪ್ಪು ಕಣಗಳನ್ನು ಹೊಂದಿರುವುದು ಗೋಚರವಾಗುತ್ತದೆ. ಇವು ಫಿಲ್ಮಿನಲ್ಲಿ ಪೂರ್ವಭಾವಿಯಾಗಿ ಉಪಯೋಗಿಸಿದ ಎಮಲ್ಶನ್ನುಗಳಿಂದ ಉಂಟಾದವು. ಫೋಟೊಗ್ರಾಫಿಕ್ ಎಮಲ್ಶನ್ನುಗಳಲ್ಲಿ ಸಾಮಾನ್ಯವಾಗಿ ಸಿಲ್ವರ್ ಬ್ರೋಮೈಡನ್ನು ಜಿಲಾಟಿನ್ ರೂಪದಲ್ಲಿ ವಿತರಣೆ ಮಾಡಿರುತ್ತಾರೆ. ಈ ರಾಸಾಯನಿಕದ ಸ್ಫಟಿಕಗಳು ಸಾಮಾನ್ಮವಾಗಿ ಸಮತಲ, ತ್ರಿಕೋಣ ಇಲ್ಲವೆ ಷಡ್ಭುಜದ ಆಕೃತಿಯಲ್ಲಿರುತ್ತವೆ. ಕೆಲವೊಮ್ಮೆ ಕೋಲಿನ ಆಕಾರವೂ ಇರುವುದುಂಟು. ಕೆಲವು ಎಮಲ್ಯನ್ನುಗಳಲ್ಲಿ ಸ್ಫಟಿಕದ ಆಕಾರ ಕಾಣಿಸಿಕೊಳ್ಳದೆ ಇರಬಹುದು. ಈ ಬಗೆಯ ಸಿಲ್ವರ್ ಬ್ರೋಮೈಡ್ ಕಣಗಳಿಗೆ ಹಲವಾರು ಗಾತ್ರಗಳುಂಟು. ಸಾಮಾನ್ಯ ಫಿಲ್ಮಿನಲ್ಲಿ ಒಂದು ಸೆಂಟಿಮೀಟರಿಗೆ ಹಲವಾರು ದಶಕೋಟಿ ಕಣಗಳಿರುತ್ತವೆ. ಸಿಲ್ವರ್ ಹ್ಯಾಲೈಡ್ ಅಂಶವೆಲ್ಲವೂ ಸ್ಫಟಿಕರೂಪದಲ್ಲೆ ಇರುವುದೆಂಬ ಸಂಗತಿ ಎಕ್ಸ್‍ಕಿರಣ ಪರೀಕ್ಷೆಯಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ಸಿಲ್ವರ್ ನೈಟ್ರೇಟ್ ಮತ್ತು ಪೊಟ್ಯಾಸಿಯಮ್ ಬ್ರೋಮೈಡುಗಳ ದ್ರಾವಣಗಳನ್ನು (ನೀರಿನಲ್ಲಿ) ಬೆರೆಸಿದರೆ ಸಿಲ್ವರ್ ಬ್ರೋಮೈಡ್ ಒತ್ತರಗೊಳ್ಳುತ್ತದೆ (ಪ್ರೆಸಿಪಿಟೇಟ್). ದ್ರಾವಣದಲ್ಲಿ ಜಿಲಾಟಿನ್ ಇದ್ದ ಪಕ್ಷಕ್ಕೆ ಸಿಲ್ವರ್ ಬ್ರೋಮೈಡ್ ಒತ್ತರಗೊಳ್ಳದೆ ಸೂಕ್ಷ್ಮಕಣಗಳ ರೂಪದಲ್ಲಿ ಜಿಲಾಟಿನ್ನಿನಲ್ಲೇ ನಿಲಂಬನಗೊಳ್ಳುತ್ತದೆ. ಆಗ ಹೆಚ್ಚಿಗೆ ಜಿಲಾಟಿನ್ನನ್ನು ದ್ರಾವಣಕ್ಕೆ ಸೇರಿಸಿ ನಿಲಂಬನವನ್ನು ತೊಳೆದು ಪಾಚನಗೊಳಿಸಬೇಕು. ಇದರಿಂದ ಸಿಲ್ವರ್ ಬ್ರೋಮೈಡ್ ಸ್ಫಟಿಕದ ಗಾತ್ರದಲ್ಲೇನೂ ವ್ಯತ್ಯಾಸವಾಗುವುದಿಲ್ಲ: ಆದರೆ ಬೆಳಕಿಗಾಗಿ ಇರುವ ಸಂವೇದಿತ್ವ ಹೆಚ್ಚಾಗುತ್ತದೆ. ಈ ಅಂಶ ಬಳಸಿದ ಜಿಲಾಟಿನ್ ಸ್ವಭಾವವನ್ನು ಅವಲಂಬಿಸಿದೆ.
	ಫೋಟೊಎಮಲ್ಯನ್ ಲೇಪಿಸಿರುವ ಫಿಲ್ಮನ್ನು ಬೆಳೆಕಿಗೆ ಒಡ್ಡಿದರೆ ಸುಪ್ತಕ್ರಿಯೆ ನಡೆದು ಅದರ ಮೆಲೆ ಸುಪ್ತಬಿಂಬ ಮೂಡುತ್ತದೆ. ಎಮಲ್ಯನ್ನನ್ನು ರಾಸಾಯನಿಕ ಅಪಕರ್ಷಕಾರಿಯಿಂದ ಪ್ರಸ್ಫುಟನಗೊಳಿಸಿದಾಗ ಇದು ಜರಗುತ್ತದೆ. ಪ್ರಸ್ಫುಟನ ಕ್ರಿಯೆಯಲ್ಲಿ ಬೆಳೆಕಿಗೆ ಫಿಲ್ಮನ್ನು ಒಡ್ಡಿದ ಅದಧಿ ಮತ್ತು ಪ್ರಸ್ಫುಟನ ಅವಧಿಗಳಿಗೆ ಅನುಗುಣವಾಗಿ ಎಮಲ್ಯನ್ ಕಪ್ಪಾಗುತ್ತದೆ. ಫಿಲ್ಮಿನ ಮೇಲಿನ ಕಪ್ಪು ಅಂಶಕ್ಕೆ ಸಾಂದ್ರತೆ (ಡೆನ್ಸಿಟಿ) ಎಂದು ಹೆಸರು. ಪ್ರಸ್ಫುಟನೆಗೊಂಡ ಸಿಲ್ವರ್ ಕಣಗಳ ಕಾರಣವಾಗಿ ಇದು ಉಂಟಾಗುತ್ತದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಸಿಲ್ವರ್ ಕಣಗಳಿವೆಯೋ ಅಲ್ಲಿ ಸಾಂದ್ರತೆ ಹೆಚ್ಚು. ಸಾಮಾನ್ಯವಾಗಿ ದೊಡ್ಡ ಸ್ಫಟಿಕಗಳು ಚಿಕ್ಕ ಸ್ಫಟಿಕಗಳಿಗಿಂತಲೂ ಬೆಳಕಿಗೆ ಹೆಚ್ಚಿನ ಸಂವೇದಿತ್ವ ಪಡೆದಿರುತ್ತವೆ.
	ಸುಪ್ತಬಿಂಬ ಕೆಲವು ಕೇಂದ್ರಗಳಲ್ಲಿ ಮಾತ್ರ ಶೇಖರವಾಗೆರುವಂತೆ ತೋರುತ್ತದೆ. ಇವಕ್ಕೆ ಮೂಲ ಎಮಲ್ಯನ್ನಿನ ಸಂವೇದನಶೀಲತಾ ಕೇಂದ್ರಗಳೆಂದು ಹೆಸರು. ಇವು ಸಿಲ್ವರ್ ಸಲ್ಛೈಡ್ ಕಣಗಳಿರಬಹುದೆಂಬ ವಾದವೂ ಉಂಟು.
	(ii) ಸುಪ್ತ್ತಬಿಂಬದ ಸಿದ್ಧಾಂತ: ಫೋಟೊಗ್ರಪಿಕ್ ಫಿಲ್ಮ್ ಅಥವಾ ಪ್ಲೇಟನ್ನು ಬೆಳಕಿಗೆ ಒಡ್ಡಿದಾಗ ಉಂಟಾಗುವ ಬದಲಾವಣೆಗಳನ್ನು ವಿವರಿಸುವ ಸಿದ್ಧಾಂತಗಳು ಹಲವು. ಸಮರ್ಪಕ ವಿವರಣೆಯನ್ನು ಗರ್ನಿ ಮತ್ತು ಮಾಟ್ ಎಂಬವರು ಕ್ವಾಂಟಮ್ ಸಿದ್ಧಾಂತದ ಮೂಲಕ ನೀಡಿದ್ದಾರೆ. ಇವರ ಸಿದ್ಧಾಂತದ ಪ್ರಕಾರ ಸುಪ್ತಬಿಂಬ ಮೂಡಿದಾಗ ಉಂಟಾಗುವ ಪೂರ್ಣ ಕ್ರಿಯೆಯಲ್ಲಿ ಸಿಲ್ವರ್ ಬ್ರೋಮೈಡಿನಲ್ಲಿರುವ ಸಿಲ್ವರ್ ಮತ್ತು ಬ್ರೋಮೈಡ್ ಅಯಾನುಗಳು ಸಿಲ್ವರ್ ಮತ್ತು ಬ್ರೊಮೀನ್ ಪರಮಾಣುಗಳಾಗಿ ಪರಿವರ್ತನೆಗೊಳ್ಳುತ್ತವೆ:
ಂg+ + ಃಡಿ - → ಂg + ಃಡಿ
ಈ ಬದಲಾವಣೆಯ ಕ್ರಿಯಾವಿನ್ಯಾಸ ತಿಳಿದುಕೊಳ್ಳಲು ಸಿಲ್ವರ್ ಲೋಹ ಮತ್ತು ಸಿಲ್ವರ್ ಬ್ರೋಮೈಡ್ ಸ್ಫಟಿಕಗಳಲ್ಲಿರುವ ಶಕ್ತಿಮಟ್ಟಗಳನ್ನು ಪರಿಶೀಲಿಸಬೇಕು. ಇವನ್ನು ಚಿತ್ರದಲ್ಲಿ ತೋರಿಸಿದೆ. 

ಚಿತ್ರ-6

ಇದರಲ್ಲಿ ಗೆರೆ ಎಳೆದಿರುವ ಠಿ ಬ್ಯಾಂಡು ಬ್ರೋಮೈಡ್ ಅಯಾನು ಎಲೆಕ್ಟ್ರಾನುಗಳಿಂದ ಪೂರ್ಣವಾಗಿ ತುಂಬಿದೆ. ಶೂನ್ಯವಾಗಿರುವ s ಬ್ಯಾಂಡು ಸಿಲ್ವರ್ ಲೋಹದ ವಿದ್ಯುದ್ವಾಹಕ ಮಟ್ಟಕ್ಕೆ ಸಮವಾಗಿದೆ. ಸಿಲ್ವರ್ ಹ್ಯಾಲೈಡ್ ಸ್ಫಟಿಕದಲ್ಲಿ ವೇಲೆನ್ಸ್ ಎಲೆಕ್ಟ್ರಾನುಗಳೆಲ್ಲ ಬ್ರೋಮೀನಿಗೆ ಸೇರಿರುವುದರಿಂದ ಸಿಲ್ವರ್ ಬ್ರೋಮೈಡ್ ಸ್ಫಟಿಕದಲ್ಲಿ ಈ ಮಟ್ಟ ಶೂನ್ಯವಾಗಿರುತ್ತದೆ. ಈ ಸ್ಫಟಿಕವನ್ನು ವಿಕಿರಣನಗೊಳಿಸಿದರೆ ಇದು ಬೆಳಕಿನ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದರಿಂದ ಠಿ ಬ್ಯಾಂಡಿನ ಒಂದು ಎಲೆಕ್ಟ್ರಾನ್ s ಬ್ಯಾಂಡಿಗೆ ಜಿಗಿಯುತ್ತದೆ. s ಬ್ಯಾಂಡ್ ಶೂನ್ಯವಾಗಿರುವುದರಿಂದ ಜಿಗಿದ ಎಲೆಕ್ಟ್ರಾನ್ ಬ್ಯಾಂಡಿನಲ್ಲಿ ನಿರಾತಂಕವಾಗಿ ಓಡಾಡಬಲ್ಲದು. ಈ ಸ್ಫಟಿಕದ ಮೂಲಕ ವಿದ್ಯುತ್ ವಿಭವವನ್ನು ಹಾಯಿಸಿದರೆ  ಬ್ಯಾಂಡಿನಲ್ಲಿರುವ ಎಲೆಕ್ಟ್ರಾನ್ ಧನಧ್ರುವವನ್ನು ಬಂದುಸೇರಿ ಸ್ಫಟಿಕವನ್ನು ವಿದ್ಯುದ್ವಾಹಕವಾಗಿ ಮಾಡುತ್ತದೆ. ಈ ದ್ಯುತಿವಿದ್ಯುದ್ವಾಹತ್ವ ವಿದ್ಯುತ್ತಿನ ವಿದ್ಯುದ್ಬಲದ ಬದಲು ಬೆಳಕಿನ ತೀವ್ರತೆಯನ್ನು ಅವಲಂಬಿಸಿರುತ್ತದೆ. ಈ ಅಂಶದಿಂದ s ಬ್ಯಾಂಡಿನ ಎಲ್ಲ ಎಲೆಕ್ಟ್ರಾನುಗಳೂ ಧನಧ್ರುವದ ಕಡೆ ಹೋಗಬೇಕಾದರೆ ನಡುವೆ ಯಾವುದೋ ಅಡಚಣೆಯಿದೆಯೆಂದು ಗೊತ್ತಾಗುತ್ತದೆ. ಇದರ ಪರಿಶೀಲನೆಗೆ ಸಿಲ್ವರ್ ಲೋಹದ ಶಕ್ತಿಮಟ್ಟಗಳ ರಚನೆ ನೆರವಾಗುವುದು. ಇದನ್ನು ಚಿತ್ರದಲ್ಲ್ಲಿ ತೋರಿಸಿದೆ. ಇಲ್ಲಿ ಸಿಲ್ವರ್ ಬ್ರೋಮೈಡಿನ ವಿದ್ಯುದ್ವಾಹಕ ಮಟ್ಟದಲ್ಲಿಯ ಕನಿಷ್ಠ ಶಕ್ತಿಮಟ್ಟ ಸಿಲ್ವರ್ ಲೋಹದ ವಿದುದ್ವಾಹಕದ ಮಟ್ಟದಲ್ಲಿಯ ಕನಿಷ್ಠ ಶಕ್ತಿಮಟ್ಟಕ್ಕಿಂತಲೂ ಎತ್ತರದಲ್ಲಿದ್ದರೆ ಸಿಲ್ವರ್ ಬ್ರೋಮೈಡಿನಲ್ಲಿ ಹಾಯುತ್ತಿರುವ ಎಲೆಕ್ಟ್ರಾನು ಸಿಲ್ವರ್ ಕಣದಲ್ಲಿ ಬಂಧನಕ್ಕೆ ಒಳಗಾಗುತ್ತದೆ. ಇದರಿಂದಾಗಿ ಕೊಂಚಮಟ್ಟಿನ ಶಕ್ತಿಯೂ (∆ಇ) ಬಿಡುಗಡೆ ಹೊಂದುವುದು. ಆದ್ದರಿಂದ ಸಿಲ್ವರ್ ಲೋಹದ ಪರಮಾಣು ಅಥವಾ ಕಣಕಳು ಎಲೆಕ್ಟ್ರಾನುಗಳನ್ನು ಅವು ಧನಧ್ರುವವನ್ನು ತಲುಪದ ಹಾಗೆ ಮಾಡಿ ಬಂಧಿಸುತ್ತವೆಂದು ತಿಳಿದುಬರುತ್ತದೆ. 

ಚಿತ್ರ-7

ಹೀಗೆ ಸಾಮಾನ್ಯವಾಗೆ ಆಗುವುದು ವೋಲ್ಟೇಜ್ ಹೆಚ್ಚಾಗಿದಿದ್ದಲ್ಲಿ ಮಾತ್ರ ಗರ್ನಿ ಮತ್ತು ಮಾಟ್ ಎಂಬವರು ನಿರೂಪಿಸಿರುವ ಸಿದ್ಧಾಂತದಲ್ಲಿ ಸ್ಫಟಿಕದಲ್ಲಿರುವ ತೆರಪಿನ ಅಯಾನುಗಳ (ಇಂಟರ್‍ಸ್ಟಿಷಲ್ ಅಯಾನ್ಸ್) ವಿಚಾರ ಇದೆ. ಸಾಮಾನ್ಯವಾಗಿ ಪ್ರತಿಯೊಂದು ಸ್ಫಟಿಕಲ್ಲೂ ಪರಮಾಣು ಅಥವಾ ಅಯಾನುಗಳು ಕ್ರಮಬದ್ಧ ರಚನೆಯಲ್ಲಿರುತ್ತವೆ. ಆದರೆ ಹಲವಾರು ಕಾರಣಗಳಿಂದ ಅಯಾನುಗಳು ತಮ್ಮ ಸ್ಥಾನದಿಂದ ಕದಲಿ ತೆರಪಿನಲ್ಲಿ (ಎರಡು ಅಯಾನ್ ಸಾಲುಗಳ ನಡುವೆ) ಬಂದು ನಿಂತರೆ ಅಂಥ ಸನ್ನಿವೇಶಕ್ಕೆ ಫ್ರೆಂಕಲ್ ದೋಷ ಎಂದೂ ಒಂದುವೇಳೆ ಅಯಾನು ಸ್ಫಟಿಕದ ಹೊರಭಾಗಕ್ಕೆ ಬಂದರೆ ಅಂಥ ಸನ್ನಿವೇಶಕ್ಕೆ ಷಾಟ್ಕಿದೋಷ ಎಂದೂ ಹೆಸರು. ಸಿಲ್ವರ್ ಹ್ಯಾಲೈಡುಗಳಲ್ಲಿ ಹೆಚ್ಚಿಗೆ ಫ್ರೆಂಕಲ್ ದೋಷಗಳಿರುತ್ತವೆಂದು ಅಂದಾಜು. ಇದನ್ನು ಚಿತ್ರದಲ್ಲ್ಲಿ ತೋರಿಸಿದೆ. 

ಚಿತ್ರ-8

ಗರ್ನಿ-ಮಾಟ್ ಅವರ ಸಿದ್ಧಾಂತದಲ್ಲಿ ಈ ಅಂಶ ಸೇರಿದೆ. ಸಿಲ್ವರ್ ಹ್ಯಾಲೈಡ್ ಸ್ಫಟಿಕಗಳನ್ನು ವಿಕಿರಣನಕ್ಕೆ ಒಳಪಡಿಸಿದಾಗ ಠಿ ಬ್ಯಾಂಡಿನಿಂದ ವಿದ್ಯುದ್ವಾಹಕ s ಬ್ಯಾಂಡಿಗೆ ಜಿಗಿಯುತ್ತದಷ್ಟೆ, ಇದು ಸ್ಫಟಿಕದಲ್ಲಿ ಓಡಾಡುವಾಗ ಸಿಲ್ವರ್ ಕಣವೊಂದರಲ್ಲಿ ಬಂಧನಕ್ಕೆ ಒಳಪಟ್ಟರೆ ಆ ಕಣ ಋಣವಿದ್ಯುದಾವಿಷ್ಟವಾಗುತ್ತದೆ. ಇಂಥ ಕಣ ತೆರಪಿನಲ್ಲಿರುವ ಂg+ ಅಯಾನುಗಳನ್ನು ಆಕರ್ಷಿಸುವ ಸಾಧ್ಯತೆ ಉಂಟು. ಈ ರೀತಿ ವಲಸೆ ಬಂದ ಅಯಾನ್ ಸಿಲ್ವರ್ ಕಣದಲ್ಲಿರುವ ಎಲೆಕ್ಟ್ರಾನಿನಿಂದ ತಟಸ್ಥಗೊಂಡು ಸಿಲ್ವರ್ ಪರಮಾಣುವಾಗಿ ಮಾರ್ಪಟ್ಟು ಸಿಲ್ವರ್ ಕಣಕ್ಕೆ ಅಂಟಿಕೊಳ್ಳುತ್ತದೆ. ಇದರಿಂದ ಸಿಲ್ವರ್ ಕಣದ ಗಾತ್ರ ಹೆಚ್ಚಾಗುತ್ತದೆ. ಪ್ರಸ್ಫುಟನ ಕಾರ್ಯದಲ್ಲಿ ಅಗತ್ಯವಾದ ಸಂವೇದಶೀಲ ಕೇಂದ್ರಗಳು ಉಂಟಾಗಲು ಇಂಥ ಕಣಗಳೇ ಕಾರಣ.
	(iii) ಫೋಟೊಗ್ರಾಫಿಕ್ ಪ್ರಸ್ಫುಟನಕಾರಿಗಳು: ಬೆಳಕಿಗೆ ಒಡ್ಡಿದ ಸಿಲ್ವರ್ ಹ್ಯಾಲೈಡ್ ಕಣಗಳನ್ನು ಮಿತವಾಗಿ ಆಕರ್ಷಿಸಲು ಕೆಲವು ರಾಸಾಯನಿಕ ವಸ್ತುಗಳನ್ನು ದ್ರಾವಣರೂಪದಲ್ಲಿ ಬಳಸುತ್ತಾರೆ. ಇವೇ ಪ್ರಸ್ಫುಟನಕಾರಿಗಳು. ಸಿಲ್ವರ್ ಹ್ಯಾಲೈಡ್ ಅಣುಗಳು ಸಿಲ್ವರ್ ಲೋಹವಾಗಿ ಮಾರ್ಪಟ್ಟು ಸುಪ್ತಬಿಂಬ ಮೂಡುತ್ತದೆ. ಪ್ರಸ್ಫುಟನಕಾರಿಗಳಾದರೊ ಉತ್ಪತ್ತಿಯಾದ ಸಿಲ್ವರ್ ಲೋಹದ ಪರಮಾಣುಗಳನ್ನು ಸಿಲ್ವರ್ ನಿಕ್ಷೇಪನವಾಗಿ (ಡಿಪಾಸಿಟ್) ಪರಿವರ್ತಿಸಿ ಬಿಂಬ ಮೂಡುವಂತೆ ಮಾಡುತ್ತವೆ. ಸಾಮಾನ್ಯವಾಗಿ ಪ್ರಸ್ಫುಟನಕಾರಿ ದ್ರಾವಣಗಳಲ್ಲಿ ನಾಲ್ಕು ಘಟಕಗಳಳಿರುತ್ತವೆ. ಈ ವಿಂಗಡಣೆ ಅವುಗಳ ಕ್ರಿಯೆಗಳನ್ನು ಅವಲಂಬಿಸಿದೆ. ಘಟಕಗಳಿವು: (1) ಪ್ರಸ್ಫುಟನನಕಾರಿಗಳು (2) ಪರಿರಕ್ಷಗಳು, (3) ಉತ್ತೇಜಕಗಳು ಮತ್ತು (4) ಅವರೋಧಕಗಳು. ಹಲವು ಬಾರಿ ಪ್ರಸ್ಫುಟನಕಾರಿ ದ್ರಾವಣ ನಾಲ್ಕಕ್ಕಿಂತ ಕಡಿಮೆ ಘಟಕಗಳನ್ನು ಹೊಂದಿದ್ದು, ಅವುಗಳ ಪೈಕಿ ಒಂದೇ ಒಂದು ಘಟಕ ದ್ವಿಕ್ರಿಯಾಸಾಮಥ್ರ್ಯ ಹೊಂದಿರುವಂಥ ಸಂದರ್ಭಗಳುಂಟು. ಇನ್ನು ಕೆಲವು ಸಂದರ್ಭಗಳಲ್ಲಿ ಈ ನಾಲ್ಕು ಘಟಕಗಳ ಜೊತೆಗೆ ಇನ್ನು ಕೆಲವು ವಸ್ತುಗಳನ್ನು ಬೆರೆಸಿದಾಗ ಅಪೇಕ್ಷಿತ ಕ್ರಿಯೆ ಜರಗುವಂತಾಗಲು ಪ್ರಸ್ಫುಟನಕಾರಿ ದ್ರಾವಣ ಅರ್ಹವಾಗುತ್ತದೆ.
	1 ಪ್ರಸ್ಫುಟನಕಾರಿಗಳು (ಡೆವಲಪಿಂಗ್ ಏಜೆಂಟ್ಸ್): ಬೆಳಕಿಗೆ ಒಡ್ಡಿದ ಸಿಲ್ವರ್ ಹ್ಯಾಲೈಡ್ ಕಣಗಳನ್ನು ಮಾತ್ರ ಆಯ್ದುಕೊಂಡು ಅವನ್ನು ಸಿಲ್ವರ್ ಕಣಗಳಾಗಿ ಪರಿವರ್ತಿಸಲು ಉಪಯೋಗಿಸುವ ರಾಸಾಯನಿಕಗಳಿವು. ಇವು ಇನಾಗ್ರ್ಯಾನಿಕ್ ಇಲ್ಲವೆ ಆಗ್ರ್ಯಾನಿಕ್ ಸಂಯುಕ್ತಗಳಾಗಿರಬಹುದು. ಪ್ರಸ್ಫುಟನಕಾರಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. (ಎ) ರಾಸಾಯನಿಕ ವಸ್ತುಗಳಲ್ಲಿ ಲೋಹವಿದ್ದು ಅದರ ವೇಲೆನ್ಸಿ ವ್ಯತ್ಯಾಸವಾಗುವ ಸಾಧ್ಯತೆಯಿರುವಂಥವು; (ಬಿ) ಲೋಹವಿಲ್ಲದಿರುವ ರಾಸಾಯನಿಕ ಸಂಯುಕ್ತ ಅಥವಾ ಲೋಹವಿದ್ದರೂ ವೇಲೆನ್ಸಿ ಬದಲಾವಣೆಯಾಗದಿರುವಂಥವು.
	ಇನಾಗ್ರ್ಯಾನಿಕ್ ಸಂಯುಕ್ತಗಳು ಮತ್ತು ಆಗ್ರ್ಯಾನಿಕ್ ಆಮ್ಲಗಳ ಲೋಹ ಲವಣಗಳು ಮೊದಲನೆಯ ವರ್ಗಕ್ಕೆ ಸೇರುತ್ತವೆ. ಎರಡನೆಯ ವರ್ಗಕ್ಕೆ ಆಗ್ರ್ಯಾನಿಕ್ ಪ್ರಸ್ಫುಟನಕಾರಿಗಳು ಮತ್ತು ಇನಾಗ್ರ್ಯಾನಿಕ್ ಪ್ರಸ್ಫುಟನಕಾರಿಗಳಾದ ಪೆರಾಕ್ಸೈಡ್ ಹೈಡ್ರಾಕ್ಸಿಲಮೈನ್ ಮತ್ತು ಸೋಡಿಯಮ್ ಹೈಡ್ರೊಸಲ್ಛೈಟ್ ಸೇರುತ್ತವೆ.
	ಇನಾಗ್ರ್ಯಾನಿಕ್ ಪ್ರಸ್ಫುಟನಕಾರಿಗಳು: ಫೆರಸ್ ಫ್ಲೊರೈಡ್, ಆಕ್ಸಲೇಟ್ ಮತ್ತು ಸಿಟ್ರೀಟುಗಳು. ಕುಪ್ರಿಕ್ ಕ್ಲೋರೈಡ್, ಕ್ಯುಪ್ರಸ್ ಬ್ರೋಮೈಡ್, ಮತ್ತು ಅಯೊಡೈಡುಗಳು, ಸೋಡಿಯಮ್ ಹೈಡ್ರೊಸಲ್ಫೈಟ್, ಹೈಡ್ರೊಜನ್, ಪೆರಾಕ್ಸೈಡ್, ಹೈಡ್ರಾಕ್ಸಿಲಮೈನ್ ಮತ್ತು ಹೈಡ್ರಜೀನ್. ಇವು ವ್ಯಾವಹಾರಿಕವಾಗಿ ಅಷ್ಟೇನೂ ಮುಖ್ಯವಲ್ಲ. ಇವುಗಳ ಪೈಕಿ ಕೆಲವುಗಳಿಂದ ಒದಗುವ ಉತ್ಪನ್ನಗಳಿಂದ ಫೋಟೊಗ್ರಾಫಿಕ್ ಎಮಲ್ಯನ್ನಿಗೆ ಹಾನಿಯಾಗುವ ಸಂಭವವೂ ಉಂಟು.
	ಆಗ್ರ್ಯಾನಿಕ್ ಪ್ರಸ್ಫುಟನಕಾರಿಗಳು: ಆಗ್ರ್ಯಾನಿಕ್ ಸಂಯುಕ್ತಗಳ ಪೈಕಿ ಕೆಲವನ್ನು ಕಪ್ಪು ಬಿಳುಪು ಪೋಟೊಗ್ರಫಿಗಳಲ್ಲಿ ಮಾತ್ರ ಉಪಯೋಗಿಸಬಹುದಾದರೆ ಮತ್ತೆ ಕೆಲವನ್ನು ಕಪ್ಪು ಬಿಳುಪು ಮತ್ತು ಬಣ್ಣದ ಫೋಟೊಗ್ರಫಿಯಲ್ಲೂ ಬಳಸಬಹುದು. ಆಗ್ರ್ಯಾನಿಕ್ ಪ್ರಸ್ಫುಟನಕರಿಗಳೆಲ್ಲ ಬಹುವಾಗಿ ಹೈಡ್ರೊಜನ್ ಪೆರಾಕ್ಸೈಡ್, ಹೈಡ್ರಾಕ್ಸಿಲಮೈನ್ ಮತ್ತು ಹೈಡ್ರಜೀನುಗಳ ಆಗ್ರ್ಯಾನಿಕ್ ವ್ಯುತ್ಪನ್ನಗಳೇ. ಇವನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು.
	(1)-ಓಊ2 ಗುಂಪಿನ ಎರಡು ಹೈಡ್ರೋಜನ್ ಪರಮಾಣುಗಳನ್ನೂ ಪ್ರತಿ ಸ್ಥಾಪನೆ (ಸಬ್‍ಸ್ಟಿಟ್ಯೂಷನ್) ಮಾಡಿದಾಗ ಲಭಿಸುವ ವ್ಯುತ್ಪನ್ನಗಳು.
	(2) —ಔಊ ಮತ್ತು -ಓಊ2 ಗುಂಪುಗಳ ಮಧ್ಯೆ ಆಗ್ರ್ಯಾನಿಕ್ ರ್ಯಾಡಿಕಲುಗಳಿಂದಾಗಿ ಉಂಟಾಗಿರುವ ವ್ಯುತ್ಪನ್ನಗಳು.
	(3) ಲಾಕ್ಷಣಿಕ —ಔಊ ಮತ್ತು -ಓಊ2 ಗುಂಪುಗಳನ್ನು ಒಳಗೊಂಡಿರುವ ಆಲಿ ಫ್ಯಾಟಿಕ್ ಸಂಯುಕ್ತಗಳು.
	ಆಗ್ರ್ಯಾನಿಕ್ ವೃದ್ಧಿಕಾರಕಳಿಗೆ ಉದಾಹರಣೆ: ಅಮಿಡೋಲ್, ಕೆಟಕಾಲ್, ಕ್ಲೋರೊಹೈಡ್ರೊಕ್ವಿನೋನ್, ಗ್ಲೈಸಿನ್, ಹೈಡ್ರೋಕ್ವಿನೋನ್, ಮೆಟಾಲ್, ಪ್ಯಾರ ಅಮೀನೋಫೀನಾಲ್, ಪ್ಯಾರಫಿನಿಲೀನ್ ಡೈಅಮೈನ್, ಪ್ಯಾರಾಫಾರ್ಮಾಲ್ಡಿಹೈಡ್, ಪೈರೊಗಲ್ಲಾಲ್. ಆದರೆ ಈಗಿನ ಪ್ರಸ್ಫುಟನಕಾರಿ ದ್ರಾವಣಗಳಲ್ಲಿ ಮೆಟಾಲ್ ಮತ್ತು ಹೈಡ್ರೊಕ್ವಿನೋನುಗಳೆರಡನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಗ್ಲೈಸಿನ್, ಕ್ಲೋರೊಹೈಡ್ರೊಕ್ವಿನೋನ್ ಅಥವಾ ಪೈರೊ ಗಲ್ಲಾಲುಗಳನ್ನು ಮೂರನೆಯ ಘಟಕವಾಗಿ ಪ್ರಸ್ಫುಟನಕಾರಿ ದ್ರಾವಣಕ್ಕೆ ಬೆರೆಸಬಹುದು. ಮತ್ತೆ ಕೆಲವು ಸಂದರ್ಭಗಳಲ್ಲಿ ಹೈಡ್ರೊಕ್ವಿನೋನ್ ಒಂದನ್ನೇ ಬಳಸಬಹುದು. ಆಗ ಕ್ಷಾರಸ್ಯಭಾವ ಮತ್ತು ಅವರೋಧಕದ ಅಂಶವನ್ನು ವ್ಯತ್ಯಾಸಗೊಳಿಸಿದರೆ, ಎಂಥ ಸುಪ್ತಚಿತ್ರವನ್ನಾದರೂ ಪ್ರಸ್ಫುಟನಗೊಳಿಸಬಹುದು.
	2 ಪರಿರಕ್ಷಕಗಳು(ಪ್ರಿಸರ್‍ವೆಟಿವ್ಸ್): ಫೋಟೊಗ್ರಫೀಕ್ ಪ್ರಸ್ಫುಟನಕಾರಿಗಳು ದ್ರಾವಣಸ್ಥಿತಿಯಲ್ಲಿದ್ದಾಗ ವಾಯುವಿನಲ್ಲಿರುವ ಆಕ್ಸಿಜನ್ನಿನಿಂದ ಅಪ್ರಾಪ್ತ ಉತ್ಕರ್ಷಣ ಹೊಂದುವ ಸಂಭವವಿದೆ. ಉತ್ಕರ್ಷಿತ ದ್ರಾವಣಗಳು ಪ್ರಸ್ಫುಟನ ಕಾರ್ಯಕ್ಕೆ ಅನರ್ಹ. ಆದ್ದರಿಂದ ಈ ರೀತಿಯ ಉತ್ಕರ್ಷಣವನ್ನು ತಡೆಯಲು ಕೆಲವು ರಾಸಾಯನಿಕ ಪರಿರಕ್ಷಕಗಳನ್ನು ಪ್ರಸ್ಫುಟನಕಾರಿ ದ್ರಾವಣಕ್ಕೆ ಸೇರಿಸಬೇಕಾಗುತ್ತದೆ. ಸಾಮಾನ್ಯವಾಗಿ ಸೋಡಿಯಮ್ ಸಲ್ಛೈಟ್ ಹರಳುಗಳನ್ನು ಪರಿರಕ್ಷಕವಾಗೆ ಉಪಯೋಗಿಸಬಹುದು. ದ್ರಾವಣದ ಠಿಊಅನ್ನು ಅಧಿಕಗೊಳಿಸಬೇಕಾದರೆ ಸೋಡಿಯಮ್ ಬೈಸಲ್ಛೈಟ್ ಮತ್ತು ಪೊಟ್ಯಾಸಿಯಮ್ ತಯೊಸಲ್ಛೈಟುಗಳನ್ನು ಹೆಚ್ಚಿನ ಪರಿರಕ್ಷಗಳಾಗಿ ಉಪಯೋಗಿಸಬೇಕು. ಸೋಡಿಯಮ್ ಬೈಸಲ್ಛೈಟ್ ಹೊಂದಿರುವ ದ್ರಾವಣಗಳು ಅತ್ಯುತ್ತಮ ಪರಿರಕ್ಷಣಸಾಮಥ್ರ್ಯ ಹೊಂದಿರುತ್ತವೆ.
	ಪರಿರಕ್ಷಣ ಕಾರ್ಯದಲ್ಲಿ ಸೋಡಿಯಮ್ ಸಲ್ಛೈಟ್ ಸೋಡಿಯಮ್ ಸಲ್ಛೈಟ್ ಆಗಿ ಉತ್ಕರ್ಷಣ ಹೊಂದುವುದೆಂದು ತಿಳಿದಿದ್ದರೂ ಇಲ್ಲಿ ಜರಗುವ ರಾಸಾಯನಿಕ ಕ್ರಿಯೆ ಜಟಿಲವಾದುದಾಗಿದ್ದು ಇದರಲ್ಲಿಯ ಕ್ರಿಯಾವಿನ್ಯಾಸ ಪೂರ್ಣವಾಗಿ ತಿಳಿದು ಬಂದಿಲ್ಲ.
	ಪ್ರಸ್ಫುಟನಕಾರಿಯ ಪರಿರಕ್ಷಣಕಾರ್ಯ ಕೆಲವೊಂದು ಸಲ ವಿವಿಧ ಪರಿಣಾಮಗಳಿಂದ ಜಟಿಲಗೊಳ್ಳಬಹುದು. ಉದಾಹರಣೆಗೆ, ಹೈಡ್ರೊಕ್ವಿನೋನ್ನ ಪ್ರಸ್ಫುಟನಕಾರಿ ದ್ರಾವಣಕ್ಕೆ ಸೋಡಿಯಮ್ ಸಲ್ಛೈಟನ್ನು ಬೆರೆಸಿದರೆ ಈ ಕಾರಕವೇ ಸಲ್ಛೈಟ್ ಉತ್ಕರ್ಷಣಗೊಳ್ಳುವುದನ್ನು ರಕ್ಷಿಸಬಹುದು. ಎಷ್ಟೋ ವೇಳೆ. ಎರಡು ಪ್ರಸ್ಫುಟನಕಾರಿಗಳಿರುವ ದ್ರಾವಣದಲ್ಲಿ ಒಂದು ಇನ್ನೊಂದನ್ನು ರಕ್ಷಿಸಬಲ್ಲದು. ಉದಾಹರಣೆಗೆ ಮೆಟಾಲ್ ಎಂಬುದು ಅಮಿಡೋಲನ್ನೂ ಹೈಡ್ರೊಕ್ವಿನೋನ್ ಎಂಬುದು ಮೆಟಾಲನ್ನೂ ರಕ್ಷಿಸಬಲ್ಲದು. ಸೋಡಿಯಮ್ ಸಲ್ಛೈಟ್ ಪ್ರಸ್ಫುಟನಕಾರಿಗಳು ವಾಯುವಿನಿಂದ ಉತ್ಕರ್ಷಣೆ ಹೊಂದದ ಹಾಗೆ ತಡೆಯುವುದೂ ಅಲ್ಲದೆ ಇನ್ನೂ ಹಲವು ಬಗೆಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಚಿತ್ರಕ್ಕೆ ಕಲೆಯನ್ನು (ಸ್ಟೈನ್) ಉಂಟುಮಾಡುವ ಉತ್ಕರ್ಷಣ ಉತ್ಪನ್ನಗಳು ಬರದ ಹಾಗೆ ಮಾಡುತ್ತವೆ ಕೂಡ. ಇದಲ್ಲದೆ ವೃದ್ಧಿಕಾರಕಗಳೊಡನೆ ಕೂಡಿಕೊಂಡು ಜಟಿಲ ಸಂಯುಕ್ತಗಳಾಗಿ ಪರಿವರ್ತನೆ ಆಗಲೂಬಹುದು. ಈ ಸಂಯುಕ್ತಗಳು ಸಿಲ್ವರ್ ಹ್ಯಾಲೈಡುಗಳಿಗೆ ಒಳ್ಳೆಯ ಲೀನಕಾರಿಗಳಾಗಿವೆ. ಸೋಡಿಯಮ್ ಸಲ್ಛೈಟಿನ ಮತ್ತೊಂದು ಅನುಕೂಲತೆ ಎಂದರೆ, ಅದು ದುರ್ಬಲ ಕ್ಷಾರವಾದ್ದರಿಂದ, ಪ್ರಸ್ಫುಟನೆಯ ವೇಗದ ಮೇಲೆ ಇಲ್ಲವೆ ಪರಮಾವಧಿ ಸಾಂದ್ರತೆಯ ಮೇಲೆ ಪರಿಣಾಮ ಬೀರಬಲ್ಲದು.
	ಪ್ರಸ್ಫುಟನೆಯ ಉತ್ಕರ್ಷಣವೇಗವನ್ನು ಮತ್ತು ಅದಕ್ಕೆ ಬೇಕಾದ ಪರಿರಕ್ಷಕ ಪರಿಮಾಣವನ್ನು ನಿರ್ಧರಿಸುವ ಅಂಶಗಳಿವು:
	1 ಉತ್ಕರ್ಷಣಕಾರ್ಯಕ್ಕೆ ಪ್ರಸ್ಫುಟನಕಾರಿಯ ಗ್ರಹಣಶೀಲತೆ (ಸಸೆಪ್ಟಿಬಿಲಿಟಿ)
	2 ದ್ರಾವಣದ ಪ್ರತ್ಯಾಮ್ಲತೆ
	3 ದ್ರಾವಣದ ಸಾರತೆ
	4 ಪ್ರಸ್ಫುಟನಗೊಳಿಸಲು ಬಳಸುವ ವಿಧಾನ
	5 ಪ್ರಸ್ಫುಟನಕಾರಿಗಳ ಹಾಗೂ ಕಾರ್ಯವಿಧಾನದ ಉಷ್ಣತೆ
	6 ಪ್ರಸ್ಛುಟನಕಾರಿಯ ಧಾರಣಸಾಮಥ್ರ್ಯ
	ಸೋಡಿಯಮ್ ಸಲ್ಛೈಟಿನ ಜೊತೆಗೆ ಬಳಸುವ ಇತರ ಪರಿರಕ್ಷಕಗಳು ಎಂದರೆ ಅಸಿಟೋನ ಬೈಸಲ್ಛೈಟ್, ಸೋಡಿಯಮ್ ಫಾರ್ಮಾಲ್ಡಿಹೈಡ್, ಸಲ್ಛಾಕ್ಸಿಲೇಟ್, ಸ್ಟ್ಯನಸ್ ಕ್ಲೋರೈಡ್, ಮ್ಯಾನಿಟಾಲ್, ಸಾರ್ಬಿಟಾಲ್, ಬೆನ್‍ಜೋಯಿಕ್ ಆಮ್ಲ, ಗ್ಲೈಕಾಲಿಕ್ ಆಮ್ಲ, ಸ್ಯಾಲಿಸಿಕ್ ಆಮ್ಲ.
	3 ಉತ್ತೇಜಕಗಳು (ಆಕ್ಟಿವೇಟರ್ಸ್): ಇವನ್ನು ವೇಗವರ್ಧಕಗಳು (ಆ್ಯಕ್ಸಿಲರೇಟರ್ಸ್ ಎಂದೂ ಕರೆಯುವುದುಂಟು. ಇವು ಪ್ರಸ್ಫುಟನಕಾರಿಗಳ ಪಟುತ್ವವನ್ನು ಅಧಿಕಗೊಳಿಸುತ್ತವೆ. ಸಾಮಾನ್ಯವಾಗಿ ಇವು ಕ್ಷಾರವಸ್ತುಗಳು ಇಲ್ಲವೆ ಸೋಡಿಯಮ್ ಸಲ್ಛೈಟಿನ ಜೊvಗೂಡಿ ಜಟಿಲವಸ್ತುವಾಗಿ ಮಾರ್ಪಟ್ಟು ಸೋಡಿಯಮ್ ಸಲ್ಛೈಟ್ ಜಲವಿಚ್ಛೇದನೆಗೊಂಡಾಗ ಹೈಡ್ರಾಕ್ಸಿಲ್ ಅಯಾನು ಮತ್ತು ಅಗತ್ಯ ಕ್ಷಾರ ಉತ್ಪತ್ತಿಯಾಗುವಂತೆ ಮಾಡುತ್ತವೆ. ದ್ರಾವಣದ ಪ್ರತ್ಯಾಮ್ಲತೆ ಹೆಚ್ಚಾದಲ್ಲಿ ಪ್ರಸ್ಫುಟನಕಾರಿಯ ಪಟುತ್ವ ಹೆಚ್ಚುವುದೆಂದೂ ಪ್ರಸ್ಫುಟನೆಯ ವೇಗ ದ್ರಾವಣದ ಠಿಊಅನ್ನು ಅವಲಂಬಿಸಿರುತ್ತದೆಂದೂ ಪ್ರಾಯೋಗಿಕ ಸಾಕ್ಷಿಗಳಿಂದ ಸ್ಥಿರಪಟ್ಟಿದೆ.
	ಹೆಚ್ಚಾಗಿ ಬಳಕೆಯಲ್ಲಿರುವ ಕ್ಷಾರವೆಂದರೆ ಸೋಡಿಯಮ್ ಕಾರ್ಬೊನೇಟ್. ಓಚಿ2ಅಔ3 ರೂಪದಲ್ಲಾಗಲಿ ಓಚಿ2ಅಔ3ಊ2ಔ ರೂಪದಲ್ಲಾಗಲಿ ಇದನ್ನು ಬಳಸಬಹುದು. ಇದಲ್ಲವಾದರೆ ಸೋಡಿಯಮ್ ಮೆಟಾಬೋರೇಟ್ ಮತ್ತು ಬೋರಾಕ್ಸ್‍ಗಳನ್ನು ಬಳಸಬಹುದು. ಮುಖ್ಯವಾಗಿ ಇದನ್ನು ಸೂಕ್ಷ್ಮಕಣ (ಫೈನ್‍ಗ್ರೇನ್) ಪ್ರಸ್ಫುಟನೆಗೆ ಬಳಸುತ್ತಾರೆ. ಸೋಡಿಯಮ್ ಹೈಡ್ರಾಕ್ಸೈಡ್ ಮತ್ತು ಪೊಟ್ಯಾಸಿಯಮ್ ಹೈಡ್ರಾಕ್ಸೈಡುಗಳನ್ನು ಶಿಲಾಮುದ್ರಣಕಲೆ (ಲಿಥೋಗ್ರಫಿ) ಮತ್ತು ಆಫ್‍ಸೆಟ್ ಮುದ್ರಣಗಳಲ್ಲೂ ಟ್ರೈಈಥ್ಯಲ್ ಅಮೀನ್‍ನಂಥ ಆಗ್ರ್ಯಾನಿಕ್ ಕ್ಷಾರವನ್ನು ಬಣ್ಣದ ಚಿತ್ರದ ಮತ್ತು ಸೂಕ್ಷ್ಮಕಣ ಪ್ರಸ್ಫುಟನ ಕೆಲಸಗಳಿಗೂ ಬಳಸುತ್ತಾರೆ. ಅಷ್ಟಾಗಿ ಬಳಕೆಯಲ್ಲಿಲ್ಲದ ಕ್ಷಾರಗಳು ಎಂದರೆ ಅಸಿಟೋನ್ ಕಬೈಸಲ್ಛೈಟ್, ಅಸಿಟೋನ್ ಫಾರ್ಮಾಲ್ಡಿಹೈಡ್, ಪ್ಯಾರಾಫಾರ್ಮಾಲ್ಡಿಹೈಡ್, ಹೆಕ್ಸಮಿಥಿಲೀನ್ ಟೆಟ್ರಮೀನ್, ಸೋಡಿಯಮ್ ಅಮೈನೋ ಅಸಿಟೇಟ್ ಮತ್ತು ಸೋಡಿಯಮ್ ಹೆಕ್ಸಮೇಟಾಫಾಸ್ಛೇಟ್.
	ವಿವಿಧ ಕ್ಷಾರಗಳನ್ನು ಒಳಗೊಡಿರುವ ಕೆಲವು ಶಿಷ್ಟ ಪ್ರಸ್ಫುಟನಕಾರಿಗಳ ಸರಾಸರಿ ಠಿಊ ಈ ಮುಂದಿನಂತೆ ಇದೆ:
	ಸೋಡಿಯಮ್ ಮೆಟಾಸಿಲಿಕೇಟ್	. . .	8.5
	ಬೋರಾಕ್ಸ್	. . .	9.2
	ಟ್ರೈಎಥನಾಲ್ ಅಮೀನ್	. . .	10.1
	ಅಮೋನಿಯಮ್ ಹೈಡ್ರಾಕ್ಸೈಡ್	. . .	10.7
	ಸೋಡಿಯಮ್ ಕಾರ್ಬೊನೇಟ್	. . .	10.4-11.6
	ಟ್ರೈಸೋಡಿಯಮ್ ಫಾಸ್ಫೇಟ್	. . .	12
	ಸೋಡಿಯಮ್ ಹೈಡ್ರಾಕ್ಸೈಡ್	. . .	13
	4 ಅವರೋಧಕಗಳು (ರಿಸ್ಟ್ರೈನರ್ಸ್): ಪ್ರಸ್ಫುಟನಕಾರಿ ದ್ರಾವಣಗಳಲ್ಲಿ ಅವರೋಧಕಗಳಿಲ್ಲದಿದ್ದಲ್ಲಿ ಪ್ರಸ್ಫುಟನಗೊಂಡ ಬಿಂಬಗಳು ಮಸಕಾಗುವುದುಂಟು. ಈ ಪರಿಣಾಮ ಫೋಟೊಗ್ರಾಫಿಕ್ ಎಮಲ್ಯನ್ನಿನ ಮತ್ತು ಪ್ರಸ್ಫುಟನಕಾರಿಯ ವಿಶಿಷ್ಟಗುಣಗಳು ಮತ್ತು ದ್ರಾವಣದ ಪ್ರತ್ಯಾಮ್ಲತೆ ಇವನ್ನು ಅವಲಂಬಿಸಿದೆ. ಬೆಳಕಿಗೆ ಒಡ್ಡಿದ ಸಿಲ್ವರ್‍ಹ್ಯಾಲೈಡ್ ಕಣಗಳನ್ನು ಮಾತ್ರ ಪ್ರಸ್ಫುಟನಗೊಳಿಸುವ ಪ್ರಸ್ಫುಟನಕಾರಿಗಳ ವಿಶಿಷ್ಷಸಾಮಥ್ರ್ಯದ ಮೇಲೆ ಈ ಅಂಶಗಳು ಪ್ರಭಾವ ಬೀರುತ್ತವೆ. ಕಡಿಮೆ ಅವರೋಧಕವನ್ನು ಪ್ರಸ್ಫುಟನಕಾರಿ ದ್ರಾವಣಕ್ಕೆ ಅಲ್ಪ ಮೊತ್ತದಲ್ಲಿ ಬೆರೆಸಿ ಬೆಳಕಿಗೆ ಒಡ್ಡಿದಾಗ ಸಿಲ್ವರ್ ಹ್ಯಾಲೈಡ್ ಕಣಗಳ ಪ್ರಸ್ಫುಟನ ಕಾರ್ಯ ಅಧಿಕಗೊಳ್ಳದಂತೆ ತಡೆಯಲ್ಪಡುತ್ತದೆ. ಕ್ಷಾರಲೋಹ ಹ್ಯಾಲೈಡುಗಳೆನಿಸಿರುವ ಪೊಟ್ಯಾಸಿಯಮ್ ಬ್ರೋಮೈಡ್. ಪೊಟ್ಯಾಸಿಯಮ್ ಅಯೊಡೈಡ್ ಅಥವಾ ಸೋಡಿಯಮ್ ಕ್ಲೋರೈಡುಗಳನ್ನು ಅವರೋಧಕಗಳಾಗಿ ಬಳಸಿದರೆ, ಅವು ಸಿಲ್ವರ್ ಹ್ಯಾಲೈಡಿನ ಅಯಾನೀಕರಣ ಕುಗ್ಗಿಸಿ, ಸಿಲ್ವರ್ ಅಯಾನುಗಳ ಸಾರೀಕರಣ ಕಡಿಮೆ ಮಾಡಿ, ಪ್ರಸ್ಫುಟನ ಕಾರ್ಯವನ್ನು ಅವರೋಧಿಸುತ್ತವೆ. ಹೆಚ್ಚಾಗಿ ಬಳಕೆಯಲ್ಲಿರುವ ಅವರೋಧಕಗಳೆಂದರೆ ಕ್ಷಾರಲೋಹ ಬ್ರೋಮೈಡುಗಳು. ಇವು ಪ್ರಸ್ಫುಟನಯ ಅವಧಿಯನ್ನು ಹೆಚ್ಚಿಸಿ ಚಿತ್ರಕ್ಕೂ ಅದರ ಹಿನ್ನೆಲೆಗೂ ಇರುವ ಪರಸ್ಪರ ವೈದೃಶೈವನ್ನು (ಕಾಂಟ್ರಾಸ್ಟ್) ಅಧಿಕಗೊಳಿಸುತ್ತವೆ. ಈಚೆಗೆ. ನೈಟ್ರೊಜನ್‍ಯುಕ್ತ ಹಲವಾರು ಆಗ್ರ್ಯಾನಿಕ್ ಸಂಯುಕ್ತಗಳನ್ನು ಮಸಕುಪ್ರತಿರೋಧಕಗಳಾಗಿ (ಆ್ಯಂಟಿಫಾಗೆಂಟ್ಸ್) ಬಳಸುವುದಿದೆ. ಇವು ಫೋಟೊ ಫಿಲ್ಮಿನಲ್ಲಿರುವ ಸಿಲ್ವರ್ ಸಲ್ಛೈಡ್ ಅಥವಾ ಸಂವೇದನಶೀಲಕಣ (ಸೆನ್ಸಿಟಿವ್ ಸ್ಪೆಕ್) ಮತ್ತು ಸಿಲ್ವರ್ ಹ್ಯಾಲೈಡುಗಳ ನಡುವೆ ಇರುವ ಜಾಗದಲ್ಲಿ ಅಧಿಶೋಷಣೆ ಹೊಂದುತ್ತವೆಂದೂ ಅನಂತರ ಸಿಲ್ವರ್ ಹ್ಯಾಲೈಡ್ ಜೊತೆಯಲ್ಲಿ ಕ್ಷಾರಗುಣದ ಪ್ರಸ್ಫುಟನಕಾರಿ ದ್ರಾವಣಗಳಲ್ಲಿ ಸ್ಥಿರವಾಗಿರುವಂಥ ಸಂಕಲನ ಉತ್ಪನ್ನಗಳಾಗಿ (ಅಡಿಷನ್ ಪ್ರಾಡಕ್ಟ್ಸ್) ಮಾರ್ಪಾಡಾಗುತ್ತವೆಂದೂ ತಿಳಿದು ಬಂದಿದೆ. ಬಲುಮಟ್ಟಿಗೆ ಆಗ್ರ್ಯಾನಿಕ್ ಅವರೊಧಕಗಳೆಲ್ಲ ತಯೊಅನಿಲೀನ್ ಗುಂಪಿಗೆ ಸೇರಿರುತ್ತವೆ.
	(iv) ಫೋಟೊಗ್ರಾಫಿಕ್ ಎಮಲ್ಯನ್ಮ್ನಗಳು: ಇವು ಸಿಲ್ವರ್ ಹ್ಯಾಲೈಡ್ ಸ್ಫಟಿಗಳನ್ನು ಜಿಲಾಟಿನ್, ಕಲಾಯ್‍ಡೈನ್, ಆಲ್ಬುಮೆನ್, ಕೇಸಿನ್ ಅಥವಾ ಅಗರ್‍ನಂಥ ಪರಿರಕ್ಷಕ ಕಲಿಲಗಳಲ್ಲಿ ವಿತರಣೆ ಮಾಡಿರುವ ನಿಲಂಬನಗಳು (ಸಸ್‍ಪೆನ್ಷನ್ಸ್). ಇವನ್ನು ನಿಜವಾದ ಎಮಲ್ಯನುಗಳೆಂದು ಹೇಳಲಾಗುವುದಿಲ್ಲ. ಈಚೆಗೆ ಸೆಲ್ಯುಲೋಸ್ ಎಸ್ಟರುಗಳನ್ನು ಉಪಯೋಗಿಸಲು ಪ್ರಯತ್ನಿಸಿದ್ದರೂ ಜಿಲಾಟಿನ್ ಮತ್ತು ಕಲಾಯ್ ಡೈನ್‍ಗಳು ಇನ್ನೂ ಹೆಚ್ಚಿನ ವಾಣಿಜ್ಯ ಪ್ರಾಮುಖ್ಯ ಪಡೆದಿವೆ.
	ಛಾಯಾಚಿತ್ರ ಕಲಿಲಗೊಂಡು ಜಿಲಾಟಿನನ್ನು ಆರಿಸಲು ಅದರ ಸಂವೇದನ ಶೀಲತೆಯೇ ಕಾರಣ. ಹೆಚ್ಚಿನ ಸಂವೇದನಶೀಲತೆ ಮತ್ತು ವೇಗವುಳ್ಳ ಎಮಲ್ಯನುಗಳನ್ನು ಉಂಟುಮಾಡಲು ಈ ಗುಣಗಳು ಸಹಾಯಕಾರಿ. ಇದಲ್ಲದೆ ಜಿಲಾಟಿನ್ ಅತ್ಯುತ್ತಮ ಎಮಲ್ಯನ್‍ಕಾರಿಯಾದ್ದರಿಂದ ಉಷ್ಷತೆಯಲ್ಲಾಗುವ ವ್ಯತ್ಯಾಸಗಳಿಂದ ಜಿಲ್ ದ್ರವಗಳ ಪರಸ್ಪರ ಮಾರ್ಪಾಡಿಗೂ ಅನುಕೂಲವಾಗುತ್ತದೆ. ಜಿಲಾಟಿನ್ನಿನ ಈ ಗುಣ ಫೋಟೊಗ್ರಾಫಿಕ್ ಫಿಲ್ಮ್‍ಗಳ ಲೇಪನ ಮತ್ತು ಎಮಲ್ಯನ್ನಿನ ಕಾರ್ಯಗತಿಗಳಿಗೆ ಅನುಕೂಲ ಸನ್ನಿವೇಶ ಒದಗಿಸುತ್ತದೆ. ಜಿಲಾಟಿನ್ನಿನಲ್ಲಿರುವ ಅಧಿಕ ಪರಿರಕ್ಷಣ ಪ್ರವೃತ್ತಿ ಬೆಳಕು ಬೀಳದ ಸಿಲ್ವರ್ ಹ್ಯಾಲೈಡ್ ಸ್ಫಟಿಕಗಳು ಪ್ರಸ್ಫುಟನಕಾರಿಗಳಿಂದ ಅಪಕರ್ಷಣ ಹೊಂದುವುದನ್ನು ಕಡಿಮೆಮಾಡಿ ಬಿಂಬ ಗೋಚರವಾಗುವುದಕ್ಕೆ ಅನುಕೂಲತೆ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಸಿಲ್ವರ್ ಕ್ಲೋರೈಡ್, ಬ್ರೋಮೈಡ್ ಮತ್ತು ಅಯೊಡೈಡುಗಳನ್ನು ಫೋಟೊಗ್ರಫಿಕ್ ಎಮಲ್ಯನುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಋಣಎಮಲ್ಷನುಗಳಲ್ಲಿ ಹೆಚ್ಚಿಗೆ ಸಿಲ್ವರ್ ಬ್ರೋಮೈಡ್ ಇದ್ದು ಸ್ವಲ್ಪ ಸಿಲ್ವರ್ ಅಯೊಡೈಡನ್ನೂ ಸೇರಿರುತ್ತಾರೆ. ಫಿಲ್ಮ್ ಅಥವಾ ಕಾಗದದ ಮೇಲೆ ಲೇಪಿಸುಲು ಬಳಸುವ ಧನಎಮಲ್ಯನುಗಳನಲ್ಲಿ ಸಿಲ್ವರ್ ಕ್ಲೋರೈಡ್ ಇಲ್ಲವೆ ಸಿಲ್ವರ್ ಕ್ಲೋರೈಡ್ ಮತ್ತು ಬ್ರೋಮೈಡುಗಳ ಮಿಶ್ರಣವಿರುತ್ತದೆ.
	ಎಮಲ್ಯನ್ನಿನ ವಿಶಿಷ್ಟಗುಣಗಳು ಸಿಲ್ವರ್ ಹ್ಯಾಲೈಡ್‍ಸ್ಫಟಿಕಗಳ ಪ್ರಮಾಣ, ವಿತರಣಾ ಆವರ್ತಾಂಕ ಮತ್ತು ರಚನೆಗಳನ್ನು ಅವಲಂಬಿಸಿವೆ.
	ಫೋಟೊಗ್ರಫಿಕ್ ಎಮಲ್ಷನ್ನುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು.
	(1) ಮುದ್ರಿಸಲು ಬಳಸುವ ಎಮಲ್ಷನ್ಮ್ನಗಳು, (2) ಪ್ರಸ್ಫುಟನಕ್ಕೆ ಒಳಪಡುವ ಎಮಲ್ಷನ್ನುಗಳು. ಮೊದಲನೆಯ ಗುಂಪಿನ ಎವiಲ್ಷನ್ನುಗಳಿಗೆ ಪ್ರಸ್ಫುಟನೆಯ ಅಗತ್ಯವಿಲ್ಲದೆ, ಅವನ್ನು ನೇರವಾಗಿ ಬೆಳಕಿಗೆ ಒಡ್ಡಿ ಬಿಂಬಗಳನ್ನು ಮೂಡಿಸಬಹುದು. ಈ ಎಮಲ್ಷನ್ನುಗಳಲ್ಲಿ ಸಾಮಾನ್ಯವಾಗಿ ಸಿಲ್ವರ್, ನೈಟ್ರೇಟ್, ಮುಕ್ತ ಸ್ಥಿತಿಯಲ್ಲಿರುವ ಸಿಲ್ವರ್ ಮತ್ತು ಸಾರರಿಕ್ತ ಆಮ್ಲ ಹಾಗೂ ಸಿಲ್ವರ್ ಲೋಹದ ಆಗ್ರ್ಯಾನಿಕ್ ಲವಣಗಳಿರುತ್ತವೆ. ಇವನ್ನು P,ಔ,P ಕರಡು ಕಾಗದ (ಪ್ರೂಫ್ ಪೇಪರ್) ಎಂದು ಕರೆಯುತ್ತಾರೆ. ಇವನ್ನು ಕರಡುಚಿತ್ರ ತಯಾರಿಸಲು ಉಪಯೋಗಿಸುತ್ತಾರೆ.
	ಪ್ರಸ್ಫುಟನಕ್ಕೆ ಒಳಪಡುವ ಎಮಲ್ಷನ್ನುಗಳಲ್ಲಿ ಹೆಚ್ಚಿಗೆ ಕ್ಷಾರಲೋಹ ಹ್ಯಾಲೈಡುಗಳಿರುತ್ತವೆ. ಸಿಲ್ವರ್ ಹ್ಯಾಲೈಡುಗಳ ರಚನೆ ಮತ್ತು ವರ್ತನೆಗಳನ್ನು ವ್ಯತ್ಯಾಸಗೊಳಿಸಿ ಈ ಎಮಲ್ಷನ್ನುಗಳನ್ನು ಫೋಟೊಗ್ರಫಿಕ್ ಋಣಾತ್ಮಕ ಅಥವಾ ಫೋಟೊಗ್ರಫಿಕ್ ಧನಾತ್ಮಕ ಎಮಲ್ಷನ್ನುಗಳ ತಯಾರಿಕೆಗೆ ಉಪಯೋಗಿಸಬಹುದು.
	ಫೋಟೊಗ್ರಫಿಕ್ ಋಣಾತ್ಮಕ ಎಮಲ್ಷನುಗಳು: ಲೀನಕಾರಿ ಅಯೊಡೈಡನ್ನು ಹ್ಯಾಲ್ಶೆಡಿಗೆ ಬೆರೆಸಿ ಇವನ್ನು ತಯಾರಿಸಬಹುದು. ಉತ್ಪತ್ತಿಯಾದ ಸಿಲ್ವರ್ ಅಯೊಡೈಡ್-ಬ್ರೋಮೈಡ್ ಮಿಶ್ರ ಸ್ಫಟಿಕಗಳು ಬೆಳಕಿಗೆ ಸಿಲ್ವರ್ ಬ್ರೋಮೈಡಿಗಿಂತಲೂ ಅಧಿಕ ಸಂವೇದನಶೀಲತೆ ಪಡೆದಿರುತ್ತವಲ್ಲದೆ ಕ್ರಿಯಾವೇಗವನ್ನೂ ಹೊಂದಿರುತ್ತವೆ. ಅತಿಲೀನಕಾರಿ ಬ್ರೋಮೈಡ್ ಉಪಯೋಗಿಸಿ ಜಿಲಾಟಿನ್ ದ್ರಾವಣದಿಂದ ಸಿಲ್ವರ್ ಹ್ಯಾಲೈಡುಗಳನ್ನು ಒತ್ತರಿಸಿದಲ್ಲಿ ಅಂಥ ಒತ್ತರಕ್ಕೆ ತಟಸ್ಥ ಎಮಲ್ಷನ್ (ನ್ಯೂಟ್ರಲ್ ಎಮಲ್ಷನ್) ಎಂದು ಹೆಸರು. ಈ ಎಮಲ್ಷನ್ ಅಮೊನಿಯ ದ್ರಾವಣದಿಂದಾಗಲಿ ಸಿಲ್ವರ್ ವಿಲೀನವಾಗಿರುವ ಅಮೊನಿಯ ದ್ರಾವಣದಿಂದಾಗಲಿ ಆಗಿದ್ದರೆ ಅದನ್ನು ಅಮೊನಿಯ ಎಮಲ್ಷನ್ ಎಂದು ಕರೆಯುತ್ತಾರೆ. ಅಮೊನಿಯ ಎಮಲ್ಷನ್ನಿನಲ್ಲಿ ಸಿಲ್ವರ್ ಹ್ಯಾಲೈಡ್ ಒರಟು ಕಣಗಳ ರೂಪದಲ್ಲಿ ಇರುವುದರಿಂದ ಅಂಥ ಎಮಲ್ಷನ್ ಬೆಳಕಿಗೆ ಅತ್ಯಧಿಕ ಸಂವೇದಶೀಲ ಹೊಂದಿರುತ್ತದೆ.
	ಫೋಟೊಗ್ರಫಿಕ್ ಧನಾತ್ಮಕ ಎಮಲ್ಷನ್ನುಗಳು: ಇವನ್ನು ಕ್ಲೋರೈಡ್ ಅಥವಾ ಕ್ಲೋರೈಡ್- ಬ್ರೋಮೈಡ್ ಮಿಶ್ರಣದಿಂದ, ಜಿಲಾಟಿನ್ ದ್ರಾವಣದಿಂದ ಸಿಲ್ವರ್ ಹ್ಯಾಲೈಡುಗಳನ್ನು ಒತ್ತರಿಸಿ ತಯಾರಿಸಬಹುದು. ಈ ರೀತಿ ತಯಾರಾದ ಸ್ಫಟಿಕಗಳ ಗಾತ್ರ ಮತ್ತು ಅವುಗಳ ದ್ಯುತಿ ಸಂವೇದನಶೀಲತೆ ಋಣ ಎಮಲ್ಷನ್ ಸ್ಪಟಿಕಗಳಿಗಿಂತಲೂ ಕಡಿಮೆಯಾಗಿರುತ್ತವೆ. ಧನಎಮಲ್ಯನ್ನುಗಳ ಸಿಲ್ವರ್ ಹ್ಯಾಲೈಡ್ ರಚನೆ ಮತ್ತು ಗುಣಗಳ ಆಧಾದರದ ಮೇಲೆ ಕ್ಲೋರೈಡ್ ಎಮಲ್ಷನ್ನುಗಳು, ಬ್ರೋಮೈಡ್ ಎಮಲ್ಷನ್ನುಗಳು, ಕ್ಲೋರ್-ಬ್ರೋಮೈಡ್ ಎಮಲ್ಷನ್ನುಗಳು ಮತ್ತು ಬ್ರೋಮ್ ಕ್ಲೋರೈಡ್ ಎಮಲ್ಷನ್ನುಗಳು ಎಂಬ ನಾಲ್ಕು ವರ್ಗಗಳನ್ನು ಗುರಿತಿಸಬಹುದು.
	(ಗಿ) ಪ್ರಸ್ಫುಟನೆಯ ಸಿದ್ಧಾಂತ: ಬೆಳಕಿಗೆ ಒಡ್ಡಿದ ಸಿಲ್ವರ್ ಹ್ಯಾಲೈಡ್ ಅಣುಗಳು ಸಿಲ್ವರ್ ಲೋಹವಾಗಿ ಅಪಕರ್ಷಣೆ ಹೊಂದುವುದು. ಫೋಟೊಸುಪ್ತಬಿಂಬದ ಪ್ರಸ್ಫುಟನೆಯಲ್ಲಿ ಅತಿಮುಖ್ಯ ಕ್ರಿಯೆ. ಕ್ರಮಬದ್ಧವಾದ ಈ ಪ್ರಸ್ಫುಟನೆಯ ಕಾರ್ಯದಲ್ಲಿ ಸುಪ್ತಬಿಂಬಕ್ಕೆ ಸೇರಿರುವ ಸಿಲ್ವರ್ ಹ್ಯಾಲೈಡ್ ಕಣಗಳು ಮಾತ್ರ ಅಪಕರ್ಷಣ ಹೊಂದುತ್ತವೆ. ಆದರೆ ಪ್ರಸ್ಫುಟನೆಯ ಅವಧಿಯನ್ನು ಹೆಚ್ಚಿಸಿದರೆ ಇತರ ಸಿಲ್ವರ್ ಹ್ಯಾಲೈಡ್ ಕಣಗಳೂ ಅಲಕರ್ಷಣ ಹೊಂದುವುವು. ಆದ್ದರಿಂದ ಸುಪ್ತಬಿಂಬ ಪ್ರಸ್ಫುಟನೆಯನ್ನು ದರವಿದ್ಯಮಾನ (ರೇಟ್ ಫಿನಾಮಿನನ್) ಎಂದು ಕರೆಯಬಹುದು.
	ಪ್ರಸ್ಫುಟನೆಯ ಕಾರ್ಯವನ್ನು ಕ್ವಾಂಟಮ್ ಬಲವಿಜ್ಞಾನದ ತತ್ತ್ವಗಳಿಂದ ವಿವರಿಸಬಹುದೆಂದು ಗರ್ನಿ ಮತ್ತು ಮಾಟ್ ತಿಳಿಸಿದ್ದಾರೆ. ಇದಕ್ಕಾಗಿ ಅವರು ರೂಪಿಸಿರುವ ಎಲೆಕ್ಟ್ರೋಡ್ ಸಿದ್ಧಾಂತದಲ್ಲಿ ಸುಪ್ತಬಿಂಬದಲ್ಲಿರುವ ಸಿಲ್ವರ್ ಕಣ ಎಲೆಕ್ಟ್ರೋಡಿನಂತೆಯೇ ವರ್ತಿಸಿ ಪ್ರಸ್ಫುಟನಕಾರಿಯಿಂದ ಎಲೆಕ್ಟ್ರಾನುಗಳನ್ನು ವಶಪಡಿಸುಕೊಂಡು ಋಣ ವಿದ್ಯುದಾವೇಶವನ್ನು ಪಡೆಯುತ್ತದೆಂದು ವಿವರಿಸಿದೆ. ಹೀಗಾಗುವಾಗ ತೆರಪಿನಲ್ಲಿರುವ ಸಿಲ್ವರ್ ಅಯಾನುಗಳು ಉತ್ಕರ್ಷಣೆ ಹೊಂದಿ ಸಿಲ್ವರ್ ಲೋಹವಾಗಿ ಮಾರ್ಪಡುತ್ತವೆ. ತೆರಪಿನಲ್ಲಿರುವ ಸಿಲ್ವರ್ ಅಯಾನುಗಳೆಲ್ಲ ಉಪಯೋಗವಾದ ಕೂಡಲೇ, ತಮ್ಮ ತಮ್ಮ ಸ್ಥಾನಗಳಲ್ಲಿರುವ ಸಿಲ್ವರ್ ಅಯಾನುಗಳು ತೆರಪಿನ ಸ್ಥಳಕ್ಕೆ ದೂಡಲ್ಪಟ್ಟು ಪ್ರಸ್ಫುಟನಕಾರ್ಯ ಸಿಲ್ವರ್ ಹ್ಯಾಲೈಡ್ ಕಣ ಗಳೆಲ್ಲವೂ ಸಂಪೂರ್ಣವಾಗಿ ಪ್ರಸ್ಫುಟನಗೊಳ್ಳುವತನಕವೂ ಅವಿಚ್ಛಿನ್ನವಾಗಿ ನಡೆಯುತ್ತದೆ. ಪ್ರಸ್ಫುಟನೆಯ ಕಾರ್ಯದಲ್ಲಿ ಅಧಿಶೋಷಣೆಯ (ಅಡ್‍ಸಾರ್ಪ್‍ಷನ್) ಪಾತ್ರವನ್ನು ಕ್ವಾಂಟಮ್ ಬಲವಿಜ್ಷಾನದ ಸಿದ್ಧಾಂತಗಳಿಂದ ವಿವರಿಸಿದೆ. ಇದನ್ನು ಚಿತ್ರದಲ್ಲಿ ತೋರಿಸಿದೆ. ಸಜಾತೀಯ (ಹೋಮೋಜೀನಿಯಸ್) ದ್ರಾವಣದಲ್ಲಿ ಸಿಲ್ವರ್ ಅಯಾನ್ ಮತ್ತು ಪ್ರಸ್ಫುಟನಕಾರಿಗಳು ರಾಸಾಯನಿಕ ಕ್ರಿಯೆಗೆ ಒಳಗಾಗಬೇಕಾದಲ್ಲಿ ಅವುಗಳ ಒಟ್ಟು ಶಕ್ತಿ ವಿಭವಶಕ್ತಿರೋಧದಷ್ಟಾದರೂ (ಚಿbಛಿಜ) (ಪೊಟೆನ್ಷಿಯಲ್ ಎನರ್ಜಿ ಬ್ಯಾರಿಯರ್) ಇರಬೇಕು. ಈ ಶಕ್ತಿಮಟ್ಟದ ಶಿಖರದಲ್ಲಿ ಅಭಿಕಾರಕಗಳು (ರೀಆಕ್ಟಂಟ್ಸ್) ಪಟುತ್ವ ಹೊಂದಿದ ಜಟಿಲಸಂಯುಕ್ತದ ರೂಪದಲ್ಲಿರುತ್ತವೆ. ಇಂಥ ಸ್ಥಿತಿಯಲ್ಲಿರಬೇಕಾದ ಶಕ್ತಿಯನ್ನು ಇhom ಎಂದು ಕರೆಯೋಣ, ಪ್ರಸ್ಫುಟನಕಾರಿ ಸಿಲ್ವರಿನ ಮೇಲೆ ಅಧಿಶೋಷಣೆ ಹೊಂದಿದಲ್ಲಿ ರಾಸಾಯನಿಕ ಕ್ರಿಯೆ ನಡೆಯಲು ಬೇಕಾಗುವ ಶಕ್ತಿ ಕುಗ್ಗುತ್ತದೆ, ಮಾತ್ರವಲ್ಲ ಕ್ರಿಯಾವೇಗ ಹೆಚ್ಚಾಗುವುದೂ ಉಂಟು. ಇಈಉಊ ರೇಖೆ ಇದನ್ನು ತೋರಿಸುತ್ತದೆ. ಅಧಿಶೋಷಣೆಯಿಂದ ರಾಸಾಯನಿಕಗಳು ಪಟುತ್ವಹೊಂದಿದ ಜಟಿಲಸಂಯುಕ್ತಗಳಾಗಲು ಇheಣ ನಷ್ಟು ಶಕ್ತಿ ಪಡೆಯಬೇಕಾಗುತ್ತದೆ. ಚಿತ್ರದಿಂದ ಇheಣ ಶಕ್ತಿ ಇhom ಗಿಂತಲೂ ಕಡಿಮೆ ಇರುವುದು ಗೊತ್ತಾಗುತ್ತದೆ.

ಚಿತ್ರ-9

	ಸಾಮಾನ್ಯವಾಗಿ ಎಮಲ್ಷನ್ನುಗಳನ್ನು ಹಲವಾರು ಪ್ರಸ್ಫುಟನಕಾರಿಗಳಿಂದ ಬೇರ ಬೇರೆ ಠಿಊ ಇರುವ ದ್ರಾವಣಗಳಲ್ಲಿ ಪ್ರಸ್ಫುಟನಗೊಳಿಸಿದರೆ, ಕಾರಕದ ಅಯನಿಕ ರೂಪ ಈ ಕಾರ್ಯದಲ್ಲಿ ಪಟುತ್ವ ಘಟಕ (ಆ್ಯಕ್ಟಿವ್ ಇನ್‍ಗ್ರೇಡಿಯಂಟ್) ಎಂದು ಗೊತ್ತಾಗುತ್ತದೆ. ಇಂಥ ಪ್ರಸ್ಫುಟನಕಾರಿಗಳಲ್ಲಿ ಠಿಊ ಹೆಚ್ಚಿದಂತೆಲ್ಲ ಅಯಾನೀಕರಣ ಹೆಚ್ಚುತ್ತದಾಗೆ ಅಧಿಕ ಠಿಊ ಇರುವ ದ್ರಾವಣಗಳಲ್ಲಿ ಪ್ರಸ್ಫುಟನಕಾರ್ಯದ ವೇಗವೂ ಅಧಿಕವಾಗಿರುತ್ತದೆ.
	(vi) ಸ್ಥಾಯೀಕರಣ (ಫಿಕ್ಸಿಂಗ್) : ಪ್ರಸ್ಫುಟನಕಾರ್ಯವಾದ ಬಳಿಕ ಫಿಲ್ಮಿನಿಂದ ಶೇಷ ಸಿಲ್ವರ್ ಹ್ಯಾಲೈಡುಗಳನ್ನು ತೆಗೆಯಲು ಎರಡು ಹಂತಗಳಲ್ಲಿ ಈ ಕಾರ್ಯವನ್ನು ಎಸಗಬೇಕು: ಉಳಿದಿರುವ ಸಿಲ್ವರ್ ಹ್ಯಾಲೈಡುಗಳನ್ನು ನೀರಿನಲ್ಲಿ ಲೀನವಾಗುವ ಸಂಯುಕ್ತಗಳಾಗಿ ಪರಿವರ್ತಿಸುವುದು ಮತ್ತು ಫಿಲ್ಮನ್ನು ನೀರಿನಲ್ಲಿ ತೊಳೆದು ಒಣಗಿಸುವುದು.
	ಸಿಲ್ವರ್ ಹ್ಯಾಲೈಡುಗಳಿಗೆ ಹಲವಾರು ಲೀನಕಾರಿಗಳಿದ್ದುರೂ ಅಮೊನಿಯಮ್ ತಯೊಸಲ್ಛೇಟ್ ಮತ್ತು ಸೋಡಿಯಮ್ ತಯೊಸಲ್ಫೇಟುಗಳನ್ನೇ ಸ್ಥಾಯೀಕಾರಿಗಳಾಗಿ ಹೆಚ್ಚಾಗಿ ಉಪಗಯೋಗಿಸುವುದಿದೆ. ಬೈನ್ಸ್ ಎಂಬವನ ಪ್ರಕಾರ ಸ್ಥಾಯೀಕರಣ ಕ್ರಿಯಾವಿನ್ಯಾಸದ ಸ್ಥೂಲವಿವರ ಇಷ್ಟು: ಮೊದಲು ತಯೊಸಲ್ಛೇಟ್ ಅಯಾನ್ ಸಿಲ್ವರ್ ಹ್ಯಾಲೈಡ್ ಕಣದ ಮೇಲೆ ಅಧಿಶೋಷಣೆ ಹೊಂದಿ ಮಾನೋ ಆರ್ಜೆಂಟ್-ಮಾನೊತಯೊಸಲ್ಛೇಟ್ ಅಯಾನ್ ಆಗಿ ಪರಿವರ್ತನೆ ಹೊಂದುತ್ತದೆ. ಇದು ತಯೊಸಲ್ಫೇಟ್ ಅಯಾನಿನೊಡನೇ ವರ್ತಿಸಿ ಅತಿಯಾಗಿ ಋಣಾವಿಷ್ಟಗೊಂಡ ಮಾನೊ ಆರ್ಜೆಂಟೊ ಡೈ ತಯೊಸಲ್ಛೇಟ್ ಆಗಿ, ಘನದ ಹೊರ ಭಾಗದಿಂದ ಬಿಡುಗಡೆಗೊಳ್ಳುತ್ತದೆ.
	ಸ್ಥಾಯೀಕರಣದ ವೇಗ ಸಾಮಾನ್ಯವಾಗಿ (1) ಉಪಯೋಗಿಸಿದ ತಯೋಸಲ್ಛೇಟ್ ಸಂಯುಕ್ತ, (2) ತಯೊಸಲ್ಛೇಟ್ ಸಾರತೆ, (3) ಎಮಲ್ಷನ್ನಿನ ಸ್ವಭಾವ ಮತ್ತು ಗಾತ್ರ, (4) ಉಷ್ಣತೆ, (5) ಲೀನಗೊಳ್ಳುವ ಹ್ಯಾಲೈಡಿನ ಅಂಶ, (6) ಕಲಕುವಿಕೆ-ಈ ಅಂಶಗಳನ್ನು ಅವಲಂಬಿಸಿರುತ್ತದೆ.
	ಪ್ರಸ್ಫುಟನಗೊಂಡ ಫಿಲ್ಮನ್ನು ಸ್ಥಾಯೀಕಾರಿಯಲ್ಲಿ ಅದ್ದಿದಾಗ ಫಿಲ್ಮಿಗೆ ಅಂಟಿ ಕೊಂಡಿರುವ ಪ್ರಸ್ಫುಟನಕಾರಿ ಸೋಡಿಯಮ್ ಮತ್ತು ಅಮೋನಿಯಮ್ ತಯೊಸಲ್ಛೇಟನ್ನು ಉತ್ಕರ್ಷಿಸಿ, ಅದರ ಉಪಯುಕ್ತತೆಯನ್ನು ಕುಗ್ಗಿಸಬಹುದು. ಸ್ಥಾಯೀಕಾರಿ ದ್ರಾವಣದಲ್ಲಿ ಸ್ವಲ್ಪ ಮಟ್ಟಿಗೆ ಆಮ್ಲವಿದ್ದರೆ ಈ ಕಾರ್ಯ ತಡೆಯಲ್ಪಡುತ್ತದೆ. ಆದರೆ ಆಮ್ಲ ತಯೊಸಲ್ಛೇಟನ್ನು ವಿಭಜಿಸುವುದರಿಂದ ಆಮ್ಲ ಸಲ್ಛೇಟ್ ಅಂದರೆ ಸೋಡಿಯಮ್ ಬೈಸಲ್ಛೇಟ್ ಅಥವಾ ಪೊಟ್ಯಾಸಿಯಮ್ ಮೆಟಬೈಸಲ್ಛೇಟನ್ನು ಸ್ಥಾಯೀಕಾರಿ ದ್ರಾವಣಕ್ಕೆ ಬೆರೆಸಬಹುದು.
	ಪ್ರಸ್ಛುಟನ ಕಾರ್ಯವಾದ ಮೇಲೆ ಪೋಟೊಗ್ರಫಿಕ್ ಫಿಲ್ಮಿನಲ್ಲಿಯ ಜಿಲಾಟಿನ್ನನ್ನು ಗಡಸು ಮಾಡುವ ಅಗತ್ಯವಿರುತ್ತದೆ. ಇದಕ್ಕಾಗಿ ಸ್ಥಾಯೀಕಾರಿ ದ್ರಾವಣದ ಜೊತೆಯಲ್ಲಿ ಪಟಿಕವನ್ನು ಉಪಯೋಗಿಸಬಹುದು. ಸಾಮಾನ್ಯವಾಗಿ ಉಪಯೋಗಿಸುವ ಸ್ಥಾಯೀಕಾರಿ ಮತ್ತು ಗಡಸುತನ ಹುಟ್ಟಸುವ ದ್ರಾವಣದ ತೊಟ್ಟಿಯಲ್ಲಿ ಸ್ಥಾಯೀಕಾರಿ ಸಂಯುಕ್ತದ ಜೊತೆಗೆÉ ಈ ಮುಂದಿನ ವಸ್ತುಗಳೂ ಇರುತ್ತವೆ:
	1 ಆಗ್ರ್ಯಾನಿಕ್ ಆಮ್ಲ : ಸಾಮಾನ್ಯವಾಗಿ ಅಸೆಟಿಕ್ ಆಮ್ಲ. ಇದರ ಆಮ್ಲತೆ ಪ್ರಸ್ಛುಟನಕಾರ್ಯವನ್ನು ನಿಲ್ಲಿಸಲು ಮತ್ತು ಯುಕ್ತಗಡಸುತನ ಉಂಟುಮಾಡಲು ಅಗತ್ಯವಿರುವ ಠಿಊಅನ್ನು ಉಂಟುಮಾಡುವಂಥ ಸಾಮಾಥ್ರ್ಯವುಳ್ಳದ್ದಾಗಿರುತ್ತದೆ.
	2 ಸೋಡಿಯಮ್ ಸಲ್ಛೇಟ್ : ಇದು ಆಮ್ಲಗಳಿಂದ ತಯೊಸಲ್ಛೇಟ್ ವಿಭಜನೆಯಾಗದಂತೆ ಕಾಪಾಡುತ್ತದೆ ಮತ್ತು ಪ್ರಸ್ಫುಟನಕಾರಿಯ ಜೊತೆಯಲ್ಲಿ ರಾಸಾಯನಿಕ ಕ್ರಿಯೆ ಹೊಂದಿ ವರ್ಣರಹಿತ ಉತ್ಪನ್ನಗಳನ್ನು ಕೊಡುತ್ತದೆ. ಇದರಿಂದ ಚಿತ್ರ ಮಾಸಲಾಗುವುದು ತಪ್ಪುತ್ತದೆ.
	3 ಗಡಸುತನ ಉಂಟುಮಾಡಲು ಪಟಿಕ ಸಂಯುಕ್ತ ಅಥವಾ ಅಲ್ಯುಮಿನ ಕ್ಲೋರೈಡ್-ಇವುಗಳಲ್ಲಿರುವ ಅಲ್ಯೂಮಿನಮ್ ಅಯಾನಿಗೂ ಜಿಲಾಟಿನ್ನಿನಲ್ಲಿರುವ —ಅಔಔಔ ಗುಂಪುಗಳಿಗೂ ರಾಸಾಯನಿಕ ಕ್ರಿಯೆ ನಡೆದು ಶ್ರೇಣಿಅಣುಗಳ (ಚೇನ್ ಜಿೂಲಿಕ್ಯೂಲ್ಸ್) ನಡುವೆ ಅಡ್ಡಬಂಧನಗಳು (ಕ್ರಾಸ್ ಲಿಂಕೇಜಸ್) ಉಂಟಾದಾಗ ವಲಾಟಿನ್ ಗಡಸಾಗುತ್ತದೆಂದು ತಿಳಿದುಬಂದಿದೆ. ಗಡಸುತನದ ಅಂಶ (ಡಿಗ್ರಿ) ದ್ರಾವಣದ ಠಿಊ ಅನ್ನೂ ಅವಲಂಬಿಸಿದೆ.
	(vii) ತೋಳೆಯುವಿಕೆ : ಪೊರೆಯಲ್ಲಿ ಬಿಂಬದ ಸ್ಥಾಯೀಕರಣವಾದ ಮೇಲೆ ಫಿಲ್ಮಿನ ಮೇಲ್ಮೈ ಮೇಲೆ ಅಂಟಿಕೊಂಡಿರಬಹುದಾದ ತಯೊಸಲ್ಛೇಟ್ ಮತ್ತು ಇತರ ವಸ್ತುಗಳನ್ನು ತೆಗೆಯಲು ಫಿಲ್ಮನ್ನು ನೀರಿನಿಂದ ತೊಳೆಯಬೇಕು. ಸ್ಥಾಯೀಕರಣ ಅಪೂರ್ಣವಾಗಿದ್ದಲ್ಲಿ ಫಿಲ್ಮನ್ನು ಎಷ್ಟೇ ತೊಳೆದರೂ ಬಿಂಬಮಾತ್ರ ಸ್ಥಿರವಾಗುವುದಿಲ್ಲ. ಏಕೆಂದರೆ ಲೀನಗುಣಗಳಿಲ್ಲದ ಸಿಲ್ವರ್ ತಯೊಸಲ್ಛೇಟಿನ ಜಟಿಲಸಂಯುಕ್ತಗಳು ಕ್ರಮೇಣ ಫಿಲ್ಮನ್ನು ಮಾಸಲು ಹಿಡಿಸುತ್ತವೆ. ಫಿಲ್ಮನ್ನು ಹದವಾಗಿ ಸ್ಥಾಯೀಕರಿಸಿ ಯುಕ್ತರೀತಿಯಲ್ಲಿ ತೊಳೆಯದಿದ್ದಲ್ಲಿ ಉಳಿದಿರುವ ತಯೊಸಲ್ಛೇಟ್ ಕಾಲಕ್ರಮೇಣ ಸಿಲ್ವರ್ ಜೊತೆಯಲ್ಲಿ ಸಂಯೋಜನೆಗೊಂಡು ಕಂದು ಹಳದಿ ಬಣ್ಣದ ಸಿಲ್ವರ್ ಸಿಲ್ಯ್ಫೆಡನ್ನು ಉತ್ಪತ್ತಿ ಮಾಡುತ್ತದೆ. ಫಿಲ್ಮನ್ನು ಮೆಲ್ಲನೆ, ಸಂತತವಾಗಿ ಹರಿಯುತ್ತಿರುವ ಹೊಸ ನೀರಿನಲ್ಲಿ ತೊಳೆಯಬೇಕು. ಅಮೋನಿಯಮ್ ತಯೊಸಲ್ಛೇಟನ್ನು ಸ್ಥಾಯೀಕಾರಿ ಆಗಿ ಬಳಸಿದಾಗ ಸೋಡಿಯಮ್ ತಯೊಸಲ್ಛೇಟಿಗೆ ಬೇಕಾಗುವ ಅವಧಿಯ ಅರ್ಧದಷ್ಟೆರಲ್ಲೇ ಫಿಲ್ಮನ್ನು ತೊಳೆದು ಹೊರತೆಗೆಯಬಹುದು.
(ಡಿ.ಎಸ್.ಎಂ.)
III ಫೋಟೊಗ್ರಫಿಯ ವಿಭಾಗಗಳು
	ಫೋಟೊಗ್ರಫಿಯಲ್ಲಿ ಹವ್ಯಾಸಿ. ವೃತ್ತನಿರತ, ವ್ಯಾಪಾರಿ, ಶೈಕ್ಷಣಿಕ, ಪತ್ತಿಕೋದ್ಯಮ, ವಿಜ್ಞಾನ ಮತ್ತು ತಂತ್ರವಿದ್ಯೆ ಮತ್ತು ಸಿನಿಮಾಟೊಗ್ರಫಿ ಎಂಬ ಪ್ರಧಾನ ವಿಭಾಗಗಳನ್ನು ಗುರುತಿಸುವುದಿದೆ. ಇವುಗಳ ಪೈಕಿ ಹವ್ಯಾಸಕ್ಕಾಗಿ ನಡೆಸುವ ಫೋಟೊಗ್ರಫಿಯೇ ಅತ್ಯಂತ ದೊಡ್ದ ಶಾಖೆಯಾಗಿ ಬೆಳೆದಿದೆ. ಶಾಶ್ವತವಾಗಿ ದಾಖಲೆಗಳನ್ನು ನಕಲು ಮಾಡಲು ಇಲ್ಲವೇ ಕಲಾತ್ಮಕ ಉದ್ದೇಶ ಈಡೇರಿಸಲು ಛಾಯಾಚಿತ್ರ ತೆಗೆಯುವವರು ಹವ್ಯಾಸಿ ಛಾಯಾಚಿತ್ರದವರು. ವ್ಯಾಪಾರಿ ಉದ್ದೇಶದಿಂದ ಪ್ರಧಾನವಾಗಿ ಭಾವಚಿತ್ರ ತೆಗೆಯುವವರು ವೃತ್ತಿನಿರತ ಛಾಯಾ ಚಿತ್ರಕಾರರು. ಶೈಕ್ಷಣಿಕ ಫೋಟೊಗ್ರಫಿ ಬೋಧನೆ ಮತ್ತು ದೃಷ್ಟೀಶಿಕ್ಷಣಗಳಿಗೆ ಸಂಬಂಧಿಸಿದೆ. ದಿನನಿತ್ಯದ ವಿಷಯ ವಸ್ತು ವಿಶೇಷಗಳನ್ನು ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಮೂಲಕ ಚಿತ್ರಸಹಿತ ವಿವರಿಸುವುದು ಪತ್ರಿಕೋದ್ಯಮ ಫೋಟೊಗ್ರಫಿ. ಫೋಟೊಗ್ರಫಿಯಲ್ಲಿ ಇರುವ ಹನ್ನೊಂದು ವಿಭಾಗಗಳನ್ನು ಇಲ್ಲಿ ವಿವರಿಸಿದೆ.
	(i) ಅತಿರಕ್ತ ಫೋಟೊಗ್ರಫಿ: ವಿಶೇಷ ಸಂವೇದನಶೀಲಕಾರಿ ವರ್ಣ ದ್ರವಗಳನ್ನು ಬಳಸುವುದರಿಂದ ಸುಮಾರು 13,000 Å ನಷ್ಟು ಗರಿಷ್ಠ ವ್ಯಾಪ್ತಿಯ ಅಲೆಯುದ್ದದ ವಿಕಿರಣಗಳಿಗೆ ಅನುಕ್ರಿಯೆಯನ್ನು ತೋರಿಸುವ ಎಮಲ್ಷನ್ನುಗಳನ್ನು ತಯಾರುಮಾಡಬಹುದು. ಸಮೀಪ ಅತಿರಕ್ತವಲಯ (ನಿಯರ್ ಇನ್‍ಫ್ರಾರೆಡ್) ಪ್ರದೇಶದ ವ್ಯಾಪ್ತಿಗೆ ಬರುವ ರೋಹಿತಗಳು, ನಕ್ಷತ್ರಗಳು, ಉಷ್ಣ ಕಾಯಗಳು, ದೃಗ್ಗೋಚರ ವಿಕಿರಣದಿಂದ ಬೇರೆಯದಾದ ಕ್ರಮದಲ್ಲಿ ಸಮೀಪ ಅತಿರಕ್ತ ವಿಕಿರಣದ ವರ್ಣಾತ್ಮಕ ಪ್ರೇಷಣೆಯನ್ನಾಗಲಿ (ಸೆಲೆಕ್ಟಿವ್ ಟ್ರಾನ್ಸ್‍ಮಿಷನ್) ಪ್ರತಿಫಲನವನ್ನಾಗಲಿ ತೋರಿಸುವಂಥ ವಸ್ತುಗಳು ಮುಂತಾದವನ್ನು ಈ ಬಗೆಯ ಫೋಟೊಗ್ರಫಿ ವಿಧಾನದಿಂದ ಚಿತ್ರಿಸಬಹುದು.
ಸಮೀಪ ಅತಿರಕ್ತವನ್ನು ವಾಯುಮಂಡಲ ವರ್ಣಾತ್ಮಕವಾಗಿ ಪ್ರೇಷಿಸುವುದರಂದ ಮತ್ತು ಸಮೀಪ ಅತಿರಕ್ತ ವಲಯದಲ್ಲಿ ವಿಭಿನ್ನ ಪ್ರತಿಫಲನ ಸಾಮಥ್ರ್ಯಗಳಿರುವ ಭೂವಸ್ತುಗಳ ವೈವಿಧ್ಯವಿರುವುದರಿಂದ ಅತಿರಕ್ತ ವಿಧಾನದ ರೀತ್ಯ ತೆಗೆದ ಬಲುದೂರದಲ್ಲಿರುವ ವಸ್ತುಗಳ ಚಿತ್ರಗಳು ಬಹಳಷ್ಟು ಸ್ಫುಟವಾಗಿ ಕಾಣುತ್ತವೆ. ಹುಲ್ಲು ಮತ್ತು ಎಲೆಗುಂಪಲುಗಳು, ಅವುಗಳಲ್ಲಿ ಇರುವ ಪತ್ರಹರಿತ್ತು (ಕ್ಲೋರೊಫಿಲ್) ಸಮೀಪ ಅತಿರಕ್ತಕ್ಕೆ ಪಾರದರ್ಶಕವಾಗಿರುವುದರಿಂದ ಬೆಳ್ಳಗೆ ಕಾಣುತ್ತವೆ. ಛದ್ಮಾವರಣ ಸನ್ನಿವೇಶಗಲನ್ನು ಪತ್ತೆಹಚ್ಚಲು ಆತಿರಕ್ತ ಫೋಟೊಗ್ರಫಿಯ ಬಳಕೆ ಇದೆ. ಉಷ್ಣ ವಸ್ತುಗಳ ಮೇಲ್ಮೈಯಿಂದ ಹೊರಹೊಮ್ಮುವ ಉಷ್ಣತೆಯ ವಿತರಣೆ ದಾಖಲಿಸಲು ಈ ವಿಧಾನ ಅನುಸರಿಸುತ್ತಾರೆ. ಸಂಪೂರ್ಣ ಕತ್ತಲಲ್ಲಿ ಛಾಯಾಚಿತ್ರ ತೆಗೆಯುವಾಗ, ಹಾಳಾದ ಇಲ್ಲವೆ ಬದಲು ಮಾಡಿದ ದಾಖಲು ಪತ್ರ ಮತ್ತಿತರ ವಸ್ತುಗಳ ಗೋಪ್ಯತೆ ತಿಳಿಯುವಲ್ಲಿ, ವಸ್ತ್ರೋದ್ಯಮ ಕ್ಷೇತ್ರದಲ್ಲಿ, ದೃಷ್ಟಿ ಪರೀಕ್ಷೆ ಭಂಗಗೊಳಿಸುವ ಕಪ್ಪು ವರ್ಣದ್ರವಗಳು ಇರುವ ಬಟ್ಟೆಗಳು ಚಿತ್ರ ತೆಗೆಯುವಲ್ಲಿ ಅತಿರಕ್ತ ಫೋಟೊಗ್ರಫಿ ನೆರವಾಗುತ್ತದೆ. ಅತಿರಕ್ತಕ್ಕೆ ಚರ್ಮ ಸ್ವಲ್ಪ ಪಾರದರ್ಶಕತೆ ತೋರುವುದರಿಂದ ಮತ್ತು ಚರ್ಮದಡಿಯ ಅಭಿದಮನಿಗಳು (ಸಬ್‍ಕ್ಯುಟೇನಿಯಸ್ ವೇನ್ಸ್) ಇರುವ ಸ್ಥಿತಿಗಳು ಗೊತ್ತಾಗುವುದರಿಂದ, ವೈದ್ಯನಿದಾನದಲ್ಲಿ ಈ ಫೋಟೊಗ್ರಫಿಯ ಉಪಯೋಗ ಉಂಟು. ಸಸ್ಯ ವಿಜ್ಞಾನ, ಪ್ರಾಗ್ಜೀವವಿಜ್ಞಾನ, ತಂತ್ರವಿದ್ಯಾತ್ಮಕ ಕ್ಷೇತ್ರಗಳು, ಗ್ರ್ಯಾಫಿಕ್ ಕಲಾವಿಭಾಗ ಮುಂತಾದ ಕ್ಷೇತ್ರಗಳಲ್ಲಿ ಅತಿರಕ್ತ ಫೋಟೊಗ್ರಪಿಯ ಉಪಯೋಗ ಇದೆ.
	(ii) ಅತಿನೇರಿಳೆ ಫೋಟೊಗ್ರಪಿ: ಮುದ್ರಣ, ರೋಹಿತ ವಿಜ್ಞಾನ, ಫೋಟೊಮೈಕ್ರೊಗ್ರಫಿ, ಖನಿಜವಿಜ್ಞಾನ, ಪೊಲೀಸ್ ವಿಭಾಗ ನಡೆಸುವ ಅಪರಾಧ ಶೋಧನೆ, ದಾಖಲು ಪತ್ರಗಳ ಪರೀಕ್ಷೆ ಹಾಗೂ ಕಲಾವಸ್ತು ಸಂಗ್ರಹಾಲಯಗಳು ಮುಂತಾದ ಕ್ಷೇತ್ರಗಳಲ್ಲಿ ಈ ವಿಧಾನದ ಬಳಕೆ ಇದೆ. ಇದರಲ್ಲಿ ಅನುಸರಿಸುವ ವಿಧಾನಗಳು ಎರಡು: (1) ಪ್ರತಿದೀಪ್ತಿ ವಿಧಾನ (ಫ್ಲೋರೊಸೆನ್ಸ್) ಪರೀಕ್ಷೆಗೆ ಒಳಗಾಗುವ ವಸ್ತುವನ್ನು ಅತಿನೇರಿಳೆ (ಅಲ್ಟ್ರವಯೊಲೆಟ್) ಬೆಳಕಿನಿಂದ ಬೆಳಗಿಸಿ, ಪ್ರತಿಫಲನ ಗೊಂಡ ಅತಿನೇರಿಳೆ ಬೆಳಕನ್ನು ಹೀರಿಕೊಳ್ಳುವಂತೆ ಮತ್ತು ಗೋಚರ ಪ್ರತಿದೀಪ್ತಿ ಮಾತ್ರ ಪಿಲ್ಮಿನ ಮೇಲೆ ಬೀಳುವಂತೆ ಮಾಡುವಂಥ ಸೋಸುಕವೊಂದನ್ನ ಕೆಮರದೊಳಗೆ ಇಟ್ಟು ವಸ್ತುವಿನ ಚಿತ್ರ ತೆಗೆಯುತ್ತಾರೆ; (2) ಪ್ರತಿಫಲಿತ ಅತಿನೇರಿಳೆ ವಿಧಾನ: ಇಲ್ಲಿ ಅತಿನೇರಿಳೆ ವರ್ಣವನ್ನು ನೀಡುವಂಥ ಆಕರ ಮತ್ತು ಫಿಲ್ಮಿನ ಮೇಲೆ ಅತಿನೇರಿಳೆ ವರ್ಣಮಾತ್ರ ಬೀಳಲು ಅನುವು ಮಾಡಿಕೊಡುವ ಸೋಸ ಕವಿರುವ ಕೆಮರಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಆರ್ಥೊಕ್ರೊಮ್ಯಾಟಿಕ್ ಮತ್ತು ಪ್ಯಾನ್‍ಕ್ರೊಮ್ಯಾಟಿಕ್ ಬಗೆಯ ಫಿಲ್ಮುಗಳನ್ನು ಅಗತ್ಯಗಳಿಗೆ ಅನುಗುಣವಾಗಿ ಬಳಸುವುದಿದೆ. ಪ್ರತಿದೀಪ್ತಿ ಬೆಳಕು ವಿಧಾನವನ್ನು ಅನುಸರಿಸಿ ವರ್ಣ ಫೋಟೊಗ್ರಫಿಯನ್ನೂ ನಡೆಸಬಹುದು.
	(iii) ಅಧಿಕವೇಗ ಫೋಟೊಗ್ರಫಿ: ತಾಂತ್ರಿಕ ಅಧ್ಯಯನಗಳಲ್ಲಿ ಹೆಚ್ಚಿನ ಉದ್ದೇಶಗಳಿಗಾಗಿ ಉಪಯೋಗಕ್ಕೆ ಬರುವ ಫೋಟೋಗ್ರಫಿ ತಂತ್ರ (ಹೈಸ್ಪೀಡ್ ಫೋಟೊಗ್ರಫಿ). ಆಧುನಿಕ ವಿಧಾನಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:
	(1) ಏಕ-ಅನಾವರಣ (ಸಿಂಗಲ್ ಎಕ್ಸ್‍ಪೋಷóರ್) ಫೋಟೊಗ್ರಫಿ: ಕೆಮರದೊಳಗಿನ, ಅತ್ಯಂತ ಸಾಮಥ್ರ್ಯಯುತ ಯಾಂತ್ರಿಕ ತೆರೆ ಕವಾಟ (ಷಟರ್) 1/1000 ಸೆಕೆಂಡಿಗಿಂತಲೂ ಕಡಿಮೆಯಿರುವ ಅವಧಿಯ ಅನಾವರಣಕ್ರಿಯೆಗೆ ಅನುವು ಮಾಡಿ ಕೊಡುವುದಿಲ್ಲ. ಕೆಲವು ಸಂದರ್ಭUಳಲ್ಲಿ ಕಾಂತ ಪ್ರಕಾಶೀಯ ತೆರೆಕವಾಟ (ಮ್ಯಾಗ್ನೆಟೊಆಪ್ಟಿಕಲ್ ಷಟರ್), ವಿದ್ಯುತ್ ಪ್ರಕಾಶೀಯ ತೆರೆಕವಾಟ (ಎಲೆಕ್ಟ್ರೊಆಪ್ಟಿಕಲ್ ಷಟರ್—ಇವನ್ನು ಕೆರ್ ಕೋಶಗಳು (ಸೆಲ್ಸ್) ಎಂದು ಕರೆಯುವುದಿದೆ) ಮತ್ತು ಎಲೆಕ್ಟ್ರಾನಿಕ್ ತೆರೆ ಕವಾಟಗಳನ್ನು ಕಡಿಮೆ ಅವಧಿಯ ಅನಾವರಣಕ್ಕಾಗಿ ಬಳಸಿರುವುದುಂಟು. ಛಾಯೆಯನ್ನು ಉಂಟುಮಾಡುವ ಫೋಟೊಗ್ರಫಿಯ ವಿಧಾನ ಮತ್ತು ಸ್ಟ್ರೋಬೊಸ್ಕೋಪಿಕ್ ಫೋಟೊಗ್ರಫಿಯ ವಿಧಾನಗಳಲ್ಲಿ ಬಹಳಷ್ಟು ಕಡಿಮೆ ಅವಧಿಯ, ತೀವ್ರ ತೆರವಾದ ಬೆಳಕಿನ ಮಿಂಚುಗಳನ್ನು ಬಳಸುತ್ತಾರೆ. ಏಕ-ಅನಾವರಣ ಕ್ರಿಯೆಗಳಿಗೆಂದು ಇರುವ ಇನ್ನಿತರ ಪ್ರತಿಫಲಿತ ಬೆಳಕು ವಿಧಾನಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಆಕಾರ ಎಂದರೆ ಅನಿಲವಿಸರ್ಜನ ದೀಪ (ಗೇಸಿಯಸ್ ಡಿಸ್‍ಛಾರ್ಜ್ ಲ್ಯಾಂಪ್). ಜೊತೆಗೆ ಪ್ರಸಾಮಾನ್ಯ ಮಸೂರವುಳ್ಳ (ನಾರ್ಮಲ್ ಲೆನ್ಸ್) ಕೆಮರ ಇರುತ್ತದೆ.
	(2) ಅಧಿಕವೇಗ ಫೋಟೊಗ್ರಫಿ ವಿಧಾನದಲ್ಲಿಯ ಚಿತ್ರಗಳ ಸರಣಿಯನ್ನು ಚಲಚ್ಚಿತ್ರರೂಪದಲ್ಲಿ ತೆಗೆಯಲಾಗುವುದು. ಪ್ರಸಾಮಾನ್ಯ ನಿಧಾನ ಚಲನೆಯ ಕೆಮರಗಳು ವಿರಾಮಗತಿಯಲ್ಲಿ (ಇಂಟರ್‍ಮಿಟೆಂಟ್ಲಿ) ಸೆಕೆಂಡಿಗೆ 128 ಚಿತ್ರಗಳನ್ನು ತೆಗೆಯಬಲ್ಲವು. ಅಧಿಕ ವೇಗ (ಅಂದರೆ ಸೆಕೆಂಡಿಗೆ 5000 ಅಥವಾ ಹೆಚ್ಚು ಚಿತ್ರಗಳು) ಬೇಕಾದಲ್ಲಿ ಬಿಂಬ ಚಲನೆಗೆ ಪ್ರಕಾಶೀಯ ಪೂರಕತ್ವ ಇರುವ ಅವಿಚ್ಛಿನ್ನ ಫಿಲ್ಮ್ ಚಲನೆಯ ವಿಧಾನ ಅನುಸರಿಸುತ್ತಾರೆ. ಇಂಥ ಅಧಿಕ ಆವರ್ತಾಂಕದಿಂದ ತಯಾರಿಸಿದ ಚಿತ್ರಗಳನ್ನು ಪ್ರಸಾಮಾನ್ಯ ಪ್ರಕ್ಷೇಪಣ ವೇಗದಿಂದ ಪ್ರಕ್ಷೇಪಿಸಿದರೆ ಅವುಗಳ ಚಲನೆ ಚಿತ್ರತೆಗೆಯುವುದಕ್ಕೂ ಪ್ರಕ್ಷೇಪಣ ವೇಗಗಳಿಗೂ ನಡುವೆ ಇರುವ ನಿಷ್ಪತ್ತಿಯಷ್ಟು ಕಡಿಮೆಯಾಗುತ್ತದೆ.
	(3) ಮಿಂಚುಬೆಳಕನ್ನು ನೀಡುವಂಥದೀಪಗಳು, ಅನಿಲವಿಸರ್ಜನ ದೀಪಗಳು ಮತ್ತು ಅನುಕ್ರಮವಾಗಿ ಚಾಲೂಮಾಡಬಹುದಾದಂಥ ಪ್ರತ್ಯೇಕ ಕೆಮರಗಳ ಸಮೂಹಗಳು ಇವನ್ನು ಬಳಸಿ ಕಡಿಮೆ ಅವಧಿಯ ಫೋಟೊಗ್ರಾಫುಗಳ ಸರಣಿಯನ್ನೇ ತಯಾರಿಸಬಹುದು. ಅಧಿಕ ಚಿತ್ರತೆಗೆವ ವೇಗದರಗಳಿಂದ ಕೂಡಿದ ವಿಶೇಷ ಮಾದರಿಯ ಅತಿ ವೇಗದ ಕೆಮರಗಳನ್ನು ನಿರ್ಮಿಸಲಾಗಿದೆ.
	(4) ಸ್ಫೋಟದಂಥ, ಅಧಿಕವೇಗದ ಚಲನೆಯಿರುವ, ಕಡಿಮೆ ಅವಧಿಯದ್ದಾದ, ಸ್ವಯಂಪ್ರಕಾಶವುಳ್ಳ ಸನ್ನಿವೇಶವೊಂದರ ಬೆಳೆವಣಿಗೆಯ ಹಂತಗಳನ್ನು ಅಧ್ಯಯಿಸಲು ಛಾಯಾಚಿತ್ರಗಳ ಶೀಘ್ರಸರಣಿ ಬಲು ಉಪಯೋಗಕ್ಕೆ ಬರುತ್ತದೆ. ನಿಂತಿರುವ ಇಲ್ಲವೆ ಚಲಿಸುತ್ತಿರುವ ಫಿಲ್ಮಿನ ಮೇಲೆ ಅದರ ಮುಂದೆ ಶೀಘ್ರಗತಿಯಿಂದ ಆವರ್ತಿಸುವ ತೆರೆಯ ಇಲ್ಲವೆ ಆವರ್ತಿಸುವ ಉರುಳೆಯ ಮೇಲೆ ಸುತ್ತಿರುವ ತೆರೆಯ ಮೂಲಕ, ಸ್ಫೋಟದ ಜಾಡಿಗೆ ಲಂಬಕೋನದಲ್ಲಿ ಬಂದು ಬೀಳುವ ಬಿಂಬಗಳನ್ನು ಚಿಕ್ಕ ಬಿಡಿ ಚಿತ್ರಗಳಾಗಿ ಮೂಡಿಸುವ ವಿಧಾನ ಇಲ್ಲಿಯದು. ಪ್ರತ್ಯೇಕ ಚಿತ್ರಗಳ ಶ್ರೇಣಿ ಪಡೆಯಲು ಚಲಿಸುವ ಫಿಲ್ಮ್ ಕೆಮರಗಳಲ್ಲಿ ಶ್ರೀಘ್ರಗತಿಯಿಂದ ಚಲಿಸುವ ದರ್ಪಣಗಳನ್ನು ಬಳಸಬಹುದು. ಮತ್ತೊಂದು ಕ್ರಮದಲ್ಲಿ ಫಿಲ್ಮ್ ನಿಶ್ಚಲವಾಗಿರುವಂತೆ ಮಾಡಿ ಆವರ್ತಿಸುವ ಒಂದು ದರ್ಪಣ ಮಾತ್ರ ಬಳಸಬಹುದು. ಚಲಿಸುತ್ತಿರುವ ಫಿಲ್ಮಿನ ಮೇಲೆ ಮೂಡಿಬಂದಿರುವ ಅವಿಚ್ಛಿನ್ನಕುರುಹು ಚಿತ್ರಗಳ ಉಪಯೋಗಸ್ಫೋಟಗಳ ಪ್ರಾರಂಭಿಕ ಹಂತಗಳನ್ನು ಅಧ್ಯಯನಮಾಡುವಲ್ಲಿ ಉಂಟು. ಎಕ್ಸ್‍ಕಿರಣ ನಳಿಕೆಯ ಮೂಲಕ ಕಡಿಮೆ ಅವಧಿಯ, ಅಧಿಕ ವಿಭನದ ವಿಸರ್ಜನೆ ಉಂಟುಮಾಡಿ ಅಧಿಕ ವೇಗದ ಬಿಡಿ ಡಕ್ಸ್‍ಕಿರಣ ಚಿತ್ರಗಳನ್ನೂ ತೆಗೆದಿದ್ದಾರೆ.
	(vi) ಸ್ಟಿಯರಿಯೊಸ್ಕೋಪಿಕ್ ಫೋಟೊಗ್ರಫಿ: ಘನರೂಪಾತ್ಮಕ ದೃಷ್ಟಿಯನ್ನು (ಸ್ಟಿಯರಿಯೊಸ್ಕೋಪಿಕ್ ವಿಷನ್) ಅನುಕರಣೆ ಮಾಡಲು (ಸಿಮ್ಯುಲೇಟ್) ಈ ವಿಧಾನ ಬಳಸುವುದುಂಟು. ಒಂದು ವಸ್ತುವಿನ ಸ್ವಲ್ಪವೇ ಸ್ವಲ್ಪ ಬೇರೆಯಾಗಿರುವ ದೃಷ್ಟಿನೆಲೆಯಿಂದ ಬಂದುರುವ ಎರಡು ಅಂಶಗಳನ್ನು ನಮ್ಮ ಕಣ್ಣುಗಳಿಗೆ ಪ್ರತ್ಯೇಕವಾಗಿ ಒದಗಿಸುವ ಏರ್ಪಾಡು ಇಲ್ಲಿಯದು. ದೂರದಲ್ಲಿರುವ ವಸ್ತುಗಳ ಉಬ್ಬುತಗ್ಗು ದೃಶ್ಯ ಸನ್ನಿವೇಶ ಗ್ರಹಿಕೆಯನ್ನು ಪರಸ್ಪರ ಹೆಚ್ಚು ದೂರ ಇರುವಂಥ ಚಿತ್ರಗಳನ್ನು ಮಾಡುವುದರಿಂದ ಉಂಟುಮಾಡಿಕೊಳ್ಳಬಹಿದಾದರೂ ಸಾಧಾರಣ ದೂರಗಳಲ್ಲಿರುವ ವಸ್ತುಗಳ ಉಬ್ಬು ತಗ್ಗುಗಳನ್ನು ಗುರುತಿಸುವುದು ಸಾದ್ಯ. ಅಂತಷ್ಚಕ್ಷು (ಇಂಟರಾಕ್ಯುಲರ್) ದೂರ ಇಲ್ಲವೆ ಯುಕ್ತದೂರದಿಂದ ಬೇರ್ಪಟ್ಟಿರುವ ಎರಡು ದೃಷ್ಟಿನೆಲೆಗಳಿಂದ, ಒಂದಾದಮೇಲೆ ಒಂದು ಬರುವಂತೆ ವಸ್ತುವೊಂದರ ಎರಡು ಪ್ರತ್ಯೇಕ ಚಿತ್ರಗಳನ್ನು ಕೆಮರ ತೆಗೆಯುವುದರಿಂದ ಸ್ಟಿಯರಿಯೊಸ್ಕೋಪಿಕ್ ಚಿತ್ರಗಳನ್ನು ಉಂಟುಮಾಡಬಹುದು. ಹೀಗಲ್ಲದೆ, ವಸ್ತುವನ್ನು ಇಲ್ಲವೆ ಕೆಮರವನ್ನು ಸ್ವಲ್ಪ ಆವರ್ತಿಸಿ ಒಂದೇ ಫಿಲ್ಮಿನ ಮೇಲೆ ಜೊತೆ ಚಿತ್ರಬಿಂಬಗಳು ಮೂಡುವಂತೆ ಮಾಡಬಹುದು. ಬಹುಪಾಲು ಸ್ಟಿಯರಿಯೊಸ್ಕೋಪಿಕ್ ಚಿತ್ರಗಳನ್ನು ತೆಗೆಯುವಲ್ಲಿ ಒಂದೇ ಸಲಕ್ಕೆ ಎರಡು ಚಿತ್ರಬಿಂಬಗಳು ಏಕಕಾಲಿಕವಾಗಿ ಮೂಡುವಂಥ ಏರ್ಪಾಡು ಇರತ್ತದೆ. ಇಂಥಲ್ಲಿ ಸ್ಟಿಯರಿಯೊಸ್ಕೋಪಿಕ್ ಕೆಮರದ ಬಳಕೆ ಇದೆ.
	ಆಕಾಶದಲ್ಲಿ ಹಾರಾಟನಡೆಸಿ ಭೂಪ್ರಧೇಶಗಳ ಚಿತ್ರ ತೆಗೆಯುವ ಗಗನ (ಏರಿಯಲ್) ಫೋಟೊಗ್ರಫಿ ವಿಧಾನದಲ್ಲಿ ಹಾರಾಟದ ಪಥರೇಖೆಯ ನೇರದಲ್ಲಿ ಅನುಕ್ರಮವಾಗಿ ಒಂದರ ಮೇಲೊಂದು ಬರುವಂತೆ ಇರುವ ಬಿಂಬ ಚಿತ್ರಗಳನ್ನು ಉಂಟು ಮಾಡುವುದರಿಂದ ಸ್ಟಿಯರಿಯೊಸ್ಕೋಪಿಕ್ ಪರಿಣಾಮ ಪಡೆಯಬಹುದು. ಭೌಗೋಳಿಕ ಫೋಟೊಗ್ರಾಮೆಟ್ರಿಯಲ್ಲಿ (ಟೆರೆಸ್ಟ್ರಿಯಲ್ ಫೋಟೊಗ್ರಾಮೆಟ್ರಿ) ಆಯ್ಕೆಯಾದ ಮೂಲರೇಖೆಯ ಪ್ರತಿಯೊಂದು ತುದಿಯಿಂದಲೂ ಬಿಂಬಚಿತ್ರಗಳನ್ನು ತೆಗೆದು ಛಾಯಾಚಿತ್ರಗಳನ್ನು ಮಾಡಲಾಗುವುದು. ಸ್ಟಿಯರಿಯೊಸ್ಕೋಪಿಕ್ ರೇಡಿಯೊಗ್ರಫಿಯಲ್ಲಿ ಪ್ರತ್ಯೇಕ ದೃಷ್ಟಿನೆಲೆಗಳಿಂದ ಶೀಘ್ರಾನುಕ್ರಮ ವಿಧಾನದಲ್ಲಿ ಎರಡು ಎಕ್ಸ್‍ಕಿರಣ ಛಾಯಾಚಿತ್ರಗಳನ್ನು ತೆಗೆಯಲಾಗುತ್ತದೆ.
	ಸ್ಟಿಯರಿಯೊಸ್ಕೋಪಿಕ್ ಚಿತ್ರಗಳನ್ನು ನೋಡುವ ಉಪಕರಣದಲ್ಲಿ ಆ ಚಿತ್ರಗಳ ಬಲಗಣ್ಣು ಬಿಂಬ ಬಲಗಣ್ಣಿಗೆ ಮಾತ್ರ, ಎಡಗಣ್ಣು ಬಿಂಬ ಎಡಗಣ್ಣಿಗೆ ಮಾತ್ರ ದೊರೆಯುತ್ತವೆ. ಇಂಥ ಉಪಕರಣಕ್ಕೆ ಸ್ಟಿಯರಿಯೊಸ್ಕೋಪ್ ಎಂದು ಹೆಸರು.
	(v) ದಾಖಲುಪತ್ರಗಳ (ನಿಜಪ್ರತೀಕರಣ) ಜಿರಾಗ್ರಫಿ: ಎಲ್ಲ ಬಗೆಯ ಬಗೆಯ ದಾಖಲುಪತ್ರಗಳ ನಿಜಪ್ರತೀಕರಣಕ್ಕೆ ಫೋಟೊಗ್ರಫಿಯನ್ನು ಬಳಸುವುದಿದೆ. ಏಕೆಂದರೆ ಪ್ರತೀಕರಣದಲ್ಲಿ ತಪ್ಪುಗಳು ನುಸುಳುವುದಿಲ್ಲ; ನಾಶ ಹೊಂದುವ ದಾಖಲಾತಿಗಳ ಬಾಳಿಕೆಯ ಅವಧಿಯನ್ನು ಇದು ಪರಿಣಾಮಕಾರಿಯಾಗಿ ವೃದ್ಧಿಸುತ್ತದೆ. ಬಹು ಪ್ರತಿಗಳನ್ನು ಮಾಡಿಟ್ಟುಕೊಂಡು ಜೋಪಾನಿಸುವುದರಿಂದ ಮೂಲಚಿತ್ರ ಅತಿ ಬಳಕೆಯಿಂದ ಜೀರ್ಣವಾಗುವುದನ್ನು ತಡೆಗಟ್ಟಬಹುದು.
	ದಾಖಲುಪತ್ರಗಳನ್ನು ಮೂಲವಸ್ತುವಿನ ಗಾತ್ರದಷ್ಟಕ್ಕೇ ಪ್ರತೀಕರಿಸಬಹುದು. ಇದಕ್ಕೆ ಪ್ರತಿಮಾಡುವ ವಿಶೇಷ ಕಾಗದ ಮತ್ತು ಉಪಕರಣ ಬಳಸುತ್ತಾರೆ. ಚಿಕ್ಕಗ್ರಾತದ ಪ್ರತಿಗಳನ್ನು ಮಾಡಬೇಕಾದಲ್ಲಿ ಹ್ರಸ್ವೀಕರಿಸುವ (ರೆಡ್ಯೂಸಿಂಗ್) ಕೆಮರಗಳನಗನ್ನು ಬಳಸುವುದಿದೆ. ಈ ವಿಧಾನಕ್ಕೆ ಮೈಕ್ರೊಫಿಲ್ಮಿಂಗ್ ಎಂದು ಹೆಸರು. ಸಾಮಾನ್ಯವಾಗಿ 16, 35, 70 ಮತ್ತು 120 ಮಿಮೀ ಅಳತೆಯ ಫಿಲ್ಮುಗಳಿಂದ ಪ್ರತಿಗಳನ್ನು ಪಡೆಯುವುದುಂಟು. ಸಿಲ್ವರ್ ಅಥವಾ ಡೈಆeóÉೂೀಸಂವೇದನ ಶೀಲವಾಗಿರುವಂಥ ಫಿಲ್ಮುಗಳನ್ನು ಸ್ಪರ್ಶವಿಧಾನದಿಂದ, ಸಾಮಾನ್ಯ ಫೋಟೊಗ್ರಫಿಯ ತಂತ್ರಗಳನ್ನು ಬಳಸಿ ಮುದ್ರಿಸುತ್ತಾರೆ. ಇನ್ನೊಂದು ಬಗೆಯ ವಿಧಾನ ಎಂದರೆ ಜಿóರಾಗ್ರಫಿ. ಯಾವುದೇ ಅಳತೆಯ ಪ್ರತಿಗಳನ್ನು ಬೇಕಾದರೂ ಈ ವಿಧಾನದಿಂದ ಪಡೆಯಬಹುದು.
	(vi) ಫೋಟೊಗ್ರಫಿಕ್ ಫೋಟೊಮೆಟ್ರಿ: ವಿಕಿರಣದ ತೀವ್ರತೆಯನ್ನಾಗಲಿ ತೀವ್ರತೆಯ ರೋಹಿತ ವಿತರಣೆಯನ್ನಾಗಲಿ ಫೋಟೊಗ್ರಫಿ ವಿಧಾನದಿಂದ ಅಳೆಯಬಹುದು. ಯಾವುದೇ ವಿಕಿರಣದ ತೀವ್ರತೆಯನ್ನು ಅಳೆಯುವಲ್ಲಿ ಆ ವಿಕಿರಣದ ತೀವ್ರತೆಯ ಫೋಟೊಗ್ರಫಿಕ್ ಸಾಂದ್ರತೆಯನ್ನು ಶಿಷ್ಟ ಆಕರವೊಂದರ ತೀವ್ರತೆಯ ಫೋಟೊಗ್ರಪಿಕ್ ಸಾಂದ್ರತೆಯೊಂದಿಗೆ ತೌಲನಿಕವಾಗಿ ಅಧ್ಯಯನಮಾಡಲಾಗುವುದು. ಬಳಸಿದ ಫೋಟೊಗ್ರಾಫಿಕ್ ವಸ್ತುಗಳ ವೈಲಕ್ಷಣ್ಯಗಳು ನಿಖರವಾಗಿ ತಿಳಿದಿದ್ದರೆ ಈ ವಿಧಾನದಿಂದ ಅತ್ಯಧಿಕ ನಿಷ್ಕøಷ್ಟತೆ ಸಾಧಿಸಬಹುದು.
	ನ್ಯೂಕ್ಲಿಯರ್ ಕಣದ ದಾಖಲಾತಿ: ಫೋಟೊಗ್ರಫಿಕ್ ಎಮಲ್ಷನ್ನುಗಳ ಮೇಲೆ ಆವಿಷ್ಟ ಪರಮಾಣು ಕಣಗಳು ತಮ್ಮ ಇರವನ್ನು ದಾಖಲುಮಾಡುತ್ತವೆ. ಅಯಾನೀಕರಣ ಮಂದಿರ, ಗೀಗರ್ ಗುಣಕ ಮತ್ತು ವಿಲ್ಸನ್ ಮೇಘಮಂದಿರ ಮುಂತಾದ ಉಪಕರಣಗಳ ವಿಚಾರದಲ್ಲಿ ಕಣಗಳನ್ನು ದಾಖಲಿಸುವ ಈ ಕ್ರಮ ಮಹತ್ತ್ವಪಡೆದಿದೆ. ಮೊತ್ತಮೊದಲಿಗೆ ಅಧ್ಯಯನಕ್ಕೆ ಒಳಗಾದವೆಂದರೆ ಆಲ್ಛಕಣಗಳು. ಇವು ಪ್ರಸ್ಛಟನಗೊಂಡ ಎಮಲ್ಷನ್ನಿನ ಮೇಲೆ ಸಿಲ್ವರ್ ಕಣಿಕಗಳ (ಗ್ರೇನ್ಸ್ ) ಜಾಡು ಉಂಟುಮಾಡುತ್ತವೆ. ಪ್ರೋಟಾನುಗಳು ವಿಭಿನ್ನ ಅವಕಾಶದ ಸಿಲ್ವರ್ ಕಣಿಕಗಳಿರುವ ಜಾಡನ್ನು ಉಂಟುಮಾಡುತ್ತವೆ ಎಂಬುದು ಅನಂತರ ತಿಳಿಯಿತು. ಎಮಲ್ಷನ್ನಿನಲ್ಲಿಯ ಪರಮಾಣುಗಳನ್ನು ವಿಶ್ವಕಿರಣಗಳು ಡಿಕ್ಕಿಹೊಡೆದಾಗ ನ್ಯೂಕ್ಲಿಯರ್ ವಿಭಜನೆಗಳು ಉಂಟಾಗುತ್ತದೆ. ಪರಮಾಣು ನ್ಯೂಕ್ಲಿಯಸ್ಸಿನಿಂದ ಕಣಗಳು ಉಂಟುಮಾಡಿದ ಜಾಡು ಹೊಂದಿರುವ ನಕ್ಷತ್ರಾಕಾರದ ಪ್ರತಿರೂಪಗಳು ಒದಗುತ್ತವೆ. ಕಡಿಮೆ ಸಂಖ್ಯೆಯ ಕಣಿಕಗಳಿರುವ, ಯುಕ್ತವೇಗದ (ಅಂದರೆ ಸಂವೇದನಶೀಲತ್ವ ಇರುವ), ಕನಿಷ್ಠ ಮಬ್ಬು ಇರುವ, ಸಿಲ್ವರ್ ಬ್ರೋಮೈಡ್ ಅಂಶ ಅಧಿಕವಾಗಿರುವ, ದಪ್ಪನೆಯ ಲೇಪದ ವಿಶೇಷ ಎಮಲ್ಷನ್ನುಗಳ ಮೇಲೆ ಎಲೆಕ್ಟ್ರಾನ್ ಮತ್ತಿತರ ಆವಿಷ್ಟ ಕಣಗಳ ಜಾಡನ್ನು ದಾಖಲಿಸಬಹುದು. ಕಣಿಕಗಳನ್ನು ಅವುಗಳ ಒಳಗೆ ಇರುವ ಕಣಗಳ ಸಂಘಟನೆಯಿಂದ ಉಂಟಾದ ಅಯಾನೀಕರಣಗಳಿಂದ ಪ್ರಸ್ಫುಟನಗೊಳಿಸಬಹುದು.
	(vii) ಮೈಕ್ರೊಫೋಟೊಗ್ರಫಿ: ಬಲುಪಟ್ಟು ಕಡಿಮೆ ಗಾತ್ರಕ್ಕೆ ಇಳಿಸಿದ ಚಿತ್ರಗಳನ್ನು ತಯಾರಿಸುವ ತಂತ್ರ ಇದು. 16, 35 ಮಿಮೀ ಅಳತೆಯ ವಿಶೇಷ ಫಿಲ್ಮುಗಳನ್ನು ಇದರಲ್ಲಿ ಬಳಸುವುದಿದೆ. ಜೊತೆಗೆ 70 ಮತ್ತು 120 ಮಿಮೀ ಅಳತೆಯ ಫಿಲ್ಮುಗಳನ್ನೂ ಫಲಕ ಮಾದರಿಯ ಫಿಲ್ಮುಗಳನ್ನೂ ಉಪಯೋಗಿಸುತ್ತಾರೆ. ಋಣಾತ್ಮಕಗಳನ್ನೊ ಸ್ಪರ್ಶಧನಾತ್ಮಕ ಫಿಲ್ಮುಗಳನ್ನೊ ಇಲ್ಲವೇ ಕಾಗದದ ಮುದ್ರಣಗಳನ್ನೊ ಇವುಗಳಿಂದ ತಯಾರಿಸಿತ್ತಾರೆ. ಈ ಫಿಲ್ಮುಗಳನ್ನು ಮೈಕ್ರೊ ಫಿಲ್ಮ್ ರೀಡರ್ ಎಂಬ ಉಪಕರಣಕ್ಕೆ ಒಡ್ಡಿ ಫಿಲ್ಮುಗಳಲ್ಲಿಯ ವಿಷಯದ ಅಧ್ಯಯನ ಮತ್ತು ವಾಚನ ನಡೆಸಬಹುದು. ಇದಲ್ಲದೆ ಬೇಕಾದಷ್ಟು ವಿಶೇಷ ಕಾಗದದ ಮೇಲೆ ಫೋಟೊಗ್ರಫಿ ವಿಧಾನದಿಂದ ಪ್ರತಿಗಳನ್ನು ಎತ್ತಿಕೊಳ್ಳಬಹುದು. ಇಂಥ ಚಿತ್ರ ತೆಗೆಯುವಲ್ಲಿ ವಿಶೇಷ ಬಗೆಯ ಚಿಕ್ಕಗಾತ್ರದ ಕೆಮರ ಬಳಸುತ್ತಾರೆ. ವಿವಿದ ಬಗೆಯ ಪ್ರವರ್ಧನ ಸಾಮಥ್ರ್ಯವನ್ನೂ ಸ್ವಯಂಚಲಿ ನಾಭೀಕರಣವನ್ನೂ ಅಧಿಕ ಸ್ಪುಟತ್ವವನ್ನೂ ಪಡೆದಿರುವ ಮಸೂರಗಳಿರುವ ಇಂಥ ಕೆಮರಗಳಲ್ಲಿ ಸುಮಾರು ಮೂವತ್ತು ಮೀಟರುಗಳಷ್ಟು ಉದ್ದದ ಫಿಲ್ಮ್ ಇರುವ ಖಾನೆಯನ್ನು (ಮ್ಯಾಗನಜಿûೀನ್) ಅಳವಡಿಸಲು ಅವಕಾಶ ಉಂಟು. 8ರಿಂದ 40ರವರೆಗೂ ಹ್ರಸ್ವೀಕರಣದ ವ್ಯಾಪ್ತಿ ಇರುವುದಾದರೂ ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ 60ರಷ್ಟಿನ ಹ್ರಸ್ವೀಕರಣ ಮಾಡಲಾಗಿದೆ.
	(viii) ರೇಡಿಯೊಗ್ರಫಿ: ಎಕ್ಸ್‍ಕಿರಣ ಇಲ್ಲವೆ ವಿಕಿರಣಪಟು ವಸ್ತುಗಳಿಂದ ಹೊರಬರುವ ಕಿರಣಗಳ ವರ್ತನೆಯಿಂದ ಉಂಟಾದ ಫೋಟೊಗ್ರಫಿಕ್ ಬಿಂಬವನ್ನು (ರೇಡಿಯೊಗ್ರಾಫ್) ತಯಾರಿಸುವ ವಿಧಾನ (ರೇಡಿಯೊಗ್ರಫಿ).
	(ix) ಚಲಚ್ಚಿತ್ರ ನಿರ್ಮಾಣ ತಂತ್ರ: ಆಧುನಿಕ ಅಭಿವ್ಯಕ್ತಿತಂತ್ರಗಳ ಪೈಕಿ ಒಂದಾದ ಈ ತಂತ್ರದಲ್ಲಿ ಪ್ರಧಾನವಾಗಿ ಫೋಟೊಗ್ರಫಿಯ ಅನ್ವಯ ಇದೆ. ಫೋಟೊಗ್ರಫಿಯ ಇತಿಹಾಸದಂತೆಯೇ ಇದಕ್ಕೂ ಸುದೀರ್ಘ ಇತಿಹಾಸ ಉಂಟು. ಚಲನಚಿತ್ರಗಳ ನಿರ್ಮಾಣ ತಂತ್ರದ ವಿವರಗಳಿಗೆ (ನೋಡಿ- ಚಲನಚಿತ್ರ)
	(x) ಏರಿಯಲ್ ಫೋಟೊಗ್ರಫಿ: ಆಕಾಶದಲ್ಲಿ ಹಾರಾಟನಡೆಸುವ ವಿಮಾನದಿಂದಾಗಲಿ ಬಲೂನಿನಿಂದಾಗಲಿ ಭೂಪ್ರದೇಶಗಳ ವಿಶಾಲಭಾಗಗಳ ಚಿತ್ರೀಕರಣವಿಧಾನ. ಈ ವಿಧಾನದಿಂದ ಭೂಮೇಲ್ಮೈ ಬದಲಾವಣೆಗಳನ್ನು ಗುರುತಿಸುವುದು ಸಾಧ್ಯ. ದುರ್ಗಮ ಅರಣ್ಯಗಳು, ಜಲಾವೃತ ಪ್ರದೇಶಗಳು, ಹಿಮಾಚ್ಛಾದಿತ ಪರ್ವತಭಾಗಗಳು, ಜ್ವಾಲಾಮುಖಿಯ ಸೂಸುಬಾಯಿಗಳು, ಪ್ರಾಚೀನಾವಶೇಷಗಳಿಂದ ಕೂಡಿದ ಭೂಪ್ರದೇಶಗಳು ಮೊದಲಾದವನ್ನು ಗಗನದಿಂದಲೇ ಚಿತ್ರೀಕರಿಸಿಕೊಂಡು ಅವನ್ನು ಕುರಿತ ಅಧ್ಯಯನಕ್ಕೆ ಏರಿಯಲ್ ಫೋಟೊಗ್ರಫಿ ಬಲು ಸಹಾಯಕಾರಿ. ಇಂಗ್ಲೆಂಡಿನಲ್ಲಿಯ ಸ್ಯಾಲಿಸ್‍ಬರಿ ಮೈದಾನದ ಸ್ಟೋನ್‍ಹೆಂಜ್, ವುಡ್ ಹೆಂಜ್ ಮುಂತಾದ ಪ್ರಾಚೀನ ನೆಲೆಗಳನ್ನು ಈ ವಿಧಾನದಿಂದ ಚಿತ್ರಿಸಿದ್ದಾರೆ. ಒಂದನೆಯ ಮಹಾಯುದ್ಧ ಕಾಲದಲ್ಲಿ ಈ ವಿಧಾನ ವಿಶೇಷವಾಗಿ ಬಳಕೆಯಲ್ಲಿತ್ತು. ಪುರಾತತ್ವ ಇಲಾಖೆಯವರು ನಡೆಸುವ ಪ್ರಾದೇಶಿಕ ಅನ್ವೇಷಣೆಗಳಲ್ಲಿ ಏರಿಯಲ್ ಫೋಟೊಗ್ರಫಿಯ ಉಪಯೋಗ ಇದೆ.
	(xi) ಜಿರಾಗ್ರಫಿ: ಫೋಟೊಗ್ರಫಿಯ ತಂತ್ರಗಳನ್ನು ಅಳವಡಿಸಿಕೊಂಡು ಪ್ರತಿಕೃತಿಗಳ ಮುದ್ರಣಕ್ಕಾಗಿ ಬಳಕೆಯಲ್ಲಿರುವ ತಂತ್ರ. ವಿದ್ಯುತ್ ಫೋಟೊಗ್ರಫಿಯ ವ್ಯವಸ್ಥೆಗಳ ಪೈಕಿ ಒಂದು. ಇದು ವಿದ್ಯುದಾವಿಷ್ಟ ಫಲಕದ ಮೇಲೆ ರಾಳ ಪದಾರ್ಥವನ್ನು ಬಳಸಿ ಋಣಬಿಂಬ ಉಂಟುಮಾಡಿ, ಇದನ್ನು ಧನಾವಿಷ್ಟ ಕಾಗದಕ್ಕೆ ಮೇಲೆ ವರ್ಗಾಯಿಸಿ ಬಿಂಬವನ್ನು ಔಷ್ಣೀಯವಾಗಿ ಸ್ಥಾಯೀಕರಿಸುವ ವಿಧಾನ. ಇದನ್ನು ಜಿóರಾಕ್ಸ್ ಕಾರ್ಫೊರೇಷನ್ ಎಂಬ ಸಂಸ್ಥೆ ರೂಪಿಸಿತು. ವಿದ್ಯುತ್ ಫೋಟೊಗ್ರಫಿಯಲ್ಲಿ ವಸ್ತುಗಳ ಬಿಂಬದ ಮೂಡುವಿಕೆ ತತ್ತ್ವ ಸಾಮಾನ್ಯ ಫೋಟೊಗ್ರಫಿ ವಿಧಾನದಂತಲ್ಲ. ಇದರಲ್ಲಿ ಬಿಂಬದ ಮೂಡುವಿಕೆ ಕೆಲವು ಸಂವೇದನಶೀಲ ವಸ್ತುಗಳನ್ನು ಬೆಳಕಿಗೆ ಒಡ್ಡಿದಾಗ ಅವುಗಳ ಗುಣಲಕ್ಷಣಗಳಲ್ಲಿ ಉಂಟಾಗುವ ಬದಲಾವಣೆಯನ್ನು ಅವಲಂಬಿಸಿದೆ. ಅಂದರೆ ವಿದ್ಯುತ್ ಪೋಟೊಗ್ರಫಿ ವ್ಯವಸ್ಥೆಯ ದ್ಯುತಿವಾಹ ಕತ್ವವನ್ನು (ಪೋಟೊಕಂಡಕ್ಟಿವಿಟಿ) ಅವಲಂಬಿಸಿದೆ. ಸಂವೇದನಶೀಲ ಪದಾರ್ಥದ ಕೆಲವು ಭಾಗಗಳ ಮೇಲೆ ಬೆಳಕು ಬಿದ್ದಾಗ ಅಂಥ ಬೆಳಕಿಗೆ ಎದುರಾದ ಪ್ರದೇಶಗಳು ದ್ಯುತಿವಾಹಕಗಳಾಗುತ್ತವೆ. ಇಂಥ ಪ್ರದೇಶಗಳಲ್ಲಿ, ಅವು ಬೆಳಕಿಗೆ ಎದುರಾಗುವುದಕ್ಕಿಂತ ಮುಂಚೆಯೇ ವಿದ್ಯುದಾವೇಶಗಳು ಇದ್ದಲ್ಲಿ ಅವು ಇಲ್ಲವಾಗುತ್ತವೆ. ಹಾಗಲ್ಲದೆ ಬೆಳಕಿಗೆ ಒಡ್ಡಿದ ಅನಂತರ ಅವುಗಳ ಮೇಲೆ ವಿದ್ಯುದಾವೇಶಗಳು ಪ್ರಯೋಗವಾಗಿದ್ದಲ್ಲಿ ಈ ಆವೇಶಗಳು ಸಂವೇದನಶೀಲ ಪದಾರ್ಥದ, ಬೆಳಕಿನ ಪ್ರಭಾವಕ್ಕೆ ಒಳಗಾಗದಿರುವ ಪ್ರದೇಶಗಳಲ್ಲಿ ಮಾತ್ರ ಬಂಧಿತವಾಗಿರುತ್ತವೆ. ಬೆಳಕಿಗೆ ಎದುರಾದ ಭಾಗಗಳಲ್ಲಿ ಅವು ಶೇಖರವಾಗುವುದಿಲ್ಲ. ಹೀಗೆ ವಸ್ತುವಿನ ಒಂದು ಸುಪ್ತಬಿಂಬ ಏರ್ಪಡುತ್ತದೆ. ಪದಾರ್ಥದ ಆವಿಷ್ಟ ಮತ್ತು ಅನಾವಿಷ್ಟ ಪ್ರದೇಶಗಳು ಅನುಕ್ರಮವಾಗಿ ವಸ್ತುವಿನ ಬೆಳಕು ಮತ್ತು ನೆರಳಿನ ಭಾಗಗಳನ್ನು ನಿರ್ದೇಶಿಸುತ್ತವೆ. ಅನಂತರದ ಪ್ರಸ್ಫುಟನಕ್ರಿಯೆಯಲ್ಲಿ ಸುಪ್ತಬಿಂಬ ಗೋಚರಬಿಂಬವಾಗಿ ಮಾರ್ಪಡುತ್ತದೆ. ಈ ಕ್ರಿಯೆಯಲ್ಲಿ ಸುಪ್ತಬಿಂಬದ ಆವಿಷ್ಟಭಾಗಗಳು ಪ್ರಸ್ಪುಟನದ್ರಾವಣವನ್ನು ಆಕರ್ಷಿಸಿಕೊಳ್ಳುವಂತೆ ಮಾಡುವುದರಿಂದ ವಸ್ತುವಿನ ನೇರ ಧನಾತ್ಮಕ (ಡೈರೆಕ್ಟ್ ಪಾಸಿಟಿವ್) ಬಿಂಬವನ್ನಾಗಲಿ ಆವಿಷ್ಟವಾಗದೆ ಇರುವ ಭಾಗಗಳು ಪ್ರಸ್ಪುಟನ ದ್ರಾವಣವನ್ನು ಆಕರ್ಷಿಸುವಂತೆ ಮಾಡುವುದರಿಂದ ವಸ್ತುವಿನ ವ್ಯತ್ಯಸ್ತ ಬಿಂಬವನ್ನಾಗಲಿ ಪಡೆಯಬಹುದು. ಹೀಗೆ ವಿದ್ಯುತ್ ಪೋಟೊಗ್ರಫಿಯ ವಿಧಾನಗಳಿಂದ ವಸ್ತುವಿನ ಧನಾತ್ಮಕ ವ್ಯತ್ಯಸ್ತ, ರೇಖಾ (ಲೈನ್), ಅವಿಚ್ಛಿನ್ನ (ಕಂಟಿನ್ಯುವಸ್), ಒಪ್ಪಕೊಟ್ಟ (ಟೋನ್) ಬಿಂಬಗಳನ್ನು ತ್ವರಿತವಾಗಿ ಹೊಂದಬಹುದು. ಈ ತೆರವಾಗಿ ಪಡೆದ ಬಿಂಬಗಳು ಸಾಂಪ್ರದಾಯಿಕ ರೀತ್ಯ ಪಡೆದ ಬಿಂಬಗಳಷ್ಟೇ ಚೆನ್ನಾಗಿರುತ್ತವೆ.
	ಅನೇಕ ವರ್ಷಗಳಿಂದಲೂ ಬಳಕೆಯಲ್ಲಿರುವ ಜಿûರಾಗ್ರಫಿ ತಂತ್ರದಲ್ಲಿ ಈಚೀಚೆಗೆ ಹಲವು ಪರಿಷ್ಕಾರಗಳಾಗಿವೆ. ಕೈಯನ್ನು ಬಳಸಿ ಸಂಸ್ಕರಿಸುವುದರಿಂದ ಮೊದಲು ಗೊಂಡು ಹಂತ ಹಂತವಾಗಿ ಪ್ರಗತಿಹೊಂದಿ ಯಾಂತ್ರಿಕ ವಿಧಾನದ ರೀತ್ಯ ಸಂಸ್ಕರಿಸುವ ಹಂತಕ್ಕೆ ಬಂದು ಪ್ರಲೇಖಗಳ ಲಕ್ಷಾಂತರ ನಕಲುಗಳನ್ನು ತ್ವರಿತವಾಗಿ ಪಡೆಯಬಹುದಾದ ಹಂತಕ್ಕೆ ಈ ತಂತ್ರ ತಲಪಿದೆ. ಇದು ಒಂದು ಶುಷ್ಕ ವಿಧಾನ. ಈ ವಿಧಾನವನ್ನು ಸಿ.ಎಫ್. ಕಾರ್ಲ್‍ಟನ್ ಎಂಬುವ ಉಪಜಿÐಸಿದ. ಯಾವುದೇ ಮೂಲಪ್ರತಿಯ ನಕಲನ್ನು ಯಾವುದೇ ಕಾಗದದ ಮೇಲೆ ತ್ವರಿತಗತಿಯಲ್ಲಿ ಅದೂ ಹೆಚ್ಚಿನ ಸಂಖೆಯಲ್ಲಿ ತೆಗೆಯಬಹುದಾದ ಕಾರಣ ಈ ತಂತ್ರ ಅತ್ಯಂತ ಜನಪ್ರಿಯವಾಗಿದೆ.
	ಇಲ್ಲಿ ಉಪಯೋಗಿಸುವ ಸಂವೇದನಶೀಲವಸ್ತು ಒಂದು ಲೋಹದ ಫಲಕ. ಇದರ ಮೇಲೆ ಸೆಲೆನಿಯಮ್ ಎಂಬ ಪಾರದÀರ್ಶಕ ದ್ರವದ ತೆಳ ಲೇಪನಉಂಟು. ಇದನ್ನು ಕರೋನ ಡಿಸ್‍ಚಾರ್ಜರ್ ಎಂಬ ಹೆಸರಿನ ಅನೇಕ ಸಹಸ್ರವೋಲ್ಟ್ ವಿಭವಾಂತರ ಇರುವ ತಂತಿಗಳ ಶ್ರೇಣಿಯ ಕೆಳಗಡೆ ಇಟ್ಟು ಲೇಪನದ ಮೇಲೆ ಏಕಪ್ರಕಾರವಾಗಿ ಧನ ವಿದ್ಯುದಾವೇಶಗಳ ಲೇಪನ ಏರ್ಪಡುವಂತೆ ಮಾಡುತ್ರಾರೆ. ಈ ಸಂವೇದೀಕೃತ ಫಲಕವನ್ನು ಕೆಮರದಲ್ಲಿ ಇಡುತ್ತಾರೆ. ಯಾವ ಪ್ರಲೇಖದ ನಕಲನ್ನು ತೆಗೆಯಬೇಕೋ ಅದರ ಮೇಲ್ಮೈಯಿಂದ ಹೊರಟ ಬೆಳಕು ಈ ಫಲಕದ ಮೇಲೆ ಬೀಳುತ್ತದೆ. ಪ್ರಲೇಖದ ಮೇಲೆ ಎಲ್ಲೆಲ್ಲಿ ಗೆರೆ ಗುರುತು ಅಥವಾ ಅಕ್ಷರ ಇಲ್ಲವೋ ಅಲ್ಲಿಂದ ಹೊರಟ ಬೆಳಕು ಮಾತ್ರ ಫಲಕದ ಮೇಲೆ ಬೀಳುತ್ತದೆ. ಗೆರೆ ಅಕ್ಷರ ಮುಂತಾದವುಗಳ ಮೂಲಕ ಬೆಳಕು ಹಾಯುವುದಿಲ್ಲ. ಯಾವ ಯಾವ ಭಾಗಗಳು ಬೆಳಕಿನ ಪ್ರಭಾವಕ್ಕೆ ಒಳಗಾಗುತ್ತವೆಯೋ ಆ ಭಾಗಗಳಲ್ಲಿ ಆವೇಶಗಳು ಇಲ್ಲವಾಗುತ್ತವೆ. ಬೆಳಕು ಬೀಳದ ಭಾಗಗಳಲ್ಲಿ ಆವೇಶಗಳು ಹಾಗೆಯೇ ಇರುತ್ತವೆ. ಈ ರೀತಿ ವಸ್ತುವಿನ ಅಥವಾ ಪ್ರಲೇಖದ ಒಂದು ಸುಪ್ತನಿಂಬ ಫಲಕದಲ್ಲಿ ಮೈದಳೆಯುತ್ತದೆ. ಇದರ ಫೋಟೊಗ್ರಫಿಕ್ ಸಂವೇದನಶೀಲತೆ ಸಾಂಪ್ರದಾಯಿಕವಾಗಿ ಉಪಯೋಗಿಸುವ ಋಜುವರ್ಣದ (ಆ್ಯಕ್ರೋಮ್ಯಾಟಿಕ್) ಫಿಲ್ಮುಗಳದರಷ್ಟೇ ಇರುತ್ತದೆ.
	ಮುಂದೆ ಫಲಕದ ಮೇಲಿನ ಸುಪ್ತಬಿಂಬವನ್ನು ಪ್ರಸ್ಫುಟನಗೈದು ಗೋಚರ ಬಿಂಬವನ್ನು ಮೂಡಿಸುತ್ತಾರೆ. ಪ್ರಸ್ಫುಟನಾನಂತರ ಫಲಕದಮೇಲ್ಮೈಗೆ ವರ್ಣವಿನ್ಯಾಸ ಕಾರಿ (ಟೋನರ್) ಎಂಬ ವರ್ಣದ್ರವ್ಯಕಣಗಳ ಪುಡಿಯ ಲೇಪನ ಕೊಡುತ್ತಾರೆ. ಲೇಪಿಸಲ್ಪಟ್ಟ ವರ್ಣವಿನ್ಯಾಸಕಾರಿಯಲ್ಲಿ ಪ್ರತಿವಿದ್ಯುದಾವೇಶಗಳು ಇದ್ದ ಪಕ್ಷಕ್ಕೆ (ಅಂದರೆ ಋಣವಿದ್ಯುದಾವೇಶಗಳು) ಅದರ ಕಣಗಳು ಫಲಕದ ಆವಿಷ್ಟ ಭಾಗಗಳಿಂದ ಆಕರ್ಷಿಸಲ್ಪಟ್ಟ ಸ್ಥಾಯೀವಿದ್ಯುತ್ತಿನಿಂದ ಹಿಡಿಯಲ್ಪಟ್ಟ ಪುಡಿಯಿಂದಾದ ಪ್ರಲೇಖದ ಧನಾತ್ಮಕ (ಪಾಸಿಟಿವ್) ಬಿಂಬ ಏರ್ಪಡುತ್ತದೆ. ಹಾಗಲ್ಲದೆ, ಲೇಪನಗೊಂಡಿರುವ ವರ್ಣವಿನ್ಯಾಸಕಾರಿ ಪುಡಿಯಲ್ಲಿ ಧನವಿದ್ಯುದಾವೇಶಗಳು ಇದ್ದಲ್ಲಿ ಅದರ ಕಣಗಳು ಫಲಕದ ಅನಾವಿಷ್ಟ ಅಂದರೆ ದ್ಯುತಿವಾಹಕಗಳಾಗಿರುವ ಬಾಗಗಳಿಂದ ವಿಕರ್ಷಿಸಲ್ಪಟ್ಟು ಸ್ಥಾಯೀವಿದ್ಯುತಿನಿಂದ ಹಿಡಿಯಲ್ಪಟ್ಟ ಪುಡಿಯಿಂದಾದ ಪ್ರಲೇಖದ ವ್ಯತ್ಯಸ್ತಬಿಂಬ ಏರ್ಪಡುತ್ತದೆ.
	ಪ್ರಸ್ಪುಟನ ಕ್ರಿಯೆ ಜಿóರಾಗ್ರಫಿಕ್ ಫಲಕಕ್ಕೆ ವರ್ಣವಿನ್ಯಾಸಕಾರಿಯನ್ನು ಲೇಪಿಸುವ ಅತ್ಯಂತ ಸಾಮಾನ್ಯ ವಿಧಾನ ಎಂದರೆ ಪ್ರಸ್ಪುಟನಕಾರಿಯನ್ನು ಎರಡು ಘಟಕಗಳ ಮಿಶ್ರಣವಾಗಿ ತೆಗೆದುಕೊಳ್ಳುವುದು. ಆತಿ ನುಣ್ಣನೆಯ ವರ್ಣವಿನ್ಯಾಸಕಾರಿ ಪುಡಿ ಮತ್ತು ಗೋಳಾಕಾರದ ಮಣಿವಾಹಕ (ಸ್ಪೆರಿಕಲ್ ಬೀಡ್ ಕ್ಯಾರಿಯರ್) ಇವೆರಡರ ಮಿಶ್ರಣವನ್ನು ಬೆಳಕಿಗೆ ಒಡ್ಡಿದ ಸೆಲೆನಿಯಮ್ ಮೇಲ್ಮೈ ಮೇಲೆ ಹರಡಬೇಕು; ಇಲ್ಲವೆ ಫಲಕವನ್ನು ವರ್ಣವಿನ್ಯಾಸಕಾರಿ ಪುಡಿಯ ದಟ್ಟವಾದ ಧೂಳಿನ ಆವರಣದಲ್ಲಿಡಬೇಕು. ಮೊದಲನೆಯ ರೀತಿಯ ಪ್ರಸ್ಪುಟನೆಯಲ್ಲಿ ಮುದ್ರಣದ ವಿಘಟನೆ (ರೆಸೊಲ್ಯೂಷನ್) ಕಡಿಮೆ. ಅಂದರೆ ಗುಣಾತ್ಮಕವಾಗಿ ಹೇಳುವುದಾದರೆ ಮೂಲ ಪ್ರಲೇಖದಲ್ಲಿ ಗೆರೆಗಳು, ಗುರುತುಗಳು ಅಥವಾ ಅಕ್ಷರಗಳು ಬಲು ಒತ್ತೊತ್ತಾಗಿ ಇದ್ದಲ್ಲಿ ನಕಲಿನಲ್ಲಿ ಅಷ್ಟೇ ಸ್ಪಷ್ಟವಾಗಿ ಅವು ಮೂಡಲಾರವು. ಎರಡನೆಯ ರೀತಿಯ ಪ್ರಸ್ಪುಟನೆಯಲ್ಲಿ ಮುದ್ರಣದ ವಿಘಟನೆ ಹೆಚ್ಚು.
	ತರುವಾಯದ ಕ್ರಮ ಮುದ್ರಣ. ಇದರಲ್ಲಿ ಪುಡಿಯಿಂದಾದ ಬಿಂಬವನ್ನು ಕಾಗದದ ಮೇಲ್ಮೈಗೆ ಸ್ಥಾಯೀ ವಿದ್ಯುತ್‍ವರ್ಗಾವಣೆ ಮಾಡಲಾಗುವುದು. ಬಿಂಬದ ಮುದ್ರೆ ಕಾಗದದ ಮೇಲೆ ಬೀಳುವಂತೆ ಮಾಡಲು ಮುದ್ರಿಸಬೇಕಾದ ಕಾಗದವನ್ನು ಪ್ರಸ್ಪುಟನಗೊಳಿಸಿದ ಬಿಂಬವುಳ್ಳ ಫಲಕದ ಮೇಲ್ಮೈಗೆ ಸಂಪರ್ಕ ಉಂಟಾಗುವಂತೆ ಇಟ್ಟು ಕಾಗದ ಮೇಲುಗಡೆಯೂ ಫಲಕ ಕೆಳಗಡೆಯೂ ಇರುವ ಹಾಗೆ ಇವೆರಡನ್ನೂ ಕೂಡಿಸಲಾಗುತ್ತದೆ, ಅನಂತರ ಮೊದಲು ಸೆಲೆನುಯಮ್ ಮೇಲ್ಮೈಯನ್ನು ವಿದ್ಯುದಾವಿಷ್ಟಗೊಳಿಸಲು ಬಳಸಿದ ಕರೋನ ವಿಸರ್ಜಕ ಉಪಕರಣ ಕೆಳಗಿಟ್ಟು ಮತ್ತೆ ಆವೇಶ ಊಡುತ್ತಾರೆ. ಹೀಗೆ ಮಾಡಿದಾಗ ಕಾಗದ ಕೂಡ ಆವಿಷ್ಟಗೊಳ್ಳುತ್ತದೆ. ಈ ಕಾಗದ ಫಲಕದ ಮೇಲಿನ ಆವಿಷ್ಟಭಾಗಗಳಿಂದ ವರ್ಣ ದ್ರವ್ಯಕಣಗಳನ್ನು ಆಕರ್ಷಿಸಿಕೊಳ್ಳುತ್ತದೆ. ಇದರಿಂದ ಬಿಂಬ ಸುಲಭವಾಗಿ ಕಾಗದದ ಮೇಲೆ ವರ್ಗಾವಣೆ ಹೊಂದುತ್ತದೆ. ಇಂಥ ಸಾವಿರಾರು, ಲಕ್ಷಾಂತರ ಕಾಗದಗಳನ್ನು ಒಂದಾದ ಮೇಲೆ ಒಂದರಂತೆ ಇಟ್ಟು ಅಷ್ಟೇ ಸಂಖ್ಯೆಯ ನಕಲುಗಳನ್ನು ತ್ವರಿತವಾಗಿ ಪಡೆಯಬಹುದು.
	ಸ್ಥಾಯೀಕರಣ: ಇದನ್ನು ಮಾಡಲು ಕಾಗದವನ್ನು ವಿಶೇಷ ರೀತಿಯಲ್ಲಿ ಕಾಸಬೇಕಾಗುತ್ತದೆ. ಹಾಗೆ ಕಾಸಿದಾಗ ವರ್ಣದ್ರವ್ಯಪುಡಿ ಕರಗಿಕಾಗದದಲ್ಲಿ ಇಳಿದು ಅದಕ್ಕೆ ಬಲವಾಗಿ ಅಂಟಿಕೊಳ್ಳುತ್ತದೆ.s
	ಪಠ್ಯವಿಷಯಗಳನ್ನು ಸಾಕಷ್ಟು ಸ್ಪುಟವಾಗಿ ನಕಲು ಮಾಡುವಂಥ ವಿಘಟನ ಸಾಮಥ್ರ್ಯ ಈ ವಿಧಾನದಲ್ಲಿದೆ. ಇದರಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಂಡುಬಂದಿದೆಯಾಗಿ ಅವಿಚ್ಛಿನ್ನ ಬಿಂಬಗಳನ್ನು ಕೂಡ ಸಾಕಷ್ಟು ಸ್ಪುಟವಾಗಿ ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ ವಸ್ತುವಿನ ಕೇವಲ ಕಪ್ಪು ಬಿಳುಪು ಬಿಂಬ ಕೊಡುವ ಪಾಸಿಟಿವ್ ಮತ್ತು ನೆಗೆಟಿವ್‍ಗಳಿಂದ ವಸ್ತುವಿನ ಬಣ್ಣದ ಬಿಂಬಗಳನ್ನು ಮೂಡಿಸುವ ಕರಡುಪ್ರತಿ ಪಡೆದು ಅನಂತರ ಅವುಗಳಿಂದ ಮುದ್ರಣಕ್ಕೆ ಉಪಯೋಗಿಸುವ ಫಲಕಗಳನ್ನು ಶೀಘ್ರವಾಗಿ ಪಡೆಯುವ ಕ್ರಿಯಾವಿಧಾನದಲ್ಲೂ ಸಾಕಷ್ಟು ಪ್ರಗತಿ ಆಗಿದೆ. ವಸ್ತುವಿನ ಬಣ್ಣದ ಬಿಂಬ ಪಡೆಯುವ ವಿಧಾನಕ್ಕೆ ವರ್ಣಜಿóರಾಗ್ರಫಿ ಎಂದು ಹೆಸರು.
	ಈ ತಂತ್ರ ಅನೇಕ ಕ್ಷೇತ್ರಗಳಲ್ಲಿ ಬಲು ಪ್ರಯೋಜನಕಾರಿ. ಡೈಆeóÉೂೀ ಮುದ್ರಣ ಕಾಗದಗಳಿಗೆ ಬೇಕಾದ ಮಿತಪಾರದರ್ಶಕ ನೆಗೆಟಿವ್‍ಗಳ ತಯಾರಿಕೆಯಲ್ಲು, ಮೈಕ್ರೊ ಫಿಲ್ಮುಗಳ ಪ್ರವರ್ಧನ ಕ್ರಿಯೆಯಲ್ಲಿ, ಆಫ್‍ಸೆಟ್ ಮುದ್ರಣಕ್ಕೆ ಅಗತ್ಯವಾದ ಲೋಹ ಫಲಗಳ ತಯಾರಿಕೆಯಲ್ಲಿ ಜಿóರಾಗ್ರಫಿಯ ಬಳಕೆ ಇದೆ. ರೇಡಿಯೊಗ್ರಫಿಯಲ್ಲಿ ಕೂಡ ಈ ತಂತ್ರವನ್ನು ಅನುಸರಸಿ ಕ್ಷಿಪ್ರಗತಿಯಲ್ಲಿ ಬಿಂಬಗಳನ್ನು ಪಡೆಯಬಹುದು. ಇದಕ್ಕೆ ಜಿóರಾರೇಡಿಯೊಗ್ರಫಿ ಎಂದು ಹೆಸರು. ಜಿóರಾರೇಡಿಯೊಗ್ರಫಿಯಲ್ಲಿ ಬೆಳಕಿನ ಕಿರಣಗಳಿಗೆ ಬದಲಾಗಿ ಎಕ್ಸ್ ಕಿರಣಗಳನ್ನು ಬಳಸುತ್ತಾರೆ.
	eóÉೂೀಗ್ರಾಫ್ : ವಸ್ತುವಿನ ಲಕ್ಷಾಂತರ ಮೂರು ಆಯಾಮಗಳ (ತ್ರೀಡೈಮನ್ಷನಲ್ ) ಬಿಂಬಗಳನ್ನು ಶೀಘ್ರಗತಿಯಲ್ಲಿ ಮದ್ರಿಸುವ ಹೊಸ ವಿಧಾನವೇ eóÉೂೀಗ್ರಾಫ್. ಇದನ್ನು 1960ರ ಮಧ್ಯಭಾಗದಲ್ಲಿ ರೂಪಿಸಲಾಯಿತು. ಕೌಲೇಸ್ ಕಮ್ಯೂನಿಕೇಷನ್. ಈಸ್ಟ್ ಮನ್ ಕೆಮಿಕಲ್ ಪ್ರಾಡಕ್ಟ್ಸ್ ಮತ್ತು ಹ್ಯಾರಿಸ್ ಇಂಟರ್ ಟೈಪ್ ಕಾರ್ಪೊರೇಷನ್ ಪ್ರಮುಖ ಕಂಪನಿಗಳ ಮೂರು ಪರಸ್ಪರ ತಾಂತ್ರಿಕ ಸಹಕಾರದ ಫಲವಾಗಿ ಈ ವಿಧಾನ ಬಳಕೆಗೆ ಬಂತು.
	ಮಸೂರಾಕಾರದ, ಲಂಬನ ಆ ಮೂಲಾಗ್ರದರ್ಶಕ ಎಂಬ ಉಪಕರಣವೊಂದನ್ನು (ಲೆಂಟಿಕ್ಯುಲಾರ್ ವರ್ಷನ್ ಆಫ್ ಪ್ಯಾರಲಾಕ್ಸ್ ಪ್ಯಾನೊರಾಮೊಗ್ರಾಮ್) ಉಪಯೋಗಿಸಿ ಈ ಕಂಪನಿಗಳವರು ಸ್ಟೀರಿಯೊಚಿತ್ರ ತಂತ್ರವನ್ನು ರೂಪಿಸಿದರು. ಈ ತಂತ್ರದಿಂದ ತಯಾರಿಸಿದ ಸ್ಟೀರಿಯೊ ಚಿತ್ರ ಕೌಲೇಸ್ ಕಮ್ಯೂನಿಕೇಷನ್ಸ್ ಕಂಪನಿಯವರ ಲುಕ್ ಮ್ಯಾಗ್‍ಜಿûೀನಿನಲ್ಲಿ ಪ್ರಕಟಿಸಲಾಯಿತು. ವಸ್ತುವಿನ ಸುಮಾರು ಏಳು ಮಿಲಿಯನ್ ನಕಲುಗಳನ್ನು ತ್ವರಿತವಾಗಿತೆಗೆಯುವ ಸಾಮಥ್ರ್ಯ ಮತ್ತು ಕಾಗದಕ್ಕೆ ಸುಲಭವಾಗಿ ಅಂಟಿಕೊಳ್ಳುವ ಮತ್ತು ಕಾಸಿ ಕಾಗದದೊಳಕ್ಕೆ ಸುಲಭವಾಗೆ ಇಳಿಯುಂತೆ ಮಾಡಬಹುದಾದ ಎಪೊಲೇನ್ ಎಂಬ ರಾಸಾಯನಿಕ ವಸ್ತು ಉಪಯೋಗಿಸಿ ಮೂರು ಆಯಾಮದ ಪರಿಣಾಮ ಉಂಟು ಮಾಡುವ ಬಿಂಬ ತಯಾರಿಸಿದ್ದು ಈ ವಿಧಾನದ ಪ್ರಮುಖ ಸಿದ್ಧಿ.
	ತಾಮಸ್ ಆಲ್ವ ಎಡಿಸನ್ನನ ಕುರಿತು ಕಪ್ಪು ಬಿಳುಪಿನ ಮೂರು ಆಯಾಮದ ಚಿತ್ರ 1964 ಫೆಬ್ರವರಿ 25ರಂದು ಲುಕ್ ಸಂಚಿಕೆಯಲ್ಲಿ ಪ್ರಕಟವಾಯಿತು. ಅದೇ ವರ್ಷ ನಾಲ್ಕು ಬಣ್ಣದ ಪ್ರಚಾರಕ್ಕೆ ಸಂಬಂಧಪಟ್ಟ ಮೂರು ಆಯಾಮ ಚಿತ್ರ ಪ್ರಕಟವಾಯಿತು. ಮೂರು ಆಯಾಮದ ಬಿಂಬಗಳನ್ನು ತಯಾರಿಸುವ ವಿಧಾನ ಹೀಗಿದೆ: ಮೂರು ಆಯಾಮ ಪ್ರತಿಬಿಂಬ ಪಡೆಯಬೇಕಾದ ವಸ್ತುವಿನಿಂದ ಹೊರಟ ಬೆಳಕು ಫಿಲ್ಮಿನ ಮೇಲೆ ಬೀಳುವಂತೆ ಮಾಡಿತ್ತಾರೆ. ಜಿóರಾಗ್ರಫಿ ವಿಧಾನದಲ್ಲಿಯಂತೆ ಫಿಲ್ಮು ವಸ್ತುವಿನ ಸುಪ್ತ ಬಿಂಬವನ್ನು ತನ್ನ ಮೇಲ್ಮೈಯಲ್ಲಿ ಧರಿಸುತ್ತದೆ. ಫಿಲ್ಮನ್ನು ಪ್ರಕ್ರಮ ಗೊಳಿಸುವುದಕ್ಕೆ ಮೊದಲು ಅದರ ಮುಂದೆ ತೆರೆಯೊಂದನ್ನು ಅಳವಡಿಸುತ್ತಾರೆ. ಇದರಿಂದ ಬಿಂಬವನ್ನು ನೂರಾರು ನೇರ ಸಮಾಂತರ ಪಟ್ಟಿಗಳಾಗಿ ವಿಭಾಗಿಸಲಾಗುತ್ತದೆ. ಹೀಗೆ ಫಿಲ್ಮನ್ನು ಪ್ರಕ್ರಮಗೊಳಿಸಿ ಸಾಂಪ್ರದಾಯಿಕ ರೀತಿಯಲ್ಲೇ ಮುದ್ರಿಸಲು ಬೇಕಾದ ಫಲಕಗಳನ್ನು ತಯಾರಿಸುತ್ತಾರೆ. ಮುದ್ರಣ ಮಾಡುವುದಕ್ಕೆ ಮುಂಚೆ ಫಲಕದ ಮೇಲೆ ಎಪೊಲೇನ್ ಎಂಬ ಪ್ಲಾಸ್ಟಿಕ್‍ಲೇಪನ ಕೊಡುತ್ತಾರೆ. ಈ ಪ್ಲಾಸ್ಟಿಕ್ಕಿನ ಸಂಶ್ಲೇಷಣೆಯೇ ಇಲ್ಲಿಯ ಪ್ರಮುಖ ಹಂತ. ಈ ಲೇಪನ ಪ್ರಕ್ಷೇಪಣ ತೆರೆಯಂತೆ ಕೆಲಸ ಮಾಡುತ್ತದೆ. ಇದಕ್ಕೆ ಆವಶ್ಯಕವಾದ ಎಲ್ಲ ಪ್ರಕಾಶೀಯ ಗುಣಲಕ್ಷಣಗಳು ಇವೆ. ಅಲ್ಲದೆ ಇದು ಕಾಗದಕ್ಕೆ ಸಲೀಸಾಗಿ ಅಂಟಿಕೊಳ್ಳುತ್ತದೆ. ಕ್ಷಿಪ್ರಗತಿಯ ಮುದ್ರಣದಲ್ಲಿ ಪ್ರಯೋಜನಕ್ಕೆ ಬರುವಂಥ ಅನುಕೂಲತಮ ದ್ರವನ ಬಿಂದು ಇದಕ್ಕಿದೆ. ಇದು ಬಿಂಬದ ನೇರಪಟ್ಟಿಗಳ ಮೇಲೆ ಕೇಂದ್ರೀಕರಿಸಿ ವೀಕ್ಷಕರಿಗೆ ಆಳದ ದೃಷ್ಟಿ ಅರಿವು ಮೂಡಿಸಿ ಘನಗಾತ್ರದ ಗ್ರಹಿಕೆ ಉಂಟುಮಾಡುತ್ತದೆ.
	ಮುದ್ರಣ ಪ್ರಕ್ರಮಗಳನ್ನು ಮತ್ತಷ್ಟು ಉತ್ತಮ ಪಡಿಸಿ ಕಡಿಮೆ ಬೆಲೆಯಲ್ಲಿ eóÉೂೀಗ್ರಾಫುಗಳನ್ನು ಪಡೆಯಬಹುದಾದ, ಸಾಮಾನ್ಯ ಕೆಮರಗಳಂತೆ ಕೈಯಲ್ಲಿ ಹಿಡಿದು ಒಯ್ಯಬಹುದಾದ ಮತ್ತು ತತ್‍ಕ್ಷಣದ ಪೋಟೊಗಳನ್ನು ತೆಗೆಯಬಹುದಾದ eóÉೂೀಗ್ರಾಫ್ ಕೆಮರಗಳನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಿವೆ.	(ಎಚ್. ಎಸ್ ಎಸ್‍ಯು.)
Iಗಿ ವರ್ಣ ಫೋಟೊಗ್ರಫಿ
	ಕಪ್ಪುಬಿಳುಪಿನ ಚಿತ್ರ ತಯಾರಿಸುವ ಸಂದರ್ಭದಲ್ಲಿ ವರ್ಣಚಿತ್ರ ತಯಾರಿಸುವುದರ ಬಗ್ಗೆ ಚಿಂತನೆ ಹರಿದಿತ್ತು. ನಿಸರ್ಗಸಹಜವಾದ ಬಣ್ಣಗಳನ್ನು ಕೆಮರ ವಿಧೇಯತೆಯಿಂದ ಸೆರೆಹಿಡಿಯಲೇಬೇಕು ಎಂಬುದು ಇಲ್ಲಿಯ ಉದ್ದೇಶ.
	ಸ್ಕಾಟ್ಲೆಂಡಿನ ಭೌತವಿಜ್ಞಾನಿ ಸರ್ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‍ವೆಲ್ (1831-79) ವರ್ಣಫೋಟೊಗ್ರಫಿ ತಂತ್ರವನ್ನು ಮೊದಲು ವಿವರಿಸಿದ (1861) ಕೆಂಪು, ಹಸಿರು ಮತ್ತು ನೀಲಿ ಎಂಬ ಮೂರು ಮೂಲಭೂತ ವರ್ಣಗಳನ್ನು ಒಂದರೊಡನೊಂದು ಬೇರೆ ಬೇರೆ ಅನುಪಾತಗಳಲ್ಲಿ ಮಿಶ್ರಿಸಿದರೆ ಬೇಕಾದ ವರ್ಣಛಾಯೆ ಉಂಟುಮಾಡಿಕೊಳ್ಳಬಹುದು ಎಂಬುದನ್ನು ಆತ ಪ್ರಾಯೋಗಿಕವಾಗಿ ಪ್ರದರ್ಶಿಸಿದ. ವರ್ಣ ಫೋಟೊಗ್ರಫಿಗೆ ಅನ್ವಯಿಸಿದಂಥ ಮೊತ್ತಮೊದಲ ಸಂಕಲನ ವ್ಯವಸ್ಥೆಯೇ (ಆಡಿಟಿವ್ ಸಿಸ್ಟಮ್ ) ಇದು. ಮುಂದೆ ಫ್ರಾನ್ಸಿನಿ ಪಿಯಾನೋವಾದಕ ಲೂಯಿದ್ಯುಕೂದೈ ಹೌರಾನ್ ಎಂಬವ ವ್ಯವಕಲನ ವ್ಯವಸ್ಥೆಯನ್ನು ಸಬ್‍ಟ್ರ್ಯಾಕ್ಟಿವ್ ಸಿಸ್ಟಮ್) ಮುಂದಿಟ್ಟ. ವರ್ಣಗ್ರವ್ಯಗಳು (ಪಿಗ್‍ಮೆಂಟ್ಸ್) ಬೆಳಕಿನಿಂದ ತಾವು ಪ್ರತಿಫಲಿಸುವ ತಮ್ಮವೇ ಆದ ಬಣ್ಣಗಳನ್ನು ಬಿಟ್ಟು ಉಳಿದೆಲ್ಲ ಬಣ್ಣಗಳನ್ನೂ ಹೀರಿಕೊಳ್ಳುವೆ ಇಲ್ಲವೇ ಬಿಟ್ಟು ಕೊಡುತ್ತವೆ ಎಂಬುದೇ ವ್ಯವಕಲನತತ್ತ್ವದ ತಾತ್ರ್ಪು.
	ಬಹಳಷ್ಟು ವರ್ಷ ಪರ್ಯಂತ ವರ್ಣಫೋಟೊಗ್ರಫಿಯ ತಂತ್ರ ತಾತ್ತ್ವಿಕವಾಗಿಯೇ ಉಳಿದುಕೊಂಡುಬಂತು. ಬರ್ಲಿನ್ನಿನ ದ್ಯುತಿರಸಾಯನ ವಿಜ್ಞಾನದ ಪ್ರಾಧ್ಯಾಪಕ ಹರ್ಮಾನ್ ವೋಗಲ್ 1873ರಲ್ಲಿ ಸಾಮಾನ್ಯವಾಗಿ ನೀಲಿ ಬಣ್ಣ ಬಿಟ್ಟು ಉಳಿದೆಲ್ಲ ಬಣ್ಣಗಳಿಗೂ ಸಂವೇದನಶೀಲವಲ್ಲದ ಕಲೋಡಿಯನ್ ಫಲಕವನ್ನು ಅನಿಲಿನ್ ವರ್ಣ ದ್ರವ್ಯದಿಂದ ಲೇಪಿಸುವುದರಿಂದ ಅದು ಹಸಿರು ಬಣ್ಣಕ್ಕೆ ಸಂವೇದನಶೀಲವಾಗುವಂತೆ ಮಾಡಬಹುದು ಎಂಬುದನ್ನು ಕಂಡುಕೊಂಡ (1887). ಆರ್ಥೊಕ್ರೊಮ್ಯಾಟಿಕ್ ಫಲಕದ ಉಪಜ್ಞೆ ಈ ಆವಿಷ್ಕಾರದ ಫಲ. ಈ ಫಲಕ ಕೆಂಪುಬಣ್ಣಕ್ಕೆ ಸಂವೇದನ ಶೀಲವಾಗಿಯೂ ನೀಲಿಬಣ್ಣಕ್ಕೆ ಹೆಚ್ಚು ಸಂವೇದನ ಶೀಲವಾಗಿಯೂ ಇರುವುದು ಗೊತ್ತಾಯಿತು. 1906ರಲ್ಲಿ ರ್ಯಾಟನ್ ಮತ್ತು ವೈನ್‍ರೈಟ್ ಎಂಬವರು ಪ್ಯಾನ್‍ಕ್ರೊಮ್ಯಾಟಿಕ್ ಫಲಕಗಳನ್ನು ತಯಾರಿಸಿದರು. ರೋಹಿತದ ಎಲ್ಲ ಬಣ್ಣಗಳಿಗೂ ಇವು ಸಂವೇದನಶೀಲವಾಗಿದ್ದುವು.
	ಬಣ್ಣದ ಚಿತ್ರಗಳನ್ನು ತೆಗೆಯುವಂಥ ಕೆಮರವನ್ನು ಫಿಲಡೆಲ್ಫಿಯದ ಫ್ರೆಡರಿಕ್ ಐವ್ಸ್ ಎಂಬವ 1891ರಲ್ಲಿ ಉಪಜ್ಞಿಸಿದ. ಇದೊಂದು ಯುಗ ಪ್ರವರ್ತಕ ಉಪಜ್ಞೆಯಾಯಿತು. ಕ್ಲರ್ಕ್ ಮ್ಯಾಕ್ಸ್‍ವೆಲ್‍ನಿಂದ ಪ್ರತಿಪಾದಿತವಾದ ತತ್ತ್ವಗಳನ್ನು ಅನ್ವಯಿಸಿಕೊಂಡು ಒಂದೇ ಫಲಕದ ಮೇಲೆ ತಲಾ ಒಂದೊಂದು ಮೂಲಭೂತ ವರ್ಣ ದಾಖಲಿಸುವಂತೆ, ಮೂರು ಋಣಾತ್ಮಕಗಳನ್ನು (ನೆಗೆಟಿವ್ಸ್) ಈ ಕೆಮರದಿಂದ ತಯಾರಿಸಬಹುದಿತ್ತು. ಫಲಕದಿಂದ ಪಾರದರ್ಶಕನೆಲೆಯ ಮೇಲೆ ಧನಾತ್ಮಕಬಿಂಬಗಳಿರುವ (ಡಯಾಪಾಸಿಟಿವ್ಸ್) ಚಿತ್ರಗಳನ್ನು ತಯಾರಿಸಲಾಯಿತು. ಇವನ್ನು ಫೋಟೊಕ್ರೋಮೊಸ್ಕೋಪ್ ಎಂಬ ವೀಕ್ಷಣ ಉಪಕರಣದ ಮೂಲಕ ವೀಕ್ಷಿಸಬಹುದಾಗಿತ್ತು. ಬಹುಮಂದಿ ವಿಜ್ಞಾನಿಗಳು ಮುಂದೆ ಅನೇಕ ಪ್ರಯೋಗಮಾಡಿದರಾದರೂ ಯಾವುದರಿಂದಲೂ ಪ್ರಾಯೋಗಿಕ ಉಪಯುಕ್ತತೆ ಕಂಡುಬರಲಿಲ್ಲ. ಫ್ರೆಂಚ್ ರಸಾಯನವಿಜ್ಞಾನಿಗಳೂ ಫೋಟೊಗ್ರಾಫಿಕ್ ವಸ್ತುಗಳ ತಯಾರಕರೂ ಆದ ಆಗಸ್ಟೆ ಲೈಮೇರ್ (1862-1954) ಮತ್ತು ಲೂಯಿಲೈಮೇರ್ (1864-1948) (ಲೈಮೇರ್ ಸೋದುರರು) ಎಂಬವರು ಬಣ್ಣದ ತೆರೆ ಪ್ರಕ್ರಮವನ್ನು (ಕಲರ್ ಸ್ಕ್ರೀನ್ ಪ್ರೋಸೆಸ್) ಅಭಿವರ್ಧಿಸಿದರು (1904). ಕಪ್ಪು ಬಿಳುಪಿನ ಚಿತ್ರಗಳಿಗೆ ಬೇಕಾಗುವ ಒಡ್ಡಿಕೆ ಅವಧಿಯ 40 ಪಟ್ಟು ಹೆಚ್ಚಿನ ಅವಧಿ ಬಣ್ಣದ ಚಿತ್ರಗಳನ್ನು ತೆಗೆಯುವಾಗ ಬೇಕಾಗುತ್ತದೆಂದೂ ವರ್ಣ ಪಾರದರ್ಶನಗಳು (ಟ್ರಾನ್ಸ್‍ಪೆರೆನ್ಸೀಸ್) ಹೆಚ್ಚು ಸಾಂದ್ರದವಾಗಿರುತ್ತವೆಂದೂ ಅಭಿಪ್ರಾಯಮೂಡಿತು. ಅಂತೂ ಇಂತೂ ಬಣ್ಣದ ಚಿತ್ರೀಕರಣವಿಧಾನವನ್ನು ವ್ಯಾವಹಾರಿಕವಾಗಿಯೂ ಬಳಕೆಗೆ ತರಬಹುದು ಎಂಬುದು ಜನಕ್ಕೆ ಮನವರಿಕೆಯಾಯಿತು.
	ಸಂಕಲನ ಮತ್ತು ವ್ಯವಕಲನ ವ್ಯವಸ್ಥೆಗಳ ಪೈಕಿ ಎರಡನೆಯದನ್ನೇ ಪ್ರಯೋಗಗಳಲ್ಲಿ ಹೆಚ್ಚಾಗಿ ಬಳಸುವುದಿದೆ. ರೂಡಾಲ್ಛ್ ಫಿಷರ್ ಎಂಬದ 1912ರಲ್ಲಿ ವರ್ಣದ್ರವ್ಯ-ಜೋಡಣೆಯ (ಡೈಕಪ್ಲಿಂಗ್) ವಿಧಾನ ಸೂಚಿಸಿದ. ಬೇರೆ ಬೇರೆ ವರ್ಣಸಂವೇದನಶೀಲತ್ವವನ್ನು ಪಡೆದಿರುವ ಮೂರು ಎಮಲ್ಷನ್ ಪೊರೆಗಳನ್ನು ಅವು ಒಂದೇ ಪೊರೆಯಂತೆ ಇರುವ ಹೌಗೆ ಇಡುವುದು ಇಲ್ಲಿಯ ಕ್ರಮ. ಮುಂದಿನ 23 ವರ್ಷಗಳ ತನಕವೂ ಮೊತ್ತಮೊದಲ ಪ್ರಾಯೋಗಿಕ ಸಾಮರ್ಥ್ಯವುಳ್ಳ ಫಿಲ್ಮ್ ತಯಾರಾಗಲೇ ಇಲ್ಲ. ವಿವಿಧ ಪೊರೆಗಳ ಎರಡು ಫಿಲ್ಮುಗಳನ್ನು (ಕೊಡಕ್ರೋಮ್ 1935 ಮತ್ತು ಆಗ್ಫಕಲರ್ 1936) ಕೊಡಕ್ ರಿಸರ್ಚ್ ಸಂಶೋಧನಾಲಯಗಳ, ಅಮೆರಿಕದ ಲಿಯೊಪೋಲ್ಡ್ ಮ್ಯಾನಿಸ್ (1890-1964) ಮತ್ತು ಲಿಯೊಪೋಲ್ಡ್ ಗಡಾಫ್‍ಸ್ಕೀ (1870-1938) ಎಂಬವರು ತಯಾರಿಸಿದರು.
	ಕೊಡಕಲರ್ ಎಂಬುದು 1942ರಲ್ಲಿ ತಯಾರಿಸಿದಂಥ ವರ್ಣ ಋಣಾತ್ಮಕ ಫಿಲ್ಮ್. ಹವ್ಯಾಸಿ ಫೋಟೊಕಲಾವಿದರು ಇದನ್ನು ಹೆಚ್ಚಾಗಿ ಬಳಸುವುದಿದೆ. ಫಿಲ್ಮ್‍ನ್ನು ಸಂವೇದನಶೀಲವಾಗಿ ಮಾಡಿರುವಂತೆಯೇ ಬಣ್ಣದ ಚಿತ್ರಗಳನ್ನು ಮುದ್ರಿಸುವ ಕಾಗದವನ್ನೂ ಸಂವೇದನಶೀಲವಾಗಿ ಮಾಡಿರುತ್ತಾರೆ. ಬಹುಪೊರೆಗಳಿರುವ ಬಣ್ಣದ ಫಿಲ್ಮುಗಳನ್ನು ಮೊದಮೊದಲಿಗೆ ಯುದ್ಧೋದ್ಯಮಗಳಿಗೆ ಮಾತ್ರ ಮೀಸಲಾಗಿರಿಸಿದ್ದರು. ಎರಡನೆಯ ಮಹಾಯುದ್ಧಾನಂತರ ಕ್ರಮೇಣ ಇವನ್ನು ಸಾರ್ವಜನಿಕ ಉಪಯೋಗಕ್ಕೂ ನೀಡಲಾಯಿತು. ಅವುಗಳಲ್ಲಿ ಅನ್ಸ್‍ಕೋಕಲರ್ ಎಂಬುದು ವರ್ಣ ಋಣಾತ್ಮಕ; ಏರೊಕೊಡಕ್ರೋಮ್ ಎಂಬುದು ವರ್ಣದ ಪಾರದರ್ಶಕ ಫಿಲ್ಮ್. ಇವುಗಳ ಪೈಕಿ ಎರಡನೆಯದಕ್ಕೆ ಕೊಡಕ್‍ಎಕ್ಟಕ್ರೋಮ್ ಫಿಲ್ಮ್ ಎಂದು ಹೆಸರು. ವೃತ್ತಿನಿರತ ಫೋಟೊಕಲಾವಿದರ ಬಳಕೆಗಾಗಿ ಎಕ್ಟಕಲರ್ ಫಿಲ್ಮನ್ನೂ ವೃತ್ತಿನಿರತ ಚಲನಚಿತ್ರ್ರ ಫೋಟೊಕಲಾವಿದರ ಬಳಕೆಗಾಗಿ ಈಸ್ಟ್‍ಮನ್ ಫಿಲ್ಮನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಆಗ್ಫಕಲರ್ ಮತ್ತು ಆಗ್ಫಕ್ರೋಮ್; ಫ್ಯೂಜಿಕಲರ್ ಮತ್ತು ಫ್ಯೂಜಿಕ್ರೋಮ್; ಸಕೂರ ಕಲರ್ ಮತ್ತು ಸಕೂರ ಕ್ರೋಮ್ ಎಂಬ ವಾಣಿಜ್ಯ ಹೆಸರಿನ ಫಿಲ್ಮುಗಳೂ ವರ್ಣ ಪಾರದರ್ಶಕ ಫಿಲ್ಮುಗಳೂ ಮಾರುಕಟ್ಟೆಯಲ್ಲಿ ಇವೆ.
ಗಿ ಸಾಧನ - ಸಲಕರಣೆಗಳು
	ಫೋಟೊಗ್ರಫಿಯಲ್ಲಿ ಚಿತ್ರ ಸೆರೆಹಿಡಿಯಲು ಅಗತ್ಯ ಇರುವ ಉಪಕರಣ ಕೆಮರ. ಪರಿಸ್ಥಿತಿಗೆ ಅನುಗುಣವಾಗಿ ಅಚಿದರೆ, ಬೆಳಕಿನ ಬೇರೆ ಬೇರೆ ತೀವ್ರತೆಗಳಿಗೆ ಅನುಗುಣವಾಗಿ ಯುಕ್ತ ಫಿಲ್ಮನ್ನು ಆಯ್ಕೆಮಾಡಿಕೊಂಡು ಯಾವ ತೆರನ ಚಿತ್ರ ಸೆರೆಹಿಡಿಯುವ ತಂತ್ರಕ ಅಂಶಗಳನ್ನು ಅಳವಡಿಸಿಕೊಂಡು ಕೆಮರದ ಗುಂಡಿಯನ್ನು ಒತ್ತಬೇಕು ಎಂಬುದನ್ನು ತಿಳಿಸಿಕೊಡುವ ಎಕ್ಸ್‍ಪೋಷರ್ ಮೀಟರ್ ಎಂಬ ಸಲಕರಣೆ ತಯಾರುಮಾಡಿದಂಥ ಋಣಾತ್ಮಕಗಳನ್ನು ಧನಾತ್ಮಕ ಚಿತ್ರಗಳನ್ನಾಗಿಸಿಕೊಳ್ಳುವಲ್ಲಿ ಅಗತ್ಯವೆನಿಸುವ ಪ್ರವರ್ಧಕ (ಎನ್‍ಲಾರ್ಜರ್) ಮತ್ತು ತತ್ಸಂಬಂಧಿ ಸಲಕರಣೆಗಳು ಫೋಟೊಗ್ರಫಿಯ ಅವಿಭಾಜ್ಯ ಅಂಗಗಳು. ಉದ್ದೇಶಗಳು ಮತ್ತು ಅಗತ್ಯಗಳಿಗೆ ತಕ್ಕಂತೆ ವಿವಿಧ ನಮೂನೆಯ ಕೆಮರಗಳು, ವಿವಿಧ ಬಗೆಯ ಮಸೂರಗಳು, ಬೇರೆ ಬೇರೆ ವಿಧದ ಪ್ರವರ್ಧಕಗಳು, ಮಿಂಚು ಬೆಳಕನ್ನು (ಫ್ಲಾಶ್‍ಲೈಟ್) ಬೀರುವ ಸಲಕರಣೆಗಳು ಮುಂತಾದವುಗಳಲ್ಲಿ ಪರಿಷ್ಕರಣೆಗಳಾಗಿವೆ.
	(i) ಕೆಮರ: ಬಾಹ್ಯವಸ್ತುವಿನಿಂದ ಹೊರಹೊಮ್ಮುವ ಬೆಳಕನ್ನು ಫೋಟೊಗ್ರಫಿಕ್ ಹಾಳೆಯ ಮೇಲಾಗಲಿ ಫಿಲ್ಮಿನ ಮೇಲಾಗಲಿ ಕೇಂದ್ರೀಕರಿಸುವಂತೆ ಮಾಡಲು ರೂಪಿಸಿರುವ ಪ್ರಕಾಶಬಂಧ (ಲೈಟ್‍ಟೈಟ್) ಉಪಕರಣವೇ ಕೆಮರ. ಪ್ರರೂಪದ ಕೆಮರವೇ ಆಗಿರಲಿ, ಅದರ ಮೂಲಭೂತ ಅಂಗಭಾಗಗಳಿವು: 

ಚಿತ್ರ-10

ಕೆಮರ ಪೆಟ್ಟಿಗೆ, ಫೋಟೊಗ್ರಫಿಕ್ ಫಿಲ್ಮ್ ಮತ್ತು ಫಿಲ್ಮ್ ಯಂತ್ರವಿನ್ಯಾಸ, ಚಿತ್ರ ತೆಗೆಯುವ ಒಂದು ಇಲ್ಲವೆ ಹೆಚ್ಚಿನ ಸಂಖ್ಯೆಯ ವಸ್ತು ಮಸೂರುಗಳು, ಒಡ್ಡಿಕೆ ಅವಧಿಯನ್ನು ನಿಯಂತ್ರಿಸಲು ತೆರೆ ಕವಾಟ (ಷಟರ್), ಒಳಹೊಗುವ ಬೆಳಕನ್ನು ನಿಯಂತ್ರಿಸಲು ಪೊರೆ (ಡಯಾಫ್ರಮ್) ಮತ್ತು ವಸ್ತುವನ್ನು ದಿಟ್ಟಿಸಿ ನೋಡಲು ಮಸೂರದ ಮೂಲಕವೇ ಇರುವಂಥ ಇಲ್ಲವೆ ಪ್ರತ್ಯೇಕ ರೀತಿಯ ದೃಷ್ಟಿ ವ್ಯವಸ್ಥೆ (ವ್ಯೂಯಿಂಗ್ ಸಿಸ್ಟಮ್). ಆಧುನಿಕ ಕೆಮರಗಳಲ್ಲಿ ಲಭ್ಯಬೆಳಕಿನ ಪರಿಸ್ಥಿತಿಗಳಲ್ಲಿ ಇರಬೇಕಾದ ಪೊರೆಯ ಅಳತೆಯನ್ನೂ ತೆರೆ ಕವಾಟದ ವೇಗವನ್ನೂ ಸೂಚಿಸುವಂಥ ಎಕ್ಸ್‍ಪೋಷರ್ ಮೀಟರುಗಳನ್ನು ಅಳವಡಿಸಿರುತ್ತಾರೆ.
	ಅತ್ಯಂತ ಸರಳರೀತಿಯ ಕೆಮರ ಎಂದರೆ ಪೆಟ್ಟಿಗೆ ಮಾದರಿಯದು (ಚಿತ್ರ 10). ಪ್ರಾರಂಭದ ದಿವಸಗಳಲ್ಲಿ ಬ್ರೌನಿ ಎಂಬ ಹೆಸರಿನ ಪೆಟ್ಟಿಗೆ ಮಾದರಿಯ ಕೆಮರಗಳೇ ಬಹಳಷ್ಟು ಬಳಕೆಯಲ್ಲಿದ್ದುವು. ಬೇರೆ ಬೇರೆ ದೂರಗಳಲ್ಲಿರುವ ವಸ್ತುಗಳ ಸ್ಪಷ್ಟ ಬಿಂಬ ಮೂಡಿಸುವ (ಫೋಕಸ್) ಸಲುವಾಗಿ ತಿದಿ ಮಾದರಿಯ (ಬೆಲ್ಲೋಸ್) ಕೆಮೆರಗಳೂ (ಚಿತ್ರ 11) ಇದ್ದುವು. 

ಚಿತ್ರ-11

ಇದರಲ್ಲಿ ಸ್ಥಿರ ಅಳತೆಯ ಪೊರೆಯೂ ನಿರ್ದಿಷ್ಟ ವೇಗದಲ್ಲಿ ಚಲಿಸುವ ಪೊರೆಯೂ ಬದಲಾಯಿಸಲಾಗದ (ನಾನ್‍ಇಂಟರ್‍ಚೇಂಜಬಲ್) ವಸ್ತು ಮಸೂರಗಳೂ ಇರುತ್ತಿದ್ದುವು. ಈ ಮೂರು ವಿಷಯಗಳನ್ನು ಕುರಿತಂತೆ ಆಧುನಿಕ ಕೆಮರಗಳಲ್ಲಿ ವಿಶೇಷ ರೀತಿಯ ಕ್ರಿಯಾವಿನ್ಯಾಸಗಳೂ ಯಂತ್ರವಿನ್ಯಾಸಗಳೂ ಉಂಟಾಗಿವೆ. 

ಚಿತ್ರ-12

ಜೋಡಿಮಸೂರಗಳ ಪ್ರತಿಫಲನ ಮಾದರಿಯ ಕೆಮರ ಮತ್ತು ಏಕಮಸೂರ ಪ್ರತಿಫಲನ ಮಾದರಿಯ (ಟ್ವಿನ್ ಲೆನ್ಸ್ ರಿಫ್ಲೆಕ್ಸ್ ಮತ್ತು ಸಿಂಗಲ್ ಲೆನ್ಸ್ ರಿಫ್ಲೆಕ್ಸ್) ಕೆಮರಗಳು ಬಳಕೆಗೆ ಬಂದಿವೆ.
	ಜೋಡಿಮಸೂರಗಳ ಪ್ರತಿಫಲನ ಮಾದರಿಯ ಕೆಮರದಲ್ಲಿ (ಚಿತ್ರ 12) ತದ್ವತ್ತು ನಾಭೀ ದೂರದ (ಐಡೆಂಟಿಕಲ್ ಫೋಕಲ್ ಲೆನ್ಸ್) ಎರಡು ಮಸೂರ ಉಂಟು. ಕೆಮರದ ಕೆಳಭಾಗದಲ್ಲಿರುವ ಮಸೂರವ್ಯವಸ್ಥೆ ವಸ್ತುವಿನ ಬಿಂಬವನ್ನು ಫೋಟೋಗ್ರಫಿಕ್ ಫಿಲ್ಮಿನ ಮೇಲೆ ಪ್ರಕ್ಷೇಪಿಸುತ್ತದೆ. ಕೆಮರದ ಮೇಲುಭಾಗದಲ್ಲಿರುವ ಮಸೂರ ವ್ಯವಸ್ಥೆ ಹಾಗೂ ಕೆಮರದೊಳಗಿರುವ ಸಮತಳ ಕನ್ನಡಿ ದೃಷ್ಟಿಸುವ ತೆರೆಯ ಮಬ್ಬುಗಾಜಿನ ಫಲಕದ ಮೇಲೆ ಅದೇ ಬಿಂಬ ಪ್ರಕ್ಷೇಪಗೊಳ್ಳುವಂತೆ ಮಾಡುತ್ತವೆ. 

ಚಿತ್ರ-13

ಫಿಲ್ಮಿನ ಮೇಲೆಯೇ ನೇರವಾಗಿ ಸ್ಪಷ್ಟಬಿಂಬವನ್ನು ಮೂಡಿಸುವುದಿಲ್ಲ. ಏಕೆಂದರೆ ಬೆಳಕಿಗೆ ಒಡ್ಡಿದಾಗ ಫಿಲ್ಮ್ ಹಾಳಾಗುವ ಸಾಧ್ಯತೆ ಉಂಟು. ಮಸೂರಗಳ ಎರಡು ವ್ಯವಸ್ಥೆಗಳನ್ನೂ ಗಿಯರ್ ಜೋಡಣೆ ಯಂತ್ರ ವಿನ್ಯಾಸ ಕ್ರಮದಿಂದ ಅವು ಒಟ್ಟಿಗೇ ಚಲಿಸುವಂತೆ ಮಾಡಬಹುದು. ಮಬ್ಬು ಗಾಜಿನ ಮೇಲೆ ಸ್ಪಷ್ಟ ಬಿಂಬ ಮೂಡಿದ ಮೇಲೆ ತೆರೆಯನ್ನು ಸರಿಸಿದಾಗ ಸ್ಫುಟವಾಗಿ ಮೂಡಿದ ಬಿಂಬ ನೇರವಾಗಿ ಫಿಲ್ಮಿನ ಮೇಲೆ ಬೀಳುತ್ತದೆ.
	ಏಕಮಸೂರ ಪ್ರತಿಫಲನ ಮಾದರಿಯ ಕೆಮರದಲ್ಲಿ (ಚಿತ್ರ 13) ಫಿಲ್ಮ್ ಮತ್ತು ಏಕ ವಸ್ತುಮಸೂರ ವ್ಯವಸ್ಥೆಯ ನಡುವೆ ಒಂದು ಸಮತಳ ಕನ್ನಡಿ ಇರುತ್ತವೆ. ದೃಷ್ಟಿಸುವ ಸೌಲಭ್ಯ ವ್ಯವಸ್ಥೆ ಕೆಮರದಲ್ಲೇ ಅಡಕವಾಗಿರುತ್ತದೆ. ತೆರೆಕವಾಟವನ್ನು ಸರಿಸಿದಾಗ ಕನ್ನಡಿ ಮೇಲಕ್ಕೆ ಜಿಗಿದು ವಸ್ತುವಿನ ಬಿಂಬ ನೇರವಾಗಿ ಫಿಲ್ಮಿನ ಮೇಲೆ ಬೀಳುತ್ತದೆ. ವಸ್ತುವನ್ನು ವೀಕ್ಷಿಸಲು ಬಳಸುವ ಮಸೂರದ ಮೂಲಕವೇ ವಸ್ತುವಿನ ಸ್ಫುಟಬಿಂಬ ಮೂಡಿಸಿಕೊಳ್ಳುವುದೂ ಏಕಮಸೂರ ಪ್ರತಿಫಲನ ಮಾದರಿಯ ಕೆಮರದಲ್ಲಿ ಸಾಧ್ಯ. ಜೋಡಿ ಮಸೂರಗಳ ಪ್ರತಿಫಲನ ಮಾದರಿಯ ಕೆಮರದಲ್ಲಿ ಮೇಲುಭಾಗದ ಮಸೂರದ ಮೂಲಕ ವಸ್ತುವನ್ನು ವೀಕ್ಷಿಸುವುದೂ ಕೆಳಭಾಗದ ಮಸೂರದ ಮೂಲಕ ವಸ್ತುವಿನ ಸ್ಫುಟಬಿಂಬ ಮೂಡಿಸುವುದೂ ಸಾಧ್ಯ. ಹೀಗಾಗುವುದರಿಂದ ವಸ್ತುಮಸೂರ ಮೂಡಿಸುವ ನೈಜಬಿಂಬಕ್ಕೆ ಹೋಲಿಸಿದಾಗ ವಸ್ತುವಿನ ದೃಷ್ಟಿನೇರದಲ್ಲಿ ಕೊಂಚಮಟ್ಟಿನ ಸ್ಥಾನಪಲ್ಲಟ ಹೊಂದುತ್ತದೆ.
	ತೆರೆಕವಾಟ ಮತ್ತು ಪೊರೆಗಳು ಏಕಕಾಲದಲ್ಲಿ ನಿಷ್ಕ್ರಷ್ಟತೆಯಿಂದ ಕೆಲಸಮಾಡುವುದು ಕೆಮರದಲ್ಲಿಯ ಅವಶ್ಯ ಅಂಶಗಳ ಪೈಕಿ ಒಂದು. ಇದಲ್ಲದೆ ಕೆಮರದಲ್ಲಿಯ ಪ್ರಮುಖ ಅವಯವ ಎಂದರೆ ಮಸೂರ ವ್ಯವಸ್ಥೆಯೇ. ಅತ್ಯಧಿಕ ಗುಣಮಟ್ಟದ ಪ್ರಕಾಶೀಯ ಮಸೂರ ತನ್ನ ಅಂಚುಗಳಲ್ಲಿ ಹಾಗೂ ಕೇಂದ್ರಭಾಗದಲ್ಲಿ ಉತ್ತಮತೆರನ ವಿಘಟನ ಸಾಮಥ್ರ್ಯ ಪಡೆದಿರಬೇಕು. ಕಡಿಮೆ ಅವಧಿಯ ಅನಾವರಣದ (ಎಕ್ಸ್‍ಪೋಷರ್) ವೇಳೆಗಳಲ್ಲಿ ಸಾಕಷ್ಟು ಬೆಳಕು ಒಳಗೆ ಹೊಗಬಲ್ಲಂತೆ ಮಾಡುವ ದೀಪ್ತಿ ಸಾಮಥ್ರ್ಯ (ಲ್ಯೂಮಿನಾಸಿಟಿ) ಹೊಂದಿರಬೇಕು. ಅಲ್ಲದೆ ರೋಹಿತದ ಎಲ್ಲ ವರ್ಣಗಳಿಗೂ ಒಂದೇ ತೆರನ ಸಂವೇದನಶೀಲತೆ ಪ್ರದರ್ಶಿಸುವ ಗುಣವನ್ನು ಕೂಡ ಮಸೂರ ಹೊಂದಿರಬೇಕು. ತೆಳುಮಸೂರ ಅವಯವಗಳು ಇರುವ ಜೋಡಣೆ ಬಳಸಿ ವಿಘಟನೆ ಸಾಧಿಸಬಹುದು. ಮಸೂರಗಳ ಅಂಚು ಹಾಗೂ ಕೇಂದ್ರ ಭಾಗದಿಂದ ಬರುವ ಬೆಳಕಿನ ಕಿರಣಗಳನ್ನು ಮಸೂರ ವ್ಯವಸ್ಥೆಯ ಸಂಗಮಬಿಂದುವಿನಲ್ಲಿ ಸ್ಫುಟವಾಗಿ ಅಭಿಸರಿಸುವಂತೆ ಮಾಡಲು ಇಂಥ ಅವಯವಗಳ ನೆರವಾಗುತ್ತವೆ. ಕೆಲವೊಂದು ಸರಳ ಮಾದರಿಯ ಹಾಗೂ ಕಡಿಮೆ ಬೆಲೆಯ ಕೆಮರಗಳಲ್ಲಿ ಒಂದೇ ಒಂದು ಪೀನ ಮಸೂರ ಇರುತ್ತದೆಯಾಗಿ ಬಿಂಬವಿಕೃತಿ (ಡಿಸ್ಟಾರ್ಷನ್) ಉಂಟಾಗುವುದು ಸಹಜವೇ.
	ವಸ್ತುಮಸೂರ ವ್ಯವಸ್ಥೆಯ ಜಿ-ಸಂಖ್ಯೆಯನ್ನು ಆಧರಿಸಿ ದೀಪ್ತಿಯನ್ನು ಅಳೆಯುವುದಿದೆ. ಮಸೂರದ ವ್ಯಾಸ ಮತ್ತು ಅದರ ನಾಭೀದೂರ ಇವುಗಳ ನಿಷ್ಪತ್ತಿಯೇ ಮಸೂರದ ಜಿ-ಸಂಖ್ಯೆ. ಪೆಟ್ಟಿಗೆ ಮಾದರಿಯ ಸಾಧಾರಣ ಪ್ರರೂಪಿ ಕೆಮರದಲ್ಲಿ ಸಂಖ್ಯೆ 1:8 ಇದನ್ನು ಜಿ/8 ಎಂದು ಬರೆಯುವುದು ವಾಡಿಕೆ. ಏಕಮಸೂರ ಪ್ರತಿಫಲನ ಮಾದರಿಯ ಇಲ್ಲವೇ ಜೋಡಿಮಸೂರ ಪ್ರತಿಫಲನ ಮಾದರಿಯ ಕೆಮರಗಳ ಮಸೂರಗಳು ಕಡಿಮೆ ಬೆಲೆಯ ಜಿ-ಸಂಖ್ಯೆಯವು. 1:3.5, 1:2.8 ಮತ್ತು 1:1.4. ಇಂಥ ಮಸೂರಗಳಿಗೆ ಅಧಿಕ ದೀಪ್ತಿಮೌಲ್ಯಗಳಿರುತ್ತವಾಗಿ 1/1000 ಸೆಕೆಂಡಿನಷ್ಟು ಕಡಿಮೆ ಅವಧಿಯಲ್ಲಿ ಕೂಡ ಸ್ಫುಟವಾಗಿರುವಂಥ ಫೋಟೊಗ್ರಾಫುಗಳನ್ನು ಪಡೆಯುವುದು ಸಾಧ್ಯ.
	ರಾಸಾಯನಿಕದ ತೆಳು ತೇಪ ನೀಡಿರುವ ಮಸೂರಗಳನ್ನು ಬಳಸುವುದರಿಂದ ವರ್ಣೀಯ ತಿದ್ದುಪಡಿಯನ್ನು ಮಾಡಬಹುದು. ವರ್ಣೀಯ ವಿಪಥನಕ್ಕೆ (ಕ್ರೊಮ್ಯಾಟಿಕ್ ಅಬರೇಷನ್) ಸಂಬಂಧಿಸಿದ್ದು ಇದು. ವರ್ಣದ ಇಡೀ ರೋಹಿತದ ಉದ್ದಕ್ಕೂ ಸಂವೇದನಶೀಲತೆ ಉಂಟುಮಾಡುವುದಕ್ಕಾಗಿಯೇ ಈ ಲೇಪನ ನೀಡುವುದರ ಅಗತ್ಯವನ್ನು ಕಂಡುಕೊಂಡಿರುವುದು.
	(ii) ಪ್ರವರ್ಧಕ: ಇದು ಬಹುಪಾಲು ಕೆಮರವನ್ನೇ ಹೋಲುತ್ತದೆ. ಋಣಾತ್ಮಕದಿಂದ ಧನಾತ್ಮಕ ಚಿತ್ರ ತಯಾರುಮಾಡಿಕೊಳ್ಳಲು ಇದರ ಬಳಕೆ. ಚಿತ್ರ 14. ಋಣಾತ್ಮಕದ ತದ್ವತ್ ಗಾತ್ರದಷ್ಟೇ ಆಗಲಿ ಪ್ರವರ್ಧಿತ ಗಾತ್ರದಷ್ಟೇ ಆಗಲಿ ಚಿತ್ರಗಳನ್ನು ಇದರಿಂದ ಮುದ್ರಿಸಿಕೊಳ್ಳಬಹುದು.
	ಆಧಾರಮಣೆ ಮತ್ತು ದೃಢನಿಲವುಗಳಿಗೆ ಹೊಂದಿಸಿರುವ ಒಂದು ಬುರುಡೆ ಇದರ ಪ್ರಧಾನ ಭಾಗ. ಬುರುಡೆಯ ಒಳಗೆ ಬೆಳಕು ನೀಡುವ ಬಲ್ಬ್ ಉಂಟು. ಇದರ ಕೆಳಗೆ ಬೆಳಕಿನ ಕಿರಣಗಳನ್ನು ಸಾಂದ್ರಿಕರಿಸುವ ಎರಡು ಅರ್ಧ ಮಸೂರಗಳು (ಕಂಡೆನ್ಸರ್ಸ್) ಇವೆ. ಕೆಳಗೆ ಋಣಾತ್ಮಕವನ್ನು (ನೆಗೆಟಿವ್) ಆತುಕೊಳ್ಳುವಂಥ ವಾಹಕವ್ಯವಸ್ಥೆ (ಕ್ಯಾರಿಯರ್) ಉಂಟು. ಬಲ್ಬಿನಿಂದ ಹೊರಟ ಸಾಂದ್ರೀಕೃತ ಬೆಳಕು ಋಣಾತ್ಮಕದ ಮೇಲೆ ಬೀಳುತ್ತದೆ. ಅನಂತರ ತಿದಿಮಾದರಿಯ ಏರ್ಪಾಡಿನ ಕೆಳಗೆ ಅಳವಟ್ಟಿರುವ ಮಸೂರದ ಮೂಲಕ ಬೆಳಕು ಮುಂದುವರಿಯುತ್ತದೆ. ಕೆಮರದಲ್ಲಿ ನಡೆಯುವ ಕ್ರಿಯೆಗೆ ವ್ಯತಿರಿಕ್ತ ಕ್ರಿಯೆ ಇಲ್ಲಿ ನಡೆಯುವುದು. ಬೆಳಕಿಗೆ ಸಂವೇದನಶಿ0ೀಲವಾಗಿರುವ ಕಾಗದವನ್ನು ಆಧಾರಮಣೆಯ ಮೇಲಿಟ್ಟಿರುತ್ತಾರೆ. ಈ ಕಾಗದದ ಮೇಲೆ ಸ್ಫುಟಬಿಂಬವನ್ನು ಮೂಡಿಸಿಕೊಂಡು ಫೋಟೊಗ್ರಫಿಯ ಅನುಕ್ರಮ ಕ್ರಿಯೆಗಳಾದ ಪ್ರಸ್ಫುಟನ, ಸ್ಥಾಯೀಕರಣ, ತೊಳೆಯುವಿಕೆ, ಒಣಗಿಸುಮಿಕೆಗಳಿಂದ ವಸ್ತುವಿನ ಚಿತ್ರವನ್ನು (ಧನಾತ್ಮಕ) ಪಡೆಯಬಹುದು.
	ಕಪ್ಪು ಬಿಳುಪಿನ ಚಿತ್ರಗಳನ್ನು ಮುದ್ರಿಸಲು ಇರುವಂತೆಯೇ ವರ್ಣ ಚಿತ್ರಗಳನ್ನು ಮುದ್ರಿಸಲೂ ವಿಶೀಷ ಪ್ರವರ್ಧಕಗಳುಂಟು, ವರ್ಣಚಿತ್ರವನ್ನು ಮುದ್ರಿಸುವಾಗ ಸಂಸ್ಕರಣೆಯ ಪ್ರಕ್ರಮದಲ್ಲಿ ತುಸು ಬದಲಾವಣೆಗಳಿರುತ್ತವೆ. 

ಚಿತ್ರ-14

ವರ್ಣಗಳಿಗೆ ಅನುಗುಣವಾಗಿ ಯುಕ್ತ ಸೋಸುಕಗಳ (ಫಿಲ್ಟರ್ಸ್) ಬಳಕೆ ಇಲ್ಲಿ ಬಲು ಮುಖ್ಯ. ಪ್ರವರ್ಧನೆಯ ಕೆಲಸ ಪ್ರಸ್ಫುಟನೆಯ ಕೆಲಸದಂತೆ ಕತ್ತಲು ಕೋಣೆಯಲ್ಲಿ ನಡೆಯಬೇಕಾದ ಕ್ರಿಯೆ.
	(iii) ಎಕ್ಸ್‍ಫೋಷರ್‍ಮಾಪಕ: ವಿದ್ಯುಚ್ಛಕ್ತಿಯನ್ನು ದ್ಯುತಿಶಕ್ತಿಯಾಗಿ ಮಾರ್ಪಡಿಸುವ ಸಾಧನ ಇದು. (ಚಿತ್ರ 15.) ವಸ್ತುವೊಂದರ ಸುತ್ತ ಇರುವ ಬೆಳಕಿನ ಮೊತ್ತವನ್ನು ತಿಳಿಸಿಕೊಟ್ಟು ಕೆಮರದಲ್ಲಿ ಯುಕ್ತ ಅನಾವರಣ ಸಂಬಂಧಿಸಜ್ಜಿಕೆಗಳನ್ನು ಮಾಡಿಕೊಳ್ಳಲು ಅನುವುಮಾಡಿಕೊಡುತ್ತದೆ. ಎಕ್ಸ್‍ಪೋಷರ್ ಮಾಪಕದಲ್ಲಿ ಎರಡು ಭಾಗಗಳಿವೆ. ಜೇನುಗೂಡಿನ ಆಕಾರದ ಮಸೂರ ಒಂದು; ದ್ಯುತಿವಿದ್ಯುತ್ಕೋಶ ಇನ್ನೊಂದು. ಬೆಳಕು ಮಸೂರದ ಮೂಲಕ ಕೋಶವನ್ನು ಪ್ರವೇಶಿಸುತ್ತದೆ. ಕಬ್ಬಿಣದ ಫಲಕವನ್ನು ಸೆಲೆನಿಯಮ್ ಧಾತುವಿನಿಂದ ಲೇಪಿಸಿ ಇದರ ಮೇಲೆ ಪ್ಲಾಟಿನಮ್ಮಿನ ತೆಳು ಪದರವನ್ನು ಹೊದ್ದಿಸಿರುತ್ತಾರೆ. ಬೆಳಕು ವಿದ್ಯುತ್ಕೋಶವನ್ನು ಬಡಿದಾಗ ಸೆಲೆನಿಯಮಿನಿಂದ ಎಲೆಕ್ಟ್ರಾನುಗಳು ಹೊರದೂಡಲ್ಪಡುತ್ತವೆ. ವಿದ್ಯುನ್ಮಂಡಲಕ್ಕೆ ಸಂಪರ್ಕಿಸಿರುವ ಪ್ಲಾಟಿನಮ್ಮಿನ ಮೂಲಕ ಆಗ ವಿದ್ಯುತ್ಪ್ರವಾಹ ಹರಿಯುತ್ತದೆ. ಪತನಬೆಳಕಿನ ಪರಿಮಾಣ ಹೆಚ್ಚಾದಂತೆಲ್ಲ ಉತ್ಪಾದನೆಯಾಗುವ ವಿದ್ಯುತ್ಪ್ರವಾಹದಲ್ಲೂ ಹೆಚ್ಚಳ ಇರುತ್ತದೆ. ಈ ಸಲಕರಣೆಗೆ ವಿದ್ಯುತ್ತನ್ನು ಅಳೆಯುವ ಜಿ-ಸಂಖ್ಯೆಗಳಲ್ಲಿ ಅಂಶಾಂಕಿಸಿದ ಮಾಪಕವೊಂದನ್ನು ಅಳವಡಿಸಿರುವುದರಿಂದ ಅಗತ್ಯವಿರುವ ಅನಾವರಣ ಸಂಬಂಧಿ ವಿಚಾರಗಳನ್ನು ಕುರಿತ ಮಾಹಿತಿ ಒಡನೆಯೇ ಲಭ್ಯವಾಗುತ್ತದೆ.
	ಎಕ್ಸ್‍ಪೋಷರ್‍ಮಾಪಕಗಳನ್ನು ಪ್ರತ್ಯೇಕವಾಗಿ ಬೇಕಾದರೂ ಒಯ್ಯಬಹುದು. ಸ್ವಯಂಚಲಿ ಅನಾವರಣಕ್ರಿಯೆಗಳನ್ನು ನಡೆಸುವ ಕೆಮರಗಳಲ್ಲಿ ಇಂಥ ಮಾಪಕಗಳನ್ನು ಅಂತಸ್ಥಗೊಳಿಸಿರುವುದೂ (ಬೆಲ್ಟ್‍ಇನ್) ಉಂಟು. ಕೆಮರವನ್ನು ವಸ್ತುವಿನ ಎಡೆ ನಿರ್ದೇಶಿಸಿದಾಗ ಇದರಿಂದ ಪ್ರತಿಫಲನಗೊಳ್ಳುವ ಬೆಳಕು ಜೇನುಗೂಡು ಮಸೂರದ ಮೇಲೆ ಬಿದ್ದು ಅನಂತರ ದ್ಯುತಿವಿದ್ಯುತ್ಕೋಶವನ್ನು ಪ್ರವೇಶಿಸುತ್ತದೆ. ವಿದ್ಯುನ್ಮಾಪಕದ ಮುಳ್ಳನ್ನು ಕೆಮರದ ಪೊರೆ ಮತ್ತು ಇಲ್ಲವೆ ಅನಾವರಣವೇಳೆ ಉಂಗುರಗಳಿಗೆ (ಎಕ್ಸ್‍ಪೋಷರ್‍ಟೈಮ್ ರಿಂಗ್ಸ್) ಪೊರ್ದಿಸಿಲಾಗಿರುತ್ತದೆ. 

ಚಿತ್ರ-15

ಕೆಲವೊಂದು ಕೆಮರಗಳಲ್ಲಿ ಪೊರೆಕಿಂಡಿಯಾಗಲಿ ತೆರೆಕವಾಟದ ವೇಗವಾಗಲಿ ಸ್ವಯಂ ಚಲಿಯಾಗಿ ಅಳವಡುವುದಿದೆ. ಕೆಮರವನ್ನು ಬಳಸುವಾತನ ಆಯ್ಕೆ ಯಾವುದು ಎನ್ನುವುದು ಇದು ಅವಲಂಬಿಸಿದೆ. ಸಂಪೂರ್ಣವಾಗಿ ಸ್ವಯಂಚಲಿ ಕಾರ್ಯವೆಸಗುವ ಕೆಮರಗಳಲ್ಲಿ ಈ ಕ್ರಿಯೆಗಳು ಸ್ವಯಂಚಲಿಯಾಗಿಯೇ ಜರಗುತ್ತವೆ.
	(iv) ಮಸೂರಗಳು: ಕೆಮರದ ಅತ್ಯಂತ ಪ್ರಮುಖ ಅಂಗಭಾಗವೇ ಮಸೂರ. ವಸ್ತುವಿನ ಬಿಂಬಗಳನ್ನು ಮೂಡಿಸುವ ಕೆಲಸ ಇದರದು. ಬಿಂಬದ ಗಾತ್ರ, ಸ್ಫುಟತೆ ಇತ್ಯಾದಿಗಳ ವಿಚಾರದಲ್ಲಿ ಮಸೂರದ ಪಾತ್ರ ಹಿರಿದು.
	ಫೋಟೊಗ್ರಫಿಕ್ ಮಸೂರಗಳನ್ನು ಸಾಮಾನ್ಯವಾಗಿ ಮೂರು ಬಗೆಯಾಗಿ ವಿಂಗಡಿಸುವುದಿದೆ. ಪ್ರಸಾಮಾನ್ಯ (ನಾರ್ಮಲ್) ನಾಭೀದೂರದ್ದು; ವಿಶಾಲ ಕೋನದ್ದು (ವೈಡ್ ಆ್ಯಂಗಲ್), ದೀರ್ಘ ನಾಭೀದೂರದ್ದು (ಲಾಂಗ್ ಫೋಕಸ್). ನಿರ್ದಿಷ್ಟ ನಾಭೀದೂರ ಇರುವ ಮಸೂರದ ವಿವರಗಳನ್ನು ಆಯಾ ಕೆಮರದ ಗಾತ್ರದ ನಮೂನೆಯ (ಋಣಾತ್ಮಕದ ಅಳತೆ) ಮೇಲೆ ನಮೂದಿಸಿರುತ್ತಾರೆ.
	ಕೆಮರ ನಮೂನೆಯ ಕರ್ಣದ (ಡಯಾಗೊನಲ್) ಅಳತೆಗೆ ಸನ್ನಿಕಟವಾಗಿ ಸಮವಾಗಿರುವ ನಾಭೀದೂರವಿರುವ ಮಸೂರವೇ ಪ್ರಸಾಮಾನ್ಯ ಬಗೆಯದು. ಉದಾಹರಣೆಗೆ 6 ಛಿm ಚಚ್ಚಾಕಾಕಾರದ ನೆಗೆಟಿವ್‍ನ ಕರ್ಣ ಸನ್ನಿಕಟವಾಗಿ 80 mm ಇರುತ್ತದೆ. ಅಂದ ಮೇಲೆ ಇದಕ್ಕೆ ಸಂಬಂಧಿಸಿದ ಪ್ರಸಾಮಾನ್ಯ ಮಸೂರದ ನಾಭೀದೂರ 80 mm ಎಂದಾಯಿತು. ಈ ಅಳತೆಗೆ ಕಡಿಮೆ ಇರುವ (ನೆಗೆಟಿವ್ ಗಾತ್ರಕ್ಕೆ ಅನುಗುಣವಾಗಿ) ಯಾವುದೇ ಮಸೂರ ವಿಶಾಲ ಕೋನದ್ದು, ಹೆಚ್ಚಾಗಿರುವಂಥದು ದೀರ್ಘ ನಾಭೀದೂರದ್ದು.
	ಕೆಮರದ ನಮೂನೆ ಬದಲಾವಣೆಗೊಂಡಂತೆ, ಉದಾಹರಣೆಗೆ 35mm ಸಂಬಂಧದಲ್ಲಿ 80 mm ನಾಭೀದೂರದ ಮಸೂರವನ್ನು ದೀರ್ಘ ನಾಭೀದೂರದ ಮಸೂರವೆಂದೂ 50-55mm ಅಳತೆಯನ್ನು ಪ್ರಸಾಮಾನ್ಯ ಬಗೆಯದೆಂದೂ 28-35 mm ಅಳತೆಯದನ್ನು ವಿಶಾಲಕೋನ ಬಗೆಯದೆಂದೇ ಹೇಳಲಾಗುತ್ತದೆ.
	ಪ್ರಸಾಮಾನ್ಯ, ವಿಶಾಲಕೋನ ಮತ್ತು ದೀರ್ಘ ನಾಭೀದೂರದ ಮಸೂರಗಳ ನಡುವೆ ಇರುವ ಮತ್ತೊಂದು ಅಂಶ ಎಂದರೆ ದೃಷ್ಟಿಕೋನ (ಆ್ಯಂಗಲ್ ಆಫ್ ವ್ಯೂ). ಕೆಮರದ ನಮೂನೆ ಯಾವುದೇ ಆಗಿರಲಿ, ನಿಜ ವಿಶಾಲ ಕೋನದ ಮಸೂರಕ್ಕೆ 70( ಗೂ ಮಿಕ್ಕಿದ ದೃಷ್ಟಿಯಕೋನವಿರಬೇಕಾದ್ದು ಸಹಜ. ಪ್ರಸಾಮಾನ್ಯ ಮಸೂರಕ್ಕೆ 45ಲಿ-55( ವರೆಗೆ; ದೀರ್ಘ ನಾಭೀದೂರದ ಸಾಮಾನ್ಯವಾಗಿ 35(.
	ವಿಶಾಲ ಕೋನ ಮಸೂರ ಇತರ ಎರಡು ಬಗೆಯ ಮಸೂರಗಳಿಗೆ ಹೋಲಿಸಿದಾಗ ಚಿಕ್ಕದಾದ ಹಾಗೂ ಗರಿಷ್ಠದ ಕಿಂಡಿ (ಅಪರ್ಚೆರ್) ಇರುತ್ತದೆ. ನೆಗೆಟಿವ್ ಕರ್ಣಕ್ಕಿಂತ ಕಡಿಮೆ ನಾಭೀದೂರವುಳ್ಳದ್ದು ಇದು. ಈ ಮಸೂರ ದೃಷ್ಟಿವ್ಯಾಪ್ತಿಯ ಅಂಚಿನತ್ತ ಉರುಳ ಆಕಾರದ ವಸ್ತುಗಳು ಸೊಟ್ಟ ಕಾಣುವಂತೆ ಮಾಡಬಹುದು. ಬಹಳ ದೊಡ್ಡಗಾತ್ರದ ವಸ್ತುಗಳನ್ನು, ಸೀಮಿತ ಸ್ಥಳಾವಕಾಶ ಇರುವೆಡೆಗಳಲ್ಲಿ ಚಿತ್ರೀಕರಿಸಲು ಇಂಥ ಮಸೂರಗಳನ್ನು ಬಳಸುತ್ತಾರೆ. ಪತ್ರಿಕೋದ್ಯಮ ಫೋಟೊಗ್ರಫಿಯಲ್ಲಿ ಕೂಡ ಈ ಮಸೂರಗಳ ಬಳಕೆ ಉಂಟು.
	ಬಲು ದೂರದಿಂದಲೇ ವಸ್ತುಗಳನ್ನು ವೀಕ್ಷಿಸಿ ಚಿತ್ರತೆಗೆಯುವಲ್ಲಿ ದೀರ್ಘನಾಭೀ ದೂರವಿರುವ ಮಸೂರಗಳ ಬಳಕೆ ಇದೆ. ಇದಲ್ಲದೆ ವಸ್ತುಗಳನ್ನು ಅವುಗಳಿಗೆ ಬಾಧೆಪಡಿಸದ ಹಾಗೆ ಹತ್ತಿರದಿಂದಲೂ ಚಿತ್ರೀಕರಿಸಬಹುದು. ಇಂಥವನ್ನು ಪತ್ರಿಕೋದ್ಯಮಿಗಳು ವ್ಯಕ್ತಿಗಳ ಭಾವಚಿತ್ರ ತೆಗೆಯಲು ಉಪಯೋಗಿಸುತ್ತಾರೆ. ವನ್ಯಜೀವಿ ಚಿತ್ರಗಳಲ್ಲೂ ಕ್ರೀಡೆಗಳನ್ನು ಚಿತ್ರೀಕರಿಸುವಲ್ಲೂ ಇಂಥ ಮಸೂರಗಳ ಬಳಕೆ ಉಂಟು. ಇವುಗಳ ಪರಿಮಿತ ದೃಷ್ಟಿ ಕೋನದಿಂದಾಗಿ ಬಲುದೂರದಿಂದಲೇ ಇವನ್ನು ಬಳಸಬೇಕಾಗುತ್ತದೆ. ತೌಲನಿಕವಾಗಿ ಹೇಳುವುದಾದರೆ ಇಂಥ ಮಸೂರಗಳು ಉಂಟುಮಾಡುವ ಸ್ಫುಟತೆಯ ವಲಯ (ಜೋನ್ ಆಫ್ ಷಾರ್ಪ್‍ನೆಸ್; ಡೆಪ್ತ್ ಆಫ್ ಫೀಲ್ಡ್) ಪರಿಮಿತವಾಗಿರುತ್ತದೆ.
	ಟೆಲಿಫೋಟೊ ಮಸೂರದ ನಾಭೀದೂರ ನೆಗೆಟಿವ್‍ನ ಕರ್ಣಕ್ಕಿಂತಲೂ ಹೆಚ್ಚಾಗಿರುತ್ತದೆ. ದೀರ್ಘ ನಾಭೀದೂರದ ಮಸೂರಗಳ ಒಂದು ಪ್ರರೂಪ ಇದು. ಇಂಥ ಮಸೂರಗಳಿಗೆ ಕಿರಿದಾದ ದೃಷ್ಟಿನೆಲೆ ಇರುತ್ತದೆ. ಪ್ರಸಾಮಾನ್ಯ ಮಸೂರದ ಮೂಲಕ ನೋಡಿದಾಗ ಕಾಣುವುದಕ್ಕಿಂತ ದೊಡ್ಡದಾಗಿ ವಸ್ತು ಕಾಣುತ್ತದೆ. ಇವು ಉಂಟುಮಾಡುವ ಸ್ಫುಟತೆಯ ವಲಯ ಬಲು ತೆಟ್ಟೆಯಾಗಿರುತ್ತದೆ. ಸಾಮಾನ್ಯವಾಗಿ 85mm ನಿಂದ 1000mm ವರೆಗಿರುವಂಥ, ಕೆಲವೊಂದು ಸಂದರ್ಭಗಳಲ್ಲಿ 2000mm ನಾಭೀದೂರದ ಟೆಲಿಫೋಟೊ ಮಸೂರಗಳು ಇರುತ್ತವೆ.
	ಚರನಾಭೀದೂರಗಳಿರುವ ಮಸೂರ ವ್ಯವಸ್ಥೆಯೇ ಜೂಮರ್ ಮಸೂರ. ಹೃಸ್ವವಾಗಿ ಜೂಮ್ ಮಸೂರ ಎಂದು ಕರೆಯುವುದು ವಾಡಿಕೆ. ಕೆಮರವನ್ನು ಬದಲಾಯಿಸದೆ ವಸ್ತುದೂರವನ್ನು ಬಲ ಬೇಗ ಬದಲಾಯಿಸಿಕೊಳ್ಳಲು ಅವಕಾಶವಿದೆ. ಒಂದೇ ಜೋಡಣೆಯಲ್ಲಿ ಅನೇಕ ಟೆಲಿಫೋಟೊ ಮಸೂರಗಳು ಇರುವ ಸೌಕರ್ಯ ಜೂಮ್ ಮಸೂರದಲ್ಲಿದೆ. 80mm ನಿಂದ 280mm ವರೆಗಿನ ಜೂಮ್ ಮಸೂರಗಳಿವೆ. ಇತ್ತೀಚೇಗೆ 35mm ನಿಂದ 100mm ವರೆಗಿನ ಜೂಮ್ ಮಸೂರಗಳೂ ಬಂದಿವೆ. ಈ ಬಗೆಯ ಜೂಮ್ ಮಸೂರದಲ್ಲಿ ವಿಶಾಲಕೋನದ, ಪ್ರಸಾಮಾನ್ಯ ಬಗೆಯ ಹಾಗೂ ಟೆಲಿಮಸೂರದ ಸೌಕರ್ಯಗಳಿವೆ.
	ಮ್ಯಾಕ್ರೊ ಮಸೂರ. ಇದಕ್ಕೆ ಪ್ರಸಾಮನ್ಯ ಮಸೂರ ಇರುವಷ್ಟೇ ನಾಭೀದೂರವಿರುವುದಾದರೂ ಕೆಲವು ವಿಶೇಷತೆಗಳಿವೆ. ಅನಂತ ದೂರದಿಂದ ಹಿಡಿದು (ಅನಂತ ಎಂದರೆ ಆಯಾ ಮಸೂರಗಳಿಗೆ ನಿಗದಿಪಡಿಸಿರುವಂಥ ನಿರ್ದಿಷ್ಟ ಗರಿಷ್ಟ ದೂರ) ವಸ್ತುವಿನಿಂದ 75mm ದೂರದಿಂದಾದರೂ ಚಿತ್ರತೆಗೆಯುವ ಅನುಕೂಲತೆಗಳು ಇವಕ್ಕೆ ಇವೆ. ಕ್ರಿಮಿ, ಕೀಟಗಳಂಥ ತೀರ ಸಣ್ಣನೆಯ ಪ್ರಾಣಿಗಳನ್ನೊ ಸಸ್ಯಗಳ ಕಿರಿಭಾಗಗಳನ್ನೊ ತೆಗೆಯಲು ಇಂಥ ಮಸೂರಗಳ ಬಳಕೆ ಇದೆ.
	(v) ಇತರ ಸಲಕರಣೆಗಳು: ಫೋಟೋಗ್ರಫಿಯಲ್ಲಿ ಬಳಸುವ ಇತರ ಸಲಕರಣೆಗಳೆಂದರೆ ಸೋಸುಕಗಳು (ಫಿಲ್ಟರ್ಸ್). ನಿಲವುಗಳು (ಸ್ಟ್ಯಾಂಡ್ಸ್), ಪ್ರತಿಫಲನಕಾರಿಗಳು (ರಿಪ್ಲೆಕ್ಟರ್ಸ್), ಅಧಿಕ ದೀಪ್ತಿದಾಯಕ ದೀಪಗಳು (ಫ್ಲಡ್‍ಲೈಟ್ಸ್), ಮಿಂಚು ಬೆಳಕು (ಫ್ಲಾಷ್ ಲೈಟ್) ಮುಂತಾದವು. ಕತ್ತಲ ಕೋಣೆಯಲ್ಲಿ ಚಿತ್ರಗಳನ್ನು ಪ್ರಕ್ರಮಗೊಳಿಸುವಲ್ಲಿ ತೊಟ್ಟಿಗಳು, ಆಯಾಕಾರದ ಗಂಗಳಗಳು, ಕತ್ತರಿಸುವ ಸಾಧನಗಳು, ಕಾಸುವ ಸಾಧನಗಳು, ಒಣಗಿಸುವ ಪೆಟ್ಟಿಗೆಗಳು, ಹಿಂಡುವ ಉಪಕರಣ (ಸ್ಕ್ವೀಜರ್), ಕೆಂಪುದೀಪ, ಹಸಿರು ದೀಪ, ವಿವಿಧ ರಾಸಾಯನಿಕ ದ್ರಾವಣಗಳು ಇತ್ಯಾದಿಗಳ ಬಳಕೆ ಇದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ